ಹೆಚ್ಚಿನ

ರಾಧಿಕಾಗೆ ಹುಟ್ಟು ಹಬ್ಬದ ಸಂಭ್ರಮ, ಅಭಿಮಾನಿಯ ಭರ್ಜರಿ ಗಿಫ್ಟ್ ನೋಡಿದ ರಾಧಿಕಾ ಫುಲ್ ಖುಷ್

ಕನ್ನಡದ ಖ್ಯಾತ ನಟಿ ಆಗಿರುವ ರಾಧಿಕಾ ಪಂಡಿತ್ ಅವರಿಗೆ ಇಂದು 32ನೇ ಹುಟ್ಟುಹಬ್ಬದ ಸಂಭ್ರಮವಾಗಿದೆ. ರಾಧಿಕಾ ಪಂಡಿತ್ ಅವರು ತಮ್ಮ ಜನುಮ ದಿನವನ್ನು ತಮ್ಮ ಮನೆಯಲ್ಲಿ ಕುಟುಂಬ ವರ್ಗದವರು ಹಾಗು ಅಭಿಮಾನಿಗಳೊಂದಿಗೆ ಆಚರಣೆ ಮಾಡಿಕೊಂಡರು.

 

ರಾಧಿಕಾ ಅವರು ಪ್ರತಿ ವರ್ಷ ಈ ದಿನವನ್ನು ತಮ್ಮ ಅಭಿಮಾನಿಗಳಿಗಾಗಿ ಮೀಸಲಿಡುತ್ತಾರೆ. ಈ ಬಾರಿಯೂ ಕೂಡ ತಮ್ಮ ಅಭಿಮಾನಿಗಳೊಂದಿಗೆ ತಮ್ಮ ಹುಟ್ಟು ಆಚರಣೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿಯೇ ರಾಧಿಕಾ ಅವರ ಮನೆಗೆ ಆಗಮಿಸಿದ ಅಪಾರ ಅಭಿಮಾನಿಗಳು ರಾಧಿಕಾ ಅವರಿಗಾಗಿ ಕೇಕ್ ತಂದಿದ್ದರು. ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡು ರಾಧಿಕಾ ಸಂತೋಷಪಟ್ಟರು. ಈ ಸಂಧರ್ಭದಲ್ಲಿ ಯಶ್ ಕೂಡ ಭಾಗಿಯಾಗಿದ್ದರು.

 

 

 

ಈ ವರ್ಷ ಹುಟ್ಟುಹಬ್ಬಕ್ಕೆ ರಾಧಿಕಾ ಅವರಿಗೆ ಅಭಿಮಾನಿ ಒಬ್ಬರಿಂದ ವಿಶೇಷವಾದ ಉಡುಗೊರೆ ಸಿಕ್ಕಿದೆ. ಕಲಾವಿದ ಜೋಸೆಫ್ ಅವರು ಸ್ಯಾಂಡ್ ಆರ್ಟ್ ಮೂಲಕ ರಾಧಿಕಾ ಮತ್ತು ಯಶ್ ರವರ ಭಾವಚಿತ್ರವನ್ನ ಅವರ ಮುಂದೆಯೇ ಬಿಡಿಸಿ ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ರಾಧಿಕಾ ಹಾಗು ಯಶ್ ಸಂತೋಷ ಪಟ್ಟರು. ಅಭಿಮಾನಿಗೆ ಧನ್ಯವಾದ ತಿಳಿಸಿದರು.

 

 

 

ಪ್ರತಿ ಸಲದಂತೆ ಈ ಬಾರಿಯೂ ಸಹ ತಮ್ಮ ತಂದೆ ತಾಯಿಯ ಜೊತೆಗೆ ರಾಧಿಕಾ ಜನುಮದಿನವನ್ನು ಆಚರಣೆ ಮಾಡಿಕೊಂಡರು ಮದುವೆಯ ನಂತರವೂ ರಾಧಿಕಾ ತಮ್ಮ ತವರು ಮನೆಯಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿರುವುದು ವಿಶೇಷವಾಗಿತ್ತು. ಯಶ್ ಕೂಡ ಇವರ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡು ರಾಧಿಕಾ ಹುಟ್ಟು ಹಬ್ಬದ ಸಂತೋಷವನ್ನು ಇಮ್ಮಡಿ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top