ಹೆಚ್ಚಿನ

ಸಾಮಾನ್ಯ ಕನ್ನಡಿಗರ ಅಭಿಯಾನ ಯಶಸ್ವಿ, ರಾಜೀವ್ ಬದಲು ಕನ್ನಡಿಗ ವಿಜಯ್ ಸಂಕೇಶ್ವರ್ ಗೆ ಟಿಕೆಟ್

ಕಳೆದ 12 ವರ್ಷಗಳಿಂದ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸಂಸದ ರಾಜೀವ್ ಚಂದ್ರಶೇಖರ್ ಅವರನ್ನು ರಾಜ್ಯದಿಂದ ಮತ್ತೂಂದು ಅವಧಿಗೆ ಆಯ್ಕೆ ಮಾಡುವುದಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ರಚಿಸಿಕೊಂಡಿರುವ ಸಾಮಾನ್ಯ ಕನ್ನಡಿಗ ಬಳಗವು “#RajeevBeda’ ಎಂಬ ಟ್ಯಾಗ್‌ ಲೈನ್’ನೊಂದಿಗೆ ಈ ಕುರಿತು ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಅಭಿಯಾನ ಆರಂಭಿಸಿದೆ.

 

 

#RajeevBeda ಹ್ಯಾಷ್ ಟ್ಯಾಗ್ ಈಗ ಯಶಸ್ವಿ ಆಗಿದ್ದು ರಾಜೀವ್ ಅವರಿಗೆ ಬಹುತೇಕ ಟಿಕೆಟ್ ತಪ್ಪಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕನ್ನಡಿಗರಾದ ಪ್ರಖ್ಯಾತ ಉದ್ಯಮಿ ವಿಜಯ ಸಂಕೇಶ್ವರ್ ಅವರಿಗೆ ರಾಜ್ಯಸಭೆ ಟಿಕೆಟ್ ಸಿಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

 

ಈ ಹಿಂದೆ ಕನ್ನಡ ಎಂದರೆ ಮೂರು ಮೈಲಿ ದೂರ ಓಡಿ ಹೋಗುವಂತ ಬುದ್ದಿ ಹೊಂದಿದ್ದ ವೆಂಕಯ್ಯ ನಾಯ್ಡು ವಿಷಯದಲ್ಲೂ ಕೂಡ ಇದೇ ರೀತಿಯ #ವೆಂಕಯ್ಯ_ಸಾಕಯ್ಯ ಎಂಬ ಟ್ವಿಟರ್ ಅಭಿಯಾನವನ್ನು ಕೈಗೊಂಡು ಅವರಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪುವಂತೆ ಮಾಡಲಾಗಿತ್ತು. #ವೆಂಕಯ್ಯ_ಸಾಕಯ್ಯ ಎಂಬ ಹ್ಯಾಷ್‌ಟ್ಯಾಗ್‌ ಟ್ವೀಟರ್‌ನಲ್ಲಿ ಅಖೀಲ ಭಾರತ ಮಟ್ಟದಲ್ಲಿ ನಂ.1 ಟ್ರೆಂಡ್‌ (ವಿದ್ಯಮಾನ) ಅನಿಸಿಕೊಂಡಿತು. ಬೆಂಗಳೂರು ಟ್ರೆಂಡಿಂಗ್‌ ಪಟ್ಟಿಯಲ್ಲೂ ಪ್ರಥಮ ಸ್ಥಾನಕ್ಕೇರಿತು. ನಂತರವೂ ಟ್ವೀಟರ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ವೆಂಕಯ್ಯ ಅವರ ಮರು ಆಯ್ಕೆ ವಿರೋಧಿಸಿ ತೀವ್ರ ಚರ್ಚೆಗಲಾಗಿದ್ದವು.

 

 

ರಾಜೀವ್ ಚಂದ್ರಶೇಖರ್ ಅವರನ್ನು ರಾಜ್ಯಸಭೆಗೆ ಮರು ಆಯ್ಕೆ ಮಾಡುತ್ತಿರುವುದನ್ನು ವಿರೋಧಿಸಿ #RajeevBeda ಹ್ಯಾಷ್‌ಟ್ಯಾಗ್‌ನೊಂದಿಗೆ (# ಚಿಹ್ನೆ ಬಳಸಿ ನಿರ್ದಿಷ್ಟ ವಿಷಯವನ್ನು ಉಲ್ಲೇಖೀಸುವ ತಂತ್ರಜ್ಞಾನ) ಟ್ವೀಟರ್‌ ಅಭಿಯಾನ ಕರ್ನಾಟಕವೂ ಸೇರಿ ದೇಶ-ವಿದೇಶಗಳ ಕನ್ನಡಿಗರಿಂದ ಬೆಂಬಲ ವ್ಯಕ್ತವಾಗಿದೆ. ವಿಶ್ವದ ನಾನಾ ಭಾಗದಲ್ಲಿ ನೆಲೆಸಿರುವ ಕನ್ನಡಿಗರು #RajeevBeda ಎಂದು ಟ್ವಿಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top