ವಿಶೇಷ

ಅಜಂತಾ ಎಲ್ಲೋರ ಗುಹೆಗಳನ್ನು ನಿರ್ಮಿಸಿದ್ದು ಏಲಿಯನ್ಗಳ ಅಥವಾ ಮನುಷ್ಯರ ಇಡೀ ಜಗತ್ತಿಗೆ ಸವಾಲಾಗಿ ನಿಂತಿರುವ ಇದರ ರಹಸ್ಯವನ್ನು ಪ್ರತಿಯೊಬ್ಬರೂ ತಿಳ್ಕೊಳ್ಳೆಬೇಕು

ವಿಶ್ವ ವಿಖ್ಯಾತ ಅಜಂತಾ ಗುಹೆಗಳ  ಹಿಂದಿರುವ ರಹಸ್ಯವೇನು ?  ಎಂದು ನಿಮಗೆ ಗೊತ್ತಾ ?

 

 

ಅಜಂತಾ ಎಲ್ಲೋರ ಗುಹೆಗಳು ಅಲ್ಲಿನ ವಾಸ್ತುಕಲೆ ಮತ್ತು ಶಿಲ್ಪ ಕಲೆಗೆ ಇಡೀ ಜಗತ್ತನ್ನೇ ಕೈಬೀಸಿ ಕರೆಯುತ್ತವೆ. ಆದರೆ ಬೆಟ್ಟ ಗುಡ್ಡಗಳ ನಡುವೆ ಕಟ್ಟಿರುವ ಈ ಅದ್ಭುತ ಶಿಲ್ಪ ಕಲೆಗಳನ್ನು ಕಟ್ಟಿದವರು ಯಾರು ? ಅದನ್ನು ಹೇಗೆ ಕಟ್ಟಲಾಯಿತು ? ಇದನ್ನು ಮನುಷ್ಯರು ಕಟ್ಟೋಕೆ ಸಾಧ್ಯವೇ ಇಲ್ಲ ? ಇದು ಅನ್ಯಗ್ರಹ ಜೀವಿಗಳು  ಕಟ್ಟಿದ್ದು.  ಇಂತಹ ಹಲವು ಜನಗಳ ವಾದ ವಿವಾದಗಳು ನಡೆಯುತ್ತಿದ್ದು , ನಿಜಕ್ಕೂ ಅಜಂತಾ ಎಲ್ಲೋರ ಗುಹೆಗಳನ್ನು ನಿರ್ಮಿಸಿದ್ದು ಆನ್ಯ ಜೀವಿಗಳಾದ ಏಲಿಯನ್ಗಳ  ? ಇಲ್ಲ ಈ ಅದ್ಭುತ ಶಿಲ್ಪ ಕಲೆಯಿರುವ ಗುಹೆಗಳನ್ನು ನಿರ್ಮಿಸಿರೋದು ರಾಜ ಹರಿಸೇನನೇ ?

 

 

ಒಂದಾನೊಂದು ಕಾಲದಲ್ಲಿ ಒಬ್ಬ ಚಾಣಾಕ್ಷ ಹಾಗೂ ಬಲಿಷ್ಠ ರಾಜ ಭಾರತದಲ್ಲಿ ಆಡಳಿತ ನಡೆಸಿದ್ದ. ಆತನ ಹೆಸರು ಹರಿಸೇನ. ಆತ ತನ್ನ ಅತಿ ದೊಡ್ಡ ರಾಜ್ಯವನ್ನು 17 ವರ್ಷಗಳ ಕಾಲ ಆಡಳಿತ ನಡೆಸಿದ್ದ ಕೇವಲ ಹದಿನೇಳು ವರ್ಷಗಳ ಆಡಳಿತದಲ್ಲಿ ಬರೀ ತನ್ನ ಮಿಲಿಟರಿ ಸಾಮರ್ಥ್ಯವನ್ನಷ್ಟೇ ಹೆಚ್ಚಿಸಿದ್ದಲ್ಲದೆ, ಭರತ ಖಂಡದ ಮೇಲೇ  ದಾಳಿ ಎರಗಲು ಬಂದ ಅಧರ್ಮಿಗಳನ್ನು ಹಿಮ್ಮೆಟ್ಟಿಸಿ ಭಾರತ ಮಾತೆಯ ಗೌರವವನ್ನು ಸಹ ಕಾಪಾಡಿದ ರಾಜ ಹರಿಸೇನ. ಕೇವಲ ಸಮರ್ಥ ರಾಜನಷ್ಟೇ ಅಲ್ಲ. ಬದಲಾಗಿ ಆತ ಶಿಲ್ಪ ಕಲೆಯಲ್ಲಿಯೂ ಜ್ಞಾನವನ್ನು ಹೊಂದಿದವನಾಗಿದ್ದ, ಆತ ತನ್ನ ಅಧಿಕಾರದ ಅವಧಿಯಲ್ಲಿ ಕಲೆ ಹಾಗೂ ವಾಸ್ತು ಶಿಲ್ಪಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ. ಆತ ಸರ್ವ ಧರ್ಮ ಸಹಿಷ್ಣುವಾಗಿದ್ದು, ತನ್ನ  ರಾಜ್ಯದಲ್ಲಿ ಎಲ್ಲಾ ಧರ್ಮಿಯರನ್ನು ಸಮಾನವಾಗಿ ನೋಡಿಕೊಂಡು ಹಿಂದೂ ಧರ್ಮದ ಪುನರುಜ್ಜೀವನಕ್ಕಾಗಿ ಆಡಳಿತ ನಡೆಸಿದ್ದ. ಸಮರ್ಥವಾಗಿ ಹದಿಮೂರು ವರ್ಷಗಳ ಕಾಲ ಆಡಳಿತ ನಡೆಸಿದ್ದ . ಹರಿಸೇನನ ಮರಣದ ನಂತರ ಆತನ ಮಗ ಶ್ರವಣಸೇನ ಕೇವಲ ಎರಡು ವರ್ಷಗಳ ಕಾಲ ರಾಜ್ಯಭಾರ ನಡೆಸಿದ್ದ.

 

 

ಅಲ್ಲಿಗೆ ರಾಜ ಹರಿಸೇನನ ಕಥೆ ಮುಕ್ತಾಯವಾಯಿತು. ಅಂದರೆ ನಿಮ್ಮ ಊಹೆ ತಪ್ಪು ? ಆತನ ಆಡಳಿತದ ಬಗ್ಗೆ ಹೇಳುವುದಕ್ಕೆ ಇನ್ನೂ ಹಲವಾರು ಕಥೆಗಳಿವೆ. ಅಷ್ಟಕ್ಕೂ ಯಾರು ? ಈ ರಾಜ ಹರಿಸೇನ. ನಾವು ಇಂದು ಆತನ ಬಗ್ಗೆ ಆತನ ಆಡಳಿತದ ಬಗ್ಗೆ ಯಾಕೆ ತಿಳಿದುಕೊಳ್ಳುವುದು ಅವಶ್ಯ

ಇದು ತುಂಬಾ ಸರಳ ಹರಿಸೇನ ಭಾರತ ದೇಶ ಕಂಡ ಒಬ್ಬ ಶ್ರೇಷ್ಠ ರಾಜ. ಆತ ಭರತ ಖಂಡವನ್ನು ಆಳಿದ ಇತಿಹಾಸ ಮರೆಯದಂತಹ ಆಡಳಿತವನ್ನು ನೀಡಿ ಹೋದವನಾಗಿದ್ದ. ಭರತಖಂಡ ಅಜಂತಾ ದಂತಹ ಅನೇಕ ಗುಹೆಗಳು, ಶಿಲ್ಪಕಲೆಗಳು, ವಾಸ್ತು ಶಿಲ್ಪಗಳು, ಭಾರತದ ಖಂಡದಲ್ಲಿ ಕಂಡು ಬಂದಿದ್ದು, ರಾಜಾ ಹರಿಸೇನ ತನ್ನ  ಆಡಳಿತದ ಅವಧಿಯಲ್ಲೇ,

ಆತನ ಆಡಳಿತದಲ್ಲಿ ಬೌದ್ಧ ಕಲೆಗೆ ಅತಿ ಹೆಚ್ಚು ಒತ್ತು ನೀಡಿದ್ದ .ಆತ ನಿರ್ಮಿಸಿದ್ದ ಅಜಂತಾ ಗುಹೆಗಳು ಅಲ್ಲಿನ ಮಂದಿರಗಳು ವಾಸ್ತು, ಶಿಲ್ಪಕಲೆ ಈಗಲೂ ಇತಿಹಾಸಕಾರರಿಗೆ ಮತ್ತು ವಿಜ್ಞಾನಕ್ಕೆ ಸವಾಲಾಗಿ ನಿಂತಿವೆ. ಸುಮಾರು 2200 ವರ್ಷಗಳಷ್ಟು ಹಳೆಯದೆಂದು  ನಂಬಲಾಗಿರುವ ಅಜಂತಾ ಗುಹೆಯಲ್ಲಿ ರಾಜ ಹರಿಸೇನ ಮತ್ತು  ವೆಂಕಟ ಎಂಬ ರಾಜನ ಮೂಲಕ ಕಟ್ಟಿಸಿದ್ದನಂತೆ.

 

 

ಇತಿಹಾಸಕಾರರು ಹೇಳುವ ಪ್ರಕಾರ ಹರಿಸೇನ ನಿರ್ಮಿಸಿದ್ದ 17 ಗುಹಾಂತರಗಳು ಅದ್ಭುತವಂತೆ ಹಾಗೂ ಅವುಗಳಲ್ಲಿನ ಹದಿನಾರನೆಯ ಗುಹಾಂತರವನ್ನು  ಅತ್ಯದ್ಭುತವಂತೆ. ಇತಿಹಾಸಕಾರರು ಹರಿಸುವುದು ಶಿಲ್ಪ ಕಲೆಯನ್ನು ಹಾಡಿ ಹೊಗಳುತ್ತಾರೆ.ಕೇವಲ ಎರಡು ದಶಕಗಳ ಅಂತರದಲ್ಲಿ ( ಹರಿಸೇನ ಅಧಿಕಾರಕ್ಕೆ ಬಂದದ್ದು ಕ್ರಿಸ್ತ. ಶಕ 460 ಹಾಗೂ ಅಜಾನಕ್ಕಾಗಿ ಮರಣ ಹೊಂದಿದ್ದು ಕ್ರಿಸ್ತ. ಶಕ 477 ಡಿಸೆಂಬರ್ 31 ರಂದು) ರಾಜ ಹರಿಸೇನ ಹಾಗೂ ಆತನ ಮಂತ್ರಿಗಳು ಸೇರಿ ಈಗಿರುವ 30 ಗುಡಿಗಳ ಪೈಕಿ 25  ಗುಹಾಂತರಗಳನ್ನು ನಿರ್ಮಿಸಿದ್ದರಂತೆ. ಈ ಮಾಹಿತಿಯನ್ನು ಆಧರಿಸಿ ಹೇಳಬೇಕೆಂದರೆ,  ಅಜಂತಾ ಗುಹೆಗಳು ಎರಡು ಮೂರರಷ್ಟು ಭಾಗವನ್ನು ಹರಿಸೇನ ಕ್ರಿಸ್ತ.ಶಕ 460 ಮತ್ತು 480 ರ ಮಧ್ಯದಲ್ಲಿ ನಿರ್ಮಿಸಿದ್ದಾರೆ ಎಂದು ಭಾವಿಸಬಹುದು.

ಬೌದ್ಧ ಸಂಸ್ಕೃತಿಯ ಪ್ರಕಾರ, ಬೌದ್ಧ ಮುನಿಗಳು ತಪಸ್ಸಿಗಾಗಿ ಆಯ್ದುಕೊಳ್ಳುತ್ತಿದ್ದ ಜಾಗವೇ ಗುಹೆಗಳು ಆದ್ದರಿಂದ ಹಾಗೂ ಚೈತ್ಯ ವಿಹಾರಗಳನ್ನೇ  ಅವರು ಧ್ಯಾನಕ್ಕಾಗಿ ಬಳಸುತ್ತಿದ್ದರಿಂದ ಹರಿಸೇನ ಅಜಂತಾ ಗುಹೆಗಳನ್ನು ನಿರ್ಮಿಸಿದ್ದ ಎಂದು ಇತಿಹಾಸಕಾರರು ಹೇಳುತ್ತಾರೆ.

ಅದ್ಭುತ ಶಿಲ್ಪಕಲೆಯ ಗುಹೆಗಳ ನಿರ್ಮಾಣವಾದ ನಂತರ ಆತ ಅಲ್ಲಿನ ಗೋಡೆಗಳಿಗೆ ಫ್ರೆಸ್ಕೊ ಪೇಂಟಿಂಗ್ ಮಾಡಿಸಿದ್ದನಂತೆ. ಆ ಗುಹೆಗಳಲ್ಲಿನ ಪೇಂಟಿಂಗ್ಗಳು ಈಗಲೂ ಸುರಕ್ಷಿತವಾಗಿವೆ  ಹಾಗೂ ನೀವು ಅದನ್ನು ಈಗಲೂ ನೋಡಬಹುದಾಗಿದೆ. ಆದರೆ ಭಾರತದ ಇತಿಹಾಸದ ಗರ್ಭದಲ್ಲಿ ಹೇಗೆ ಅನ್ಯ ರಾಜರುಗಳು ಮರೆಯಾಗಿ ಹೋದರೂ, ಅದೇ ರೀತಿಯಲ್ಲಿ ರಾಜ ಹರಿಸೇನನ ಇತಿಹಾಸವೂ ಮರೆಯಾಗಿ ಹೋಗಿದೆ. ಭಾರತದಲ್ಲಿ ಕೆಲವೇ ಬೆರಳೆಣಿಕೆಯಷ್ಟು ಜನ ಹರಿಸೇನನನ್ನು ಗುರುತಿಸುತ್ತಾರೆ .

 

 

ಅಷ್ಟೇ ಅಲ್ಲ ಇತಿಹಾಸಕಾರರು ರಾಜ ಹರಿಸೇನನ  ಮೇಲೆ ಬೆಳಕು ಚೆಲ್ಲುವ ಬದಲು ಅಜಂತಾ ಗುಹೆಗಳನ್ನು ವೆಂಕಟ ಹಾಗೂ ಶಾತವಾಹನರು ನಿರ್ಮಿಸಿದ್ದರು ಎಂಬ ಸುಳ್ಳು ಇತಿಹಾಸವನ್ನೇ ನಮಗೆ ಬೋಧಿಸುತ್ತಾ ಬಂದಿದ್ದಾರೆ. ಹೌದು ರಾಜಾ ವೆಂಕಟ ಈ ಗುಹೆಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಆದರೆ ಆತನ ಹಿಂದಿದ್ದ ರಾಜ ಹರಿಸೇನನ  ಹೆಸರನ್ನು  ಸೇರುವುದನ್ನು ಮಾತ್ರ ಇತಿಹಾಸಕಾರರು ತಿಳಿಸುವ ಗೋಜಿಗೆ ಹೋಗುವುದಿಲ್ಲ .

ಭಾರತದ ಇತಿಹಾಸ ಕಂಡ ಗುಪ್ತರ ಹಾಗೆಯೇ ರಾಜ ಹರಿಸೇನ ಕೂಡ ಈ ದೇಶದಲ್ಲಿ ಅದ್ಭುತವಾದ ಆಡಳಿತ ನೀಡಿ ಹೋಗಿದ್ದ ರಾಜನಾಗಿದ್ದ .ಆತನ ಸಾಮ್ರಾಜ್ಯ ಪೂರ್ವದ ಸಮುದ್ರದಿಂದ ದಕ್ಷಿಣದ ಭಾರತದವರೆಗೆ ಹರಡಿಕೊಂಡಿತ್ತು. ಹಾಗೂ ಆತನ ಸೇನೆಯ ಪರಾಕ್ರಮ ಅತ್ಯದ್ಭುತವಾಗಿತ್ತು. ಒಂದರ ಹಿಂದೆ ಒಂದರಂತೆ ಹಂದರಗಳನ್ನು ನಿರ್ಮಿಸಿದ ರಾಜ ಹರಿಸೇನ ಹಾಗೂ ಆತನ ಮಂತ್ರಿ ವರಾಹದೇವವನ್ನ ಮರೆಯೋಕೆ ಸಾಧ್ಯವೇ ಇಲ್ಲ. ಆತನ ಇತಿಹಾಸವನ್ನು, ಗತ ವೈಭವವನ್ನು ಹಾಗೂ ಹರಿಸೇನನ  ಮರಣಾನಂತರ ಹೇಗೆ ಆತನ ವಂಶ  ಛಿದ್ರಛಿದ್ರವಾಗಿ ಅಳಿದುಹೋಯಿತು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ  “ದಂಡಿನ್ ರ  ವಿಸೃತಚರಿತ” ವನ್ನು ಒಮ್ಮೆ ಒದಲೇಬೇಕು.

 

 

1500 ವರ್ಷಗಳ ಹಿಂದೆ ಗುಹೆಗಳಲ್ಲಿ ಮಾಡಿದ ಪೇಂಟಿಂಗ್ ಗಳು, ಶಿಲ್ಪಕಲೆಗಳು ಈಗಲೂ  ಇತಿಹಾಸದ ಕಥೆಗಳನ್ನು ಜೀವಂತವಾಗಿ ಹೇಳುವ ಹಾಗೆ ನಮ್ಮೆದುರಿಗೆ ನಿಂತಿವೆ. ನಮ್ಮ ಭಾರತದ ಇತಿಹಾಸಕಾರರು, ಅಂತಹ ಮಹಾನ್ ರಾಜ ಹರಿಸೇನನ  ಇತಿಹಾಸವನ್ನು ನಿಗೂಢವಾಗಿಯೇ ಉಳಿಯುವಂತೆ ಮಾಡಿ ಇತಿಹಾಸಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದರೆ ಬೇಜಾರಾಗುತ್ತದೆ.

ಆ ರಾಜ ಹರಿಸೇನನ  ಇತಿಹಾಸವನ್ನು ಕಡೆಗಣಿಸಿದ್ದಕ್ಕೋ  ಏನೋ ಇಂದು ಅಜಂತಾ ಗುಹೆಗಳನ್ನು ನಿರ್ಮಿಸಲು ಮನುಷ್ಯನಿಂದ ಸಾಧ್ಯವೇ ಇಲ್ಲ. ಅನ್ಯಗ್ರಹ ಜೀವಿಗಳಾದ ಏಲಿಯನ್ ಗಳು ಈ ಗುಹೆಗಳನ್ನು ನಿರ್ಮಿಸಿವೆ, ಎಂದು ಡಿಸ್ಕವರಿ ಚಾನೆಲ್ ನಂತಹ ಅಂತಾರಾಷ್ಟ್ರೀಯ ಮಾಧ್ಯಮಗಳು ರಾಜ ಹರಿಸೇನ ಕಟ್ಟಿಸಿದ ಅದ್ಭುತ ಶಿಲ್ಪಕಲೆಗಳನ್ನು ಅಣಕಿಸುತ್ತಿವೆ. ಅವರು ಹೇಳುವುದನ್ನು ಕೇಳುವಾಗ ಮನಸ್ಸಿನಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಗುತ್ತ ಮೂಡುವ ಪ್ರಶ್ನೆ ಎಂದರೆ “ರಾಜ ಹರಿಸೇನ ಅನ್ಯಗ್ರಹ ಜೀವಿಯಾಗಿದ್ದನಾ ? ಆತ ಎಲಿಯನ್ನಾ ಎನ್ನುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top