ಹೆಚ್ಚಿನ

ಬಡ ಮಹಿಳೆ ಕಳೆದುಕೊಂಡಿದ್ದ 50 ಸಾವಿರ ಹಣ ಹಿಂದಿರುಗಿಸಿದ ಪ್ರಾಮಾಣಿಕ ವಿಕಲಚೇತನ ಯುವಕನಿಗೆ ಅಭಿನಂದನೆಯ ಮಹಾಪೂರ

ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಶಾಂತಿನಗರ ದಲ್ಲಿ ಬಡ ಕೂಲಿಕಾರ್ಮಿಕ ಮಹಿಳೆ ಕಳೆದುಕೊಂಡಿದ್ದ 50 ಸಾವಿರ ರೂಪಾಯಿ ನಗದು ಹಣ ಅಂಗವಿಕಲ ವ್ಯಕ್ತಿಯೊಬ್ಬರಿಗೆ ಸಿಕ್ಕಾಗ ಪ್ರಾಮಾಣಿಕವಾಗಿ ಮಹಿಳೆಗೆ ಹಿಂದಿರುಗಿಸಿದ ಘಟನೆ ನಡೆದಿದೆ.

 

 

50 ಸಾವಿರ ಹಣವನ್ನು ಕಳೆದುಕೊಂಡು ದುಃಖಿತರಾಗಿ ಅಳುತ್ತ ಕುಳಿತಿದ್ದ ನಾಗರತ್ನ ಅವರು ದಿಕ್ಕು ತೋಚತೆ ಕಂಗಾಲಾಗಿದ್ದರು. ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಇವರು. ಸ್ವಸಹಾಯ ಸಂಘದಿಂದ ಸಾಲವನ್ನು ಪಡೆದಿದ್ದರು. ಆ ಸಾಲವನ್ನು ಮರಳಿ ಬ್ಯಾಂಕ್ ಗೆ ಕಟ್ಟಲು ಬೈಕಿನಲ್ಲಿ ಬ್ಯಾಂಕ್ ಗೆ ಹೋಗುವಾಗ ಕವರ್ ನಲ್ಲಿ ಇದ್ದ ಹಣವನ್ನು ಕೈಚೆಲ್ಲಿದ್ದರು ಬೈಕ್ ಮುಂದೆ ಬಂದಾಗ ಹಣ ಬಿದ್ದಿರುವುದು ಅವರ ಅರಿವಿಗೆ ಬಂದಿತು. ಎಷ್ಟೇ ಹುಡುಕಾಡಿದರು ಸಿಗಲಿಲ್ಲ. ಜಗದೀಶ್ ಅವರಿಗೆ ಈ ಹಣ ಸಿಕ್ಕಿತು. ಹಣ ಹುಡುಕುತ್ತ ಅಳುತ್ತಿರುವ ಮಹಿಳೆಯನ್ನು ಕಂಡ ಜಗದೀಶ್ ಮಹಿಳೆಯನ್ನು ವಿಚಾರಿಸಿ ಸ್ವಸಹಾಯ ಸಂಘ ದಾಖಲೆ ನೋಡಿ ಈ ಹಣ ಅವರದ್ದೇ ಎಂದು ಖಾತರಿ ಆದಾಗ ಆ ಹಣವನ್ನು ಅವರಿಗೆ ಕೊಟ್ಟರು.

 

 

ಜಗದೀಶ್ ಅವರ ಪ್ರಾಮಾಣಿಕತೆಗೆ ಮೆಚ್ಚಿ ಆ ಮಹಿಳೆ ಧನ್ಯವಾದ ತಿಳಿಸಿದ್ದಾರೆ. ರಾಜ್ಯಾದ್ಯಂತ ಜಗದೀಶ್ ಅವರಿಗೆ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ. ನಾವು ನಿಜಕ್ಕೂ ನಮ್ಮ ಜೀವನದಲ್ಲಿ ಜಗದೀಶ್ ಅವರನ್ನು ಮಾದರಿ ಆಗಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಹೀಗೆ ಪ್ರಾಮಾಣಿಕರಾದರೆ ನಮ್ಮ ದೇಶ ಇನ್ನು ಎತ್ತರಕ್ಕೆ ಬೆಳೆಯುತ್ತದೆ.

 

 

ಈಗಿನ ಕಾಲದಲ್ಲಿ ದುಡ್ಡು ಸಿಕ್ಕರೆ ಸಾಕು ಜೇಬಿಗೆ ಇಳಿಸಿ ಓಡಿ ಹೋಗುವ ಕೆಲವು ಜನರಿದ್ದಾರೆ ಇಂತಹ ಸಂಧರ್ಭದಲ್ಲಿ ಪ್ರಾಮಾಣಿಕವಾಗಿ ಹಣ ವಾಪಸು ಮಾಡಿದ ಈ ವಿಕಲಚೇತನ ಯುವಕನಿಗೆ ನಿಜಕ್ಕೂ ನೀವು ಗ್ರೇಟ್ ಎನ್ನಲೇಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top