fbpx
ಮನೋರಂಜನೆ

ಡಾ. ರಾಜ್ ಕುಟುಂಬದ ಕುಡಿಯ ಬೆನ್ನಿಗೆ ಬೆಂಬಲವಾಗಿ ನಿಂತ ಚಾಲೆಂಜಿಂಗ್ ಸ್ಟಾರ್..

ಡಾ. ರಾಜ್‌ಕುಮಾರ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಕಾಲ ಸನ್ನಿಹಿತವಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ಅವರ ತಮ್ಮನ ಮಗ ಸೂರಜ್ ನಟನಾಗಲು ಸಾಕಷ್ಟು ವರ್ಷಗಳಿಂದ ಎಲ್ಲಾ ತಯಾರಿಗಳನ್ನು ಮುಗಿಸಿಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅವರ ಮೊದಲ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಜಾಹೀರಾಗಲಿದೆ.

 

 

ಸೂರಜ್ ಪಾರ್ವತಮ್ಮನವರ ಸೋದರಳಿಯ. ಚಿನ್ನೇಗೌಡರ ಸಹೋದರ ಶ್ರೀನಿವಾಸ ರಾಜು ಪುತ್ರನಾದ ಸೂರಜ್ ತರಾತುರಿ ಮಾಡಿದ್ದರೆ ಬಹುಶಃ ಹೀರೋ ಆಗಿ ಇದೀಗ ಬಹು ಕಾಲವೇ ಕಳೆದಿರುತ್ತಿತ್ತೇನೋ. ಆದರೆ ಹೀರೋ ಆಗಲು ಸಿನಿಮಾ ಜಗತ್ತಿನ ಸಕಲ ಪಟ್ಟುಗಳನ್ನೂ ಕಲಿಯೋದೇ ಮಾನದಂಡ ಅಂದುಕೊಂಡಿರೋ ಅವರು ಎಲ್ಲವನ್ನೂ ಶ್ರದ್ಧೆಯಿಂದ ಕಲಿಯುತ್ತಾ ಬಂದಿದ್ದಾರೆ. ಇಪ್ಪೇತ್ತೇಳು ವರ್ಷದ ಸೂರಜ್ ಇದೀಗ ಹೀರೋ ಆಗಿ ಲಾಂಚ್ ಆಗಲು ತಯಾರಾಗಿದ್ದಾರೆ.

 

 

ಸಿನಿಮಾ ಕುಟುಂಬದಿಂದಲೇ ಬಂದಿದ್ದರೂ ಕೂಡಾ ಸೂರಜ್ ಸಂಸಾರದ ಮಟ್ಟಿಗೆ ಯಾರೂ ಕಲಾವಿದರಿಲ್ಲ. ಅಕ್ಕಂದಿರಿಬ್ಬರಿಗೂ ಮದುವೆಯಾಗಿದೆ. ಮೈಸೂರಿನಲ್ಲಿ ಡಿಗ್ರಿವರೆಗಿನ ಓದು ಮುಗಿಸಿಕೊಂಡಿದ್ದ ಸೂರಜ್ ಅವರಿಗೆ ಆರಂಭ ಕಾಲದಿಂದಲೂ ನಟನಾಗಬೇಕೆಂಬ ಕನಸು. ಈ ಬಗ್ಗೆ ಮನೆಯಲ್ಲಿ ಹೇಳಿದಾಗ ಅದಕ್ಕಾಗಿ ಸಂಪೂರ್ಣ ತಯಾರಿ ಮಾಡಿಕೊಂಡ ನಂತರವೇ ಹೀರೋ ಆಗಿ ಲಾಂಚ್ ಆಗುವಂತೆ ಸಲಹೆ ನೀಡಿದ್ದರು. ಅಲ್ಲಿಂದ ಸೂರಜ್ ಅವರ ಕಲಿಕೆಯ ಯಾನ ಶುರುವಾಗಿತ್ತು.

ಒಂದಷ್ಟು ಕಾಲ ರಂಗಾಯಣದಲ್ಲಿ ನಟನೆಯ ವಿಧ್ಯೆ ಕಲಿತು ಚೆನೈಗೆ ತೆರಳಿದ ಸೂರಜ್ ಅಲ್ಲಿಯೇ ನಟನೆಯ ವಿವಿಧ ಹಂತಗಳ ತರಬೇತಿ ಕಲಿತಿದ್ದಾರೆ. ಆ ನಂತರ ಪಾಂಡ್ಯನ್ ಮಾಸ್ಟರ್ ಗರಡಿಯಲ್ಲಿ ವರ್ಷಾಂತರಗಳ ಕಾಲ ಸಾಹಸದ ಪಟ್ಟುಗಳನ್ನು ಕರಗತ ಮಾಡಿಕೊಂಡು ಕಲೈ ಮಾಸ್ಟರ್ ಬಳಿ ನೃತ್ಯಾಭ್ಯಾಸವನ್ನೂ ಮುಗಿಸಿಕೊಂಡಿದ್ದಾರೆ. ನಟನಾಗಬೇಕೆಂಬ ಆಸೆ ಇದ್ದರೂ ಚಿತ್ರ ರಂಗದ ಬೇರೆ ಬೇರೆ ವಿಭಾಗಗಳಲ್ಲಿ ಅತೀವ ಆಸಕ್ತಿ ಇರುವ ಸೂರಜ್ ತಾರಕ್ ಮತ್ತು ಐರಾವತ ಚಿತ್ರಗಳಲ್ಲಿಯೂ ಬೇರೆ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

 

ವಿಶೇಷವೆಂದರೆ ಸೂರಜ್ ಬೆಂಬಲವಾಗಿ ಆತನ ಬೆನ್ನಿಗೆ ನಿಂತಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್.. ಚಿತ್ರರಂಗದಲ್ಲಿ ಸೂರಜ್’ಗೆ ದರ್ಶನ್ ಗಾಢ ಫಾದರ್ ಅಂತೇ ಹಾಗಂತ ಸ್ವಥ ಸೂರಜ್ ಅವರೇ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದು ” ನನಗೆ ಬುದ್ದಿ ಬಂದಗಾನಿಂದಲೂ ದರ್ಶನ್’ರನ್ನ ನೋಡುಕೊಂಡೇ ಬೆಳೆದಿದ್ದೇನೆ ಆಗಿನಿಂದಲೂ ಅವರು ನನಗೆ ಗೊತ್ತು. ನನ್ನ ಜೀವನದ ಪಾರ್ಥಿ ಹಂತದಲ್ಲೂ ನನಗೆ ದರ್ಶನ್ ಅವರು ಉತ್ತಮ ಸಲಹೆಗಳನ್ನ ನೀಡುತ್ತಾ ಬಂದಿದ್ದಾರೆ. ಅವರ ಜೊತೆ ಎರಡು ಚಿತ್ರದಲ್ಲಿ ಕೆಲಸ ಮಾಡುವ ಚ್ಯಾನ್ಸ್ ಸಿಕ್ಕಿದ್ದು ನನ್ನ ಪುಣ್ಯ. ” ಎಂದು ದರ್ಶನ್ ಬಗ್ಗೆ ಹೇಳಿದ್ದರು.

 

 

ಇಷ್ಟೆಲ್ಲಾ ತಯಾರಿಯಾದ ಬಳಿಕ ಇದೀಗ ಸೂರಜ್ ಹೀರೋ ಆಗಿ ಲಾಂಚ್ ಆಗಲು ಒಂದೊಳ್ಳೆ ಕಥೆಗಾಗಿ ತಯಾರಾಗುತ್ತಿದ್ದಾರೆ. ಬಂದ ಸ್ಕ್ರಿಪ್ಟುಗಳನ್ನೆಲ್ಲ ಪರಿಶೀಲಿಸುತ್ತಿದ್ದಾರೆ. ಒಂದು ನಿರ್ದಿಷ್ಟ ಜಾನರಿನ ಸಿನಿಮಾವೇ ಆಗಬೇಕೆಂಬ ಮನಸ್ಥಿತಿಯಾಚೆಗೆ ಸೂರಜ್ ಒಂದೊಳ್ಳೆ ಕಥೆ, ನಟನೆಗೆ ಅವಕಾಶವಿರುವ ಚೆಂದದ ಸಿನಿಮಾದಲ್ಲಿಯೇ ಮೊದಲು ನಟಿಸಬೇಕೆಂಬ ಇರಾದೆ ಹೊಂದಿದ್ದಾರೆ.ಇನ್ನೇನು ಕೆಲವೇ ದಿನಗಳಲ್ಲಿ ಕಥೆ ಫೈನಲ್ ಆದಾಕ್ಷಣವೇ ಪಾರ್ವತಮ್ಮನವರ ಸೋದರಳಿಯ ಸೂರಜ್ ಹೊಸಾ ಚಿತ್ರದ ಸಂಪೂರ್ಣ ಮಾಹಿತಿ ಸಿಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top