ಹೆಚ್ಚಿನ

ದಾವೂದ್ ಇಬ್ರಾಹಿಂ ಸಹಚರ ಫಾರೂಕ್ ಟಕ್ಲಾನನ್ನು ಹೆಡೆಮುರಿಕಟ್ಟಿ ದುಬೈನಿಂದ ಮುಂಬೈಗೆ ತಂದ ಮೋದಿ ಸರ್ಕಾರ

ದೇಶದ ಕುಖ್ಯಾತ ಭೂಗತ ಪಾತಕಿ, 1993ರ ಮುಂಬೈ ಸರಣಿ ಸ್ಫೋಟದ ಆರೋಪಿ ದಾವೂದ್ ಇಬ್ರಾಹಿಂ ನ ಬಲಗೈ ಭಂಟನಾಗಿದ್ದ ಫಾರೂಕ್ ಟಕ್ಲಾ ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಮುಂಬೈಗೆ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ.

 

 

1992 ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟದ ರೂವಾರಿಯಾಗಿರುವ ಫರೂಕ್ ಟಕ್ಲಾ ನನ್ನು ದುಬೈನಿಂದ ಗಡಿಪಾರು ಮಾಡಲಾಗಿದ್ದು, ಇದೀಗ ಟಕ್ಲಾನನ್ನು ಬಂಧಿಸಿರುವ ಸಿಬಿಐ ಅಧಿಕಾರಿಗಳು ಮುಂಬೈ ನಗರಕ್ಕೆ ಕರೆತಂದಿದ್ದಾರೆ. ದಾವೂದ್​ ಇಬ್ರಾಹಿಂ ಕೆಲವೇ ದಿನಗಳಲ್ಲಿ ಭಾರತ ಸರಕಾರದ ಮುಂದೆ ಶರಣಾಗತಿ ಅಗಲಿದ್ದಾನೆ ಎಂದು ವಕೀಲರಾಗಿರುವ ಶ್ಯಾಮ್​ ಕೇಸ್ವಾನಿ ಬಹಿರಂಗ ಪಡಿಸಿದ್ದಾರೆ.

 

 

ದುಬೈನಲ್ಲಿ ಈತ ಅಡಗಿರುವ ಬಗ್ಗೆ ಮಾಹಿತಿ ಇದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್​ ದೋವಲ್​ ದುಬೈ ಸರ್ಕಾರದ ಜೊತೆ ಚರ್ಚೆ ಮಾಡಿದ್ದರು. ಭಾರತ ಸರ್ಕಾರದ ಮನವಿಗೆ ಕೂಡಲೇ ಸ್ಪಂದನೆ ನೀಡಿ, ದುಬೈ ಸರ್ಕಾರ ಫಾರೂಕ ನನ್ನು ಗಡಿಪಾರು ಮಾಡಿರುವ ಮಾಡಿದರು.

 

 

ಫಾರೂಕ್ ಟಕ್ಲಾ ಬಂಧನ ಆಗಿರುವುದರಿಂದ ದಾವೂದ್‌ ಇಬ್ರಾಹಿಂ ಗ್ಯಾಂಗ್‌ಗೆ ದೊಡ್ಡದಾದ ಹೊಡೆತ ಬಿದ್ದಿದೆ ಎಂದು ಹಿರಿಯ ವಕೀಲರಾಗಿರುವ ಉಜ್ವಲ್ ನಿಕಮ್ ತಿಳಿಸಿದ್ದಾರೆ. ‘ಇದು ಬಹುದೊಡ್ಡ ಯಶಸ್ಸು ಎಂದಿರುವ ಅವರು. ಆತ 1992ರ ಮುಂಬೈ ಸರಣಿ ಸ್ಫೋಟದಲ್ಲಿ ಭಾಗಿಯಾಗಿದ್ದ. ತನಿಖೆಯಲ್ಲಿ ಕಳಚಿದ ಕೊಂಡಿಗಳು ಈತನ ಬಂಧನದಿಂದ ಜೋಡಣೆಯಾಗಿವೆ. ಇದರಿಂದ ಡಿ-ಗ್ಯಾಂಗ್‌ಗೆ ಭಾರೀ ದೊಡ್ಡ ಹೊಡೆತ ಬಿದ್ದಿದೆ’ ಎಂದು ನಿಕಮ್ ತಿಳಿಸಿದ್ದಾರೆ.

 

 

ಫಾರೂಕ್ ಟಕ್ಲಾ, ದುಬೈ ನಲ್ಲಿ ಇದ್ದುಕೊಂಡೇ ದಾವುದ್ ಇಬ್ರಾಹಿಂ ಗೆ ಸಹಾಯವನ್ನು ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಅಲ್ಲದೆ, ದುಬೈನಲ್ಲಿ ದಾವೂದ್’ನ ದೊಡ್ಡ ಸಾಮ್ರಾಜ್ಯವನ್ನೇ ಆತ ಸ್ಥಾಪನೆ ಮಾಡಿದ್ದ. ಈಗ ಆತನನ್ನು ಬಂಧಿಸಿರುವ ಪೊಲೀಸರು ಟಾಡಾ ಕೋರ್ಟ್​ಗೆ ಇಂದು ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top