fbpx
ಸಮಾಚಾರ

ಈ ವಿವಾದದ ಚಿತ್ರ ಅಂಚೆ ಇಲಾಖೆಯ ಸ್ಟಾಪ್ ಮೇಲೂ ಇತ್ತು!

ತಾಯಿಯ ಎದೆ ಹಾಲಿನ ಕೊರತೆಯಿಂದಾಗಿ ಚಿಕ್ಕ ಮಕ್ಕಳಲ್ಲಿ ಉಂಟಾಗುವ ಆಹಾರದ ಅಪೌಷ್ಟಿಕತೆ ಮತ್ತು ಬುದ್ಧಿಶಕ್ತಿಯ ಪರಿಣಾಮಗಳ ಬಗ್ಗೆ ತಾಯಂದಿರಲ್ಲಿ ಜಾಗೃತಿ ಮೂಡಿಸಲು ಜಾಗತಿಕ ಅಭಿಯಾನ ಸ್ತನ್ಯಪಾನ ಸಪ್ತಾಹ ಏರ್ಪಾಡು ಮಾಡುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಸ್ತನ್ಯಪಾನದ ಅರಿವು ಮೂಡಿಸಲು ಮಲೆಯಾಳಂ ಭಾಷೆಯ ಮ್ಯಾಗಜೀನ್ ವೊಂದು ಮಾಡಿದ ಫೋಟೋಶೂಟ್ ಈಗ ದೇಶ್ಯಾದ್ಯಂತ ವೈರಲ್ ಆಗಿದೆ.

 


ಮಲಯಾಳಂ ಸಿನಿಮಾ ನಟಿ ಗಿಲು ಜೋಸೆಫ್ ಮ್ಯಾಗಜಿನ್ ಮುಖ ಪುಟಕ್ಕಾಗಿ ಸ್ತನಪಾನ ಮಾಡಿಸಿ ಫೋಟೋಶೂಟ್ ಮಾಡಿಸಿದ್ದಾರೆ, ಈ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೊಂದು ಜಾಗೃತಿ ಅಭಿಯಾನವಾಗಿದ್ದು ಮಹಿಳೆಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಹಾಯಕಾರಿ ಆಗಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮಕ್ಕಳಿಗೆ ಎದೆ ಹಾಲು ಉಣಿಸಲು ಮುಜುಗರ ಪಡಬಾರದು. ಎದೆ ಹಾಲು ಉಣಿಸುವುದಕ್ಕೆ ನಾಚಿಕೆ ಪಟ್ಟುಕೊಳ್ಳುವ ಅಗತ್ಯವಿಲ್ಲ ಎಂಬ ಉತ್ತಮವಾದ ಸಂದೇಶ ಸಾರುವ ನಿಟ್ಟಿನಲ್ಲಿ ನಟಿಯ ಫೋಟೋವನ್ನು ಪ್ರಕಟಿಸಲಾಗಿದೆ.

 


ಮ್ಯಾಗಜಿನ್ ನ ಮುಖಪುಟದ ಚಿತ್ರವನ್ನು ಉತ್ತಮ ಉದ್ದೇಶಕ್ಕೆ ಬಳಸಿಕೊಂಡಿದ್ದರು ಕೆಲವು ವಕ್ರಬುದ್ಧಿ ಮನುಷ್ಯರ ಕಾಕದೃಷ್ಟಿ ಆ ಚಿತ್ರದ ಮೇಲೆ ಬಿದ್ದಿದ್ದು ಈ ನಟಿ ಇನ್ನೂ ಮದುವೆ ಆಗಿಲ್ಲ, ಆಕೆಗೆ ಮಗುವಾಗಿಲ್ಲ, ಆದರೆ, ಮಗುವಿಗೆ ಎದೆ ಹಾಲು ಉಣಿಸುವ ಭಂಗಿಯಲ್ಲಿ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇಂಥ ಒಳ್ಳೆಯ ಅಭಿಯಾನಕ್ಕೆ ನಟಿಯ ಬಳಕೆ ಅವಶ್ಯಕತೆ ಇತ್ತೇ, ಅದರಲ್ಲೂ ಮದುವೆ ಆಗದಿರುವ ನಟಿಯನ್ನು ಬಳಸಿರುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನೆಗಳ ಸುರಿಮಳೆ ಆಗುತ್ತಿವೆ.. ಕೆಲವರಂತೂ ಇದನ್ನು ಹೇಗಾದರೂ ಮಾಡಿ ವಿವಾದವನ್ನಾಗಿ ಮಾಡಲೇಬೇಕೆಂದು ಪಣತೊಟ್ಟಂತೆ ಆವೇಗವಾಗಿ ಬಾಯಿಗೆ ಬಂದ ರೀತಿ ಕಾಮೆಂಟ್ ಗಳನ್ನ ತೂರಿಬಿಡುತ್ತಿದ್ದಾರೆ.

 


ಇಂತಹ ಬುದ್ದಿಗೆಟ್ಟ ಮಂದಿಯ ಬಾಯಿ ಮುಚ್ಚಿಸಲು ಮುಂದಾಗಿರುವ ಮ್ಯಾಗಜಿನ್ ಮುಖ್ಯಸ್ಥರು ಭಾರತ ಸರ್ಕಾರದ ಬಿಡುಗಡೆ ಮಾಡಿದ್ದ 1984ರ ಭಾರತೀಯ ಅಂಚೆಯೇ ಇಲಾಖೆಯ ಸ್ಟ್ಯಾಂಪ್ ಅನ್ನು ತೋರಿಸಿ “ಇದರಲ್ಲೂ ತಾಯಿ ಮಗುವಿಗೆ ಸ್ತನಪಾನ ಮಾಡಿಸುತ್ತಿರುವ ಚಿತ್ರವಿದೆ. ಹಾಗಂತಾ ಆ ಸ್ಟ್ಯಾಂಪ್ ಅನ್ನು ಕೂಡ ವಿರೋಧಿಸುತ್ತೀರಾ? ಎಂದು ಮರು ಪ್ರಶ್ನೆ ಹಾಕಿ ನಮ್ಮ ಮ್ಯಾಗಜಿನ್ ಮುಖಪುಟವನ್ನು ವಿರೋಧಿಸುವುದಾದರೆ ಅದನ್ನು ವಿರೋಧಿಸಿ ಎಂದು ಅವು ಬಿಟ್ಟ ಬಾಣವನ್ನು ಅವರ ಕಡೆಗೆ ಬಿಟ್ಟಿದ್ದಾರೆ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top