ಹೆಚ್ಚಿನ

ಹೆಂಗಸರು ತುಂಬಾ ಇಷ್ಟ ಪಟ್ಟು ಉಡುವ ಸೀರೆ ಉಡುಗೆ ಮೊಟ್ಟಮೊದಲು ಹೇಗೆ ಬಂತು ಇನ್ನು ಅನೇಕ ಆಶ್ಚರ್ಯಕರ ಮಾಹಿತಿಗಳು ತಿಳ್ಕೊಳ್ಳಿ

ನಮ್ಮ ಭಾರತೀಯ ನಾರಿಯರ ಸಾಂಪ್ರಾದಾಯಿಕ ಉಡುಗೆ ಸೀರೆ. ಈ ಸೀರೆ ಎಲ್ಲಿಂದ ಬಂತು ? ಹೇಗೆ ಬೆಳವಣಿಗೆಯಾಯ್ತು ಎಂದು ನಿಮಗೆ ಗೊತ್ತಾ ?

ಸೀರೆ ಪ್ರಪಂಚದ ಅತ್ಯಂತ ಹಳೆಯ ಉಡುಗೆಯಾಗಿದೆ.ಭಾರತಕ್ಕೆ ಕಾಟನ್ ಮತ್ತು ನೇಯ್ಗೆ ಸೀರೆ ಬಂದಿರುವುದು ಮೆಸಪೋಟಾನಿಯಂನ ನಾಗರಿಕತೆಯ ಕಾಲದಲ್ಲಿ. ಆ ಸಂದರ್ಭದಲ್ಲಿ ಮಹಿಳೆಯರು ಮತ್ತು ಪುರುಷರು ಇಬ್ಬರೂ ಸಹ ಸೀರೆಯನ್ನು ಉಡುತ್ತಿದ್ದರಂತೆ. ಪುರುಷರು ಕಚ್ಚೆ ಪಂಚೆಯ ರೀತಿಯ ರೂಪದಲ್ಲಿ ಇದನ್ನು ಧರಿಸುತ್ತಿದ್ದರೆ. ಮಹಿಳೆಯರು ವಿಭಿನ್ನ ರೀತಿಯಲ್ಲಿ ಇದನ್ನು ಧರಿಸುತ್ತಿದ್ದರು. ಆದರೆ ಇವರು ಮೇಲಿನ ಭಾಗದಲ್ಲಿ ಏನು ಧರಿಸುತ್ತಿರಲಿಲ್ಲವಂತೆ. ಇದು ಕೇವಲ ಮೆಸಪೊಟಾನಿಯ0ನ್ ನಾಗರೀಕತೆಯಲ್ಲಿ ಮಾತ್ರವಲ್ಲ, ಈಜಿಪ್ಟ್, ಸುಮೀರ್,ಎರಿಶ್ಯಾ ಕಣಿವೆಗಳಲ್ಲಿಯೂ ಸಾಮಾನ್ಯವಾಗಿತ್ತು.

 

ನಂತರ ಭಾರತಕ್ಕೆ ಬಂದಂತಹ ಆರ್ಯರನ್ನು ವಸ್ತ್ರ ಎಂಬ ಶಬ್ದವನ್ನು ಮೊದಲ ಬಾರಿಗೆ ರೂಡಿಗೆ ತಂದರು. ಇವರು ಚರ್ಮದಿಂದ ಮಾಡಿದ ಬಟ್ಟೆಯನ್ನು ಧರಿಸುತ್ತಿದ್ದರು. ಇದೇ ರೀತಿ ಇವರು ಚಳಿ ಪ್ರದೇಶದಲ್ಲಿ ಇರುವುದರಿಂದ ಹುಣ್ಣೆಯ ಬಟ್ಟೆಗಳನ್ನು ಕೂಡ ಧರಿಸುತ್ತಿದ್ದರು. ಇವರು ದಕ್ಷಿಣಕ್ಕೆ ಬಂದಂತೆ ಕಾಟನ್ ಬಟ್ಟೆಗಳನ್ನು ಧರಿಸಲು ಆರಂಭಿಸಿದರು. ಮಹಿಳೆಯರು ಸಹ ಇದನ್ನೇ ಧರಿಸುತ್ತಿದ್ದರು.

 

 

ಸಿಂಧು ಕಣಿವೆ ನಾಗರಿಕತೆಯ ಕಾಲದಲ್ಲಿ ವಿಭಿನ್ನತೆ ಆರಂಭವಾಯಿತು .
ಅಲ್ಲಿನ ಮಹಿಳೆಯರು ಕೆಳಗಡೆ ಹತ್ತಿ ಬಟ್ಟೆ ಧರಿಸಿ,ಮೇಲಿನ ಭಾಗಕ್ಕೆ ಕಂಚುಕಿ ಎಂಬ ಬಟ್ಟೆಯ ದಿರಿಸನ್ನು ಧರಿಸಲು ಆರಂಭಿಸಿದರು. ಇದು ಚೋಲಿ ಡ್ರೆಸ್ ನ ಆರಂಭವಾಗಿದೆ. ನಂತರ ನಿಧಾನವಾಗಿ ಸೀರೆಯ ಒಂದೊಂದು ಟ್ರೆ0ಡ್ ಗಳು ಆರಂಭವಾದವು.

 

 

ನೆವಿ ಸೆಲ್ಕ್, ಪಿತಾಂಬರ್, ಪರ್ಪಲ್ ಸಿಲ್ಕ್, ಶಾಲ್ ಎಂದು ಕರೆಯಲ್ಪಡುವ ಪಟೋಲಾ ಮುಖ್ಯವಾದ ವಸ್ತ್ರಗಳಾದವು. ನಿವಿ ಮತ್ತು ಕಂಚುಕಿ ಆ ಕಾಲದ ಮಹಿಳೆಯರ ಪ್ರಮುಖ ಡ್ರೆಸ್ ಗಳಲ್ಲಿ ಓ0ದಾಗಿ ಮಾರ್ಪಾಡು ಹೊಂದಿದ್ದವು. ಇವರು ತಮ್ಮ ವಸ್ತ್ರಗಳಿಗೆ ತರಕಾರಿಗಳ ಬಣ್ಣದಿಂದ ಡಿಸೈನ್ ಮಾಡುತ್ತಿದ್ದರು. ಶ್ರೀಮಂತ ವ್ಯಕ್ತಿಗಳು ಫ್ಯಾನ್ಸಿ ಸೀರೆಗಳನ್ನು ದರಿಸುತ್ತಿದ್ದರು. ಅದಕ್ಕೆ ಆಭರಣಗಳಿಂದ ಸಿಂಗರಿಸುತ್ತಿದ್ದರು. ಪಟ್ಟು ಸಿಲ್ಕ್ ಎಂಬ ಹೆಸರು ಕೂಡ ಆ ಕಾಲದಲ್ಲಿಯೇ ಆರಂಭವಾಯಿತು. ಅದು ಇಂದಿಗೂ ಕೂಡ ಮುಂದುವರೆದುಕೊಂಡು ಬಂದಿದೆ. ತಮಿಳು, ತೆಲುಗು, ಕನ್ನಡದಲ್ಲೂ ಇದನ್ನು ಪಟ್ಟು ಎಂದು ಕರೆಯಲಾಗತ್ತದೆ.

 

 

ನಂತರ ಮಹಿಳೆಯರು ಸೀರೆಯನ್ನು ನಿಧಾನವಾಗಿ ಮೂರು ಭಾಗಗಳಾಗಿ ವಿಂಘಡಿಸಿ, ಧರಿಸಲು ಆರಂಭಿಸಿದರು. ಕೆಳಗಿನ ಭಾಗವನ್ನು ಸೊಂಟದವರೆಗೆ ನೆವಿ ಬಟ್ಟೆಯಿಂದ ಸುತ್ತಲಾಗುತ್ತಿತ್ತು. ಎದೆಯ ಭಾಗವನ್ನು ಕುಂಚಿಕಿಯಿಂದ ಕವರ್ ಮಾಡುತ್ತಿದ್ದರು. ನಂತರ ಶಾಲನಿಂದ ಕವರ್ ಮಾಡುತ್ತಿದ್ದರು. ಇದನ್ನು ಉತ್ತರೀಯ ಎಂದು ಕರೆಯಲಾಗುತ್ತಿತ್ತು. ಕ0ಚುಕಿಯನ್ನು ಮುಚ್ಚಲು ಶಾಲ್ ಬಳಕೆ ಮಾಡುತ್ತಿದ್ದರು.

 

ಪುರಾಣದಲ್ಲಿ ಮಹಿಳೆಯರು ತಲೆಯನ್ನು ಕವರ್ ಮಾಡುವ ಸಂಪ್ರದಾಯ ಇರಲಿಲ್ಲ. ಕೇವಲ ಹೇರ್ ಸ್ಟೈಲನ್ನು ಸುಂದರವಾಗಿಸಲು ಮಾತ್ರ ಅವರು ಶಾಲ್ ಹಾಕುತ್ತಿದ್ದರು.ನಂತರ ವಿಕಚ ಎಂಬ ಸ್ಟೈಲನ್ನು ಅನುಸರಿಸಿಕೊಂಡು ಬಂದರು. ಅದರಲ್ಲಿ ಹೊಟ್ಟೆಯ ಕೆಳಭಾಗಕ್ಕೆ ಸುತ್ತಲು ನೆವಿ ಬಟ್ಟೆಯನ್ನು ಸುತ್ತಿ, ನೆರಿಗೆ ತೆಗೆದುಕೊಂಡು ,ಅದನ್ನು ಹಿಂದಿನಿಂದ ಮುಂದಕ್ಕೆ ತರಲಾಯಿತು . ಇದನ್ನು ಕಚ್ಚೆ ಎಂದು ಕೂಡ ಕರೆಯಲಾಯಿತು.

 

 

ಅದಾದ ನಂತರ ಲಾಲ್ ಕುರ್ತಾದ ಮೇಲೆ ಸೀರೆ ಅಲಂಕಾರ ಮಾಡಿದ ರವಿಕೆಗಳನ್ನು (ಬ್ಲೌಸ್ ) ಧರಿಸಲಾಗುತ್ತಿತ್ತು. ಅದೇ ರೀತಿ ಸೀರೆಯಲ್ಲಿ ಸಹ ಬದಲಾವಣೆಗಳು ಕ0ದುಬಂದವು.ಎಂಬ್ರಾಯಡ್ರೀ, ಪಟ್ಟು ಸೀರೆ ಮೊದಲಾದ ಸೀರೆಗಳು ಆರಂಭವಾದವು. ಅದರಲ್ಲೂ ಸಹ ಮಹಿಳೆಯರಿಗಾಗಿ ಸೀರೆಗಳು ಪ್ರತ್ಯೇಕವಾಗಿ ತಯಾರು ಮಾಡಲಾಯಿತು.

ತದನಂತರ ಏನೆಲ್ಲಾ ವಿಶೇಷ ರೀತಿಯ ಸೀರೆಗಳು ಬಂದು ಹೋದವು ಅಂತ ನಿಮಗೆ ಗೊತ್ತೇ ಇದೆ. ಸೀರೆಯು ಇದೀಗ ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ್ , ಬರ್ಮಾ ಮತ್ತು ಮಲೇಷ್ಯಾದಲ್ಲೂ ಕೂಡ ಜನಪ್ರಿಯವಾಗಿವೆ. ಸೀರೆಯ ಸಂಪ್ರದಾಯವನ್ನು ಇನ್ನೂ ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬಂದಂತಹ ದೇಶ ನಮ್ಮ ಈ ಭಾರತ.

 

 

ಭಾರತದ ಒಂದೊಂದು ರಾಜ್ಯದಲ್ಲೂ ನಾವು ಬೇರೆ ಬೇರೆ ವಿಧವಾಗಿ ಸೀರೆಗಳನ್ನು ತೊಡುವುದನ್ನು ನಾವು ಕಾಣಬಹುದು. ದೇಶದ ಆತ್ಯಂತ ಉತ್ತಮ ಸೀರೆಗಳು ಯಾವುದು ? ಅಂತ ಹೇಳಿದ್ರೆ ನಮ್ಮ ದೇಶದಲ್ಲಿ ಹಲವಾರು ಸೀರೆಗಳನ್ನು ನಾವು ಕಾಣಬಹುದು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಮೈಸೂರು ಸಿಲ್ಕ್, ಕಾಂಜಿವರಂ , ಬಾಂಧನಿ ಸೀರೆ , ಬನಾರಸಿ ಲಹರಿಯ ,ಕೇರಳ ಸೆಟ್ ಸೀರೆ, ಈ ರೀತಿ ಇನ್ನೂ ಮುಂತಾದ ಸೀರೆಗಳನ್ನು ನಾವು ಹೇಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top