ತೆರೆಯ ತುಂಟುತನಗಳನ್ನು ಮಾಡಿಯೇ ಪ್ರೇಕ್ಷಕರನ್ನು ನಕ್ಕು ನಗಿಸುವ ಸ್ಯಾಂಡಲ್ ವುಡ್ ಕಾಮಿಡಿ ಕಿಂಗ್ ಚಿಕ್ಕಣ್ಣ ಕಮಿಟ್ ಆಗಿರೋ ಹುಡುಗಿಗೆ ಎಲ್ಲರ ಮುಂದೆ ಲವ್ ಪ್ರೊಪೋಸ್ ಮಾಡಿದ್ದಾರೆ ಆದರೆ ಅದು ನಿಜ ನೀವನದಲ್ಲಿ ಅಲ್ಲ, ಬದಲಾಗಿ ಟಿವಿ ಷೋನಲ್ಲಿ. ಶಿವಣ್ಣ ನಡೆಸಿಕೊಡುತ್ತಿರುವ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಮೂಡಿಬರುತ್ತಿರುವ ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಈ ರೀತಿ ಮಾಡಿದ್ದಾರೆ. ಅಷ್ಟಕ್ಕೋ ಚಿಕ್ಕಣ್ಣ ಲವ್ ಪ್ರೊಪೋಸ್ ಮಾಡಿದ್ದು ಯಾಕೆ ಅಂತೀರಾ? ಮುಂದೆ ಓದಿ
ಯಾರಿ ನಂಬರ್ 1 ವಿಥ್ ಶಿವಣ್ಣ ಕಾರ್ಯಕ್ರಮದ ಎರಡನೇ ಸಂಚಿಕೆಯಲ್ಲಿ ನಟ ಶರಣ್, ಚಿಕ್ಕಣ್ಣ ಮತ್ತು ನಿರ್ದೇಶಕ ತರುಣ್ ಸುಧೀರ್ ಅಥಿತಿಗಳಾಗಿ ಭಾಗಿಯಾಗಿದ್ದರು. ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಮೂರು ಜನಕ್ಕೂ ಒಂದೊಂದು ರೀತಿಯ ಸವಾಲುಗಳನ್ನ ಶಿವಣ್ಣ ನೀಡಿದ್ದರು ಆ ವೇಳೆ ಚಿಕ್ಕಣ್ಣನಿಗೆ ಕಾರ್ಯಕ್ರಮದಲ್ಲಿ ಶಿವಣ್ಣನ ಸಹಾಯಕಿಯಾಗಿರುವ ದೀಪಾಗೆ ವಿವಿಧ ವ್ಯಕ್ತಿಗಳ ಸ್ಟೈಲ್ ನಲ್ಲಿ ಲವ್ ಪ್ರೊಪೋಸ್ ಮಾಡುವಂತೆ ಚಾಲೆಂಜ್ ನೀಡಿದರು.
ಸವಾಲು ಸ್ವೀಕರಿಸಿ ದೀಪಾಗೆ ಎಲ್ಲರ ಮುಂದೆ ಲವ್ ಪ್ರೊಪೋಸ್ ಮಾಡಿದ ಚಿಕ್ಕಣ್ಣ ಸಿದ್ದರಾಮಯ್ಯ, ಕುಮಾರಸ್ವಾಮಿ ಸ್ಟೈಲ್ ನಲ್ಲಿ ಲವ್ ಪ್ರೊಪೋಸ್ ಮಾಡಿ ನಂತರ ತಮ್ಮ ಸ್ಟೈಲ್ ನಲ್ಲೆ “ಐ ಲವ್ ಯೂ, ನೀವಂದ್ರೆ ನನಗೆ ತುಂಬ ಇಷ್ಟ” ಎಂದು ಹೇಳಿದರು. ಅದಕ್ಕೆ ದೀಪಾ “ನಾನು ಈಗಾಗಲೇ ಬೇರೆ ಹುಡುನಿಗೆ ಕಮಿಟ್ ಆಗಿದ್ದೇನೆ” ಎಂದಾಗ “ಪರವಾಗಿಲ್ಲ ನಾನು ಅಡ್ಜಸ್ಟ್ ಮಾಡ್ಕೋತೀನಿ” ಎಂದು ಚಿಕ್ಕಣ್ಣ ಚಮಕ್ ಕೊಟ್ಟರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
