fbpx
ಕಿರುತೆರೆ

ಯುಗಾದಿ ಹಬ್ಬಕ್ಕೆ ಕಿರುತೆರೆಯಲ್ಲಿ ದರ್ಶನ್ VS ಪುನೀತ್.. ನಿಮ್ಮ ಆಯ್ಕೆ ಯಾವುದು?

ಸಾಮಾನ್ಯವಾಗಿ ಸ್ಟಾರ್ ಚಿತ್ರಗಳು ಬೆಳ್ಳಿಪರದೆಯಲ್ಲಿ ಮುಖಾಮುಖಿಯಾಗುತ್ತವೆ ಆದಾಗ್ಯೂ ಅಪರೂಪಕ್ಕೆ ಕಿರುತೆರೆಯಲ್ಲೂ ಒಂದೇ ದಿನ ಪ್ರಸಾರವಾಗುವ ಮೂಲಕ ಸಿನಿ ರಸಿಕರಿಗೆ ಯಾವ ಚಿತ್ರ ನೋಡೋದಪ್ಪಾ ಅಂತ ಗೊಂದಲ ಉಂಟುಮಾಡುತ್ತವೆ,, ಈಗ ಅದೇ ರೀತಿಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಸ್ಯಾಂಡಲ್ ವುಡ್ ನ ಎರಡು ಹಿಟ್ ಚಿತ್ರಗಳು ಕಿರುತೆರೆಯಲ್ಲಿ ಇದೆ ಮೊದಲ ಬಾರಿಗೆ ಪ್ರಸಾರವಾಗುತ್ತಿವೆ.

 

 

ಚಾಲೆಂಜಿಂಗ್ ದರ್ಶನ್ ಅಭಿನಯದಲ್ಲಿ ಮೂಡಿಬಂದಿದ್ದ ತಾರಕ್ ಚಿತ್ರ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅಂಜನೀಪುತ್ರ ಚಿತ್ರಗಳು ಒಂದೇ ದಿನ ಅಂದರೆ ಯುಗಾದಿ ಹಬ್ಬದಂದು ಬೇರೆ ಬೇರೆ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿವೆ.

ಕಳೆದ ಡಿಸೆಂಬರ್ ನಲಿ ತೆರೆಕಂಡು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಂಡಿದ್ದಅಂಜನೀಪುತ್ರ ಚಿತ್ರ ರಿಲೀಸ್ ಆಗಿ ಕೇವಲ ಎರಡು ತಿಂಗಳುಗಳಷ್ಟೇ ಆಗಿದ್ದು ಆಗಲೇ ಕಿರುತೆರೆಗೆ ಲಗ್ಗೆಯಿಡುತ್ತಿದೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ದಾಖಲೆಯ ಮೊತ್ತಕ್ಕೆ ಖರೀಧಿಸಿದ್ದ ಉದಯ ಟಿವಿ ಅಂಜನೀಪುತ್ರ ಸಿನಿಮಾವನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಲಿದೆ. ಯುಗಾದಿ ಹಬ್ಬದಂದು (ಮಾರ್ಚ್ 18) ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

 

 

ಇತ್ತ ತಾರಕ್ ಚಿತ್ರ ರಿಲೀಸ್ ಕೂಡ ಆಗಿ ಮೂರ್ನಾಲ್ಕು ತಿಂಗಳುಗಳಷ್ಟೇ ಆಗಿದ್ದು ಆಗಲೇ ಕಿರುತೆರೆಗೆ ಲಗ್ಗೆಯಿಡುತ್ತಿದೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಖರೀಧಿಸಿದ್ದ ಸ್ಟಾರ್ ಸುವರ್ಣ ತಾರಕ್ ಸಿನಿಮಾವನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಲಿದೆ. ಈ ಚಿತ್ರವೂ ಕೂಡ ಯುಗಾದಿ ಹಬ್ಬದಂದು (ಮಾರ್ಚ್ 18) ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.. ಈ ಮೂಲಕ ಥಿಯೇಟರ್ ನಲ್ಲಿ ಈ ಎರಡು ಚಿತ್ರಗಳನ್ನ ನೋಡಲು ಮಿಸ್ ಮಾಡಿಕೊಂಡವರಿಗೆ ಚಿತ್ರವನ್ನು ನೋಡಲು ಒಳ್ಳೆಯ ಅವಕಾಶ ಸಿಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top