ಭವಿಷ್ಯ

ಮೀನ ರಾಶಿಯವರ ಗುಣ ಮತ್ತು ಸ್ವಭಾವ ಹೇಗಿರುತ್ತೆ. ಅದೃಷ್ಟ ಸಂಖ್ಯೆ, ಬಣ್ಣ, ದಿನ ಮತ್ತು ರತ್ನ ಯಾವುದು ತಿಳ್ಕೊಳ್ಳಿ

ಮೀನ ರಾಶಿಯವರ  ಗುಣ ಲಕ್ಷಣಗಳು,ಅದೃಷ್ಟ ರತ್ನ,ದಿನ,ಸಂಖ್ಯೆ,ದೇವತೆ,ಮಿತ್ರ ರಾಶಿಗಳು ಮತ್ತು ಶತ್ರು ರಾಶಿಗಳು.

 

ನಿಮ್ಮದು ಮೀನ ರಾಶಿಯೇ ? ಹಾಗಾದರೆ  ಮೀನ ರಾಶಿಯವರ ಬಗ್ಗೆ  ತಿಳಿಯಿರಿ

 

 

ಮೀನ ರಾಶಿಯ ಚಿಹ್ನೆ ಎರಡು ಮೀನುಗಳು,ಈ ಎರಡು ಮೀನುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ , ಎರಡು ರೀತಿಯ ಸ್ವಭಾವವನ್ನು ಇವರು ಹೊಂದಿರುತ್ತಾರೆ. ಇದು ಜಲ ತತ್ವ ರಾಶಿಯಾಗಿದ್ದು, ಇವರು ಎತ್ತರವಾಗಿದ್ದು, ಸುಮಾರಾದ ಮೈಕಟ್ಟನ್ನು ಹೊಂದಿರುತ್ತಾರೆ. ಆಡಂಬರದ  ಮತ್ತು ಅದ್ಧೂರಿ ಜೀವನವನ್ನು  ಮಾಡುವವರಾಗಿರುತ್ತಾರೆ.ಇವರದ್ದು  ಆತುರದ ಸ್ವಭಾವ, ಪರೋಪಕಾರಿಯು ಆಗಿರುತ್ತಾರೆ. ದೈವಭಕ್ತಿ ಹೆಚ್ಚಾಗಿ ಇರುತ್ತದೆ.

ಮುಂಗೋಪ ಜಾಸ್ತಿ, ಮಾತಿನಲ್ಲಿ ವಶೀಕರಣ ಮಾಡುವ ಶಕ್ತಿ ಇವರದ್ದು, ಇವರಲ್ಲಿ ಅಗಾಧವಾದ ಕಲ್ಪನಾಶಕ್ತಿ ಇರುತ್ತದೆ. ಹಠವಾದಿಗಳು, ನೇರ ನುಡಿ, ಆಲೋಚನಾ ಶಕ್ತಿ ಹೆಚ್ಚಾಗಿರುತ್ತದೆ, ಚಂಚಲ ಬುದ್ದಿಯವರು , ಪರಿಸ್ಥಿತಿಗಳಿಗೆ ಹೊಂದಿಕೊಂಡು ಹೋಗುವವರಾಗಿರುತ್ತಾರೆ, ಚಂಚಲ ಮನಸ್ಸು,ಏಕಾಂತ ಪ್ರಿಯರು, ವಿಶ್ರಾಂತಿ ಇಲ್ಲದೇ ಕೆಲಸ ಮಾಡುವವರು, ವಿನಯವಂತರು, ವಿಧೇಯತೆ ಉಳ್ಳವರು ಆಗಿರುತ್ತಾರೆ, ದೂರದೃಷ್ಟಿ ಹೊಂದಿದವರು, ಸೌಮ್ಯ ಸ್ವಭಾವ ಹೊಂದಿದವರು, ರೂಪವಂತರು,ದೇಶಾಭಿಮಾನ ಜಾಸ್ತಿ, ದಯಾವಂತರು ಆಗಿರುತ್ತಾರೆ,ಇವರದ್ದು  “ಪರೋಪಕಾರರ್ಥಂ  ಇದಂ ಶರೀರಂ” ಎನ್ನುವ ಸ್ವಭಾವ. ಪ್ರವಾಸ ಮಾಡುವುದು ಇವರಿಗೆ ಬಹಳ ಸಂತೋಷದ ವಿಷಯ .ಇವರಿಗೆ

 

 

ಅದೃಷ್ಟ ರತ್ನ.

ಮೀನ ರಾಶಿಯ ಅದೃಷ್ಟ ರತ್ನ. ಪುಷ್ಯರಾಗ.

ಅದೃಷ್ಟ ಬಣ್ಣ.

ಅದೃಷ್ಟ ಬಣ್ಣ ಹಳದಿ,ಕಿತ್ತಳೆ, ಕೆಂಪು,ಶ್ರೀಗಂಧದ ಬಣ್ಣ,ಬ0ಗಾರದ ಬಣ್ಣ,ಉತ್ತಮ.

ದುರಾದೃಷ್ಟ ಬಣ್ಣ.

ಹಸಿರು ಮತ್ತು ಕಪ್ಪು ಬಣ್ಣವನ್ನು ತಡೆಗಟ್ಟಿ.

 

 

ಆದೃಷ್ಟ ದಿನ.

ಅದೃಷ್ಟದ ದಿನ ಬುಧವಾರ ಮತ್ತು ಗುರುವಾರ.

ಅದೃಷ್ಟ ದೇವತೆ.

ಅದೃಷ್ಟ ದೇವತೆ ಮಹಾವಿಷ್ಣು.

ಅದೃಷ್ಟ  ಸಂಖ್ಯೆ ಒಂದು,.

ಅದೃಷ್ಟ  ಸಂಖ್ಯೆ ಒಂದು, ಮೂರು, ಮತ್ತು ಒಂಬತ್ತು.

ದುರಾದೃಷ್ಟ ಸಂಖ್ಯೆ.

ಐದು ಎನ್ನುವ ಸಂಖ್ಯೆಯನ್ನು ಉಪಯೋಗಿಸಬೇಡಿ.

ಆದೃಷ್ಟ ದಿನಾಂಕ.

ಅದೃಷ್ಟ ದಿನಾಂಕ ಮೂರು, ಹನ್ನೆರಡು, ಇಪ್ಪತ್ತೊಂದು ಮತ್ತು ಮೂವತ್ತು.

ಮಿತ್ರ ರಾಶಿಗಳು.

ಮಿತ್ರ ರಾಶಿಗಳು ಕರ್ಕಾಟಕ ಮತ್ತು ವೃಶ್ಚಿಕ .ರಾಶಿ.

 

 

ಶತ್ರು ರಾಶಿಗಳು.

ಶತ್ರು ರಾಶಿಗಳು ಮೇಷ ಸಿಂಹ ಮತ್ತು ಧನಸ್ಸು.

ಮೀನ ರಾಶಿಯವರ ವಿಶೇಷ ಗುಣ ಏನೆಂದರೆ ಅವರು ಬಹಳ ವಿನಯವಂತರು. ಮೀನ ರಾಶಿಯ ಅಧಿಪತಿ ಗುರು. ಪ್ರತಿದಿನ ಗುರು ಮಂತ್ರವನ್ನು ಪಠಿಸುವುದರಿಂದ ಸಂತಾನ ದೋಷ ಬಗೆಹರಿಯುತ್ತದೆ. ಗುರುವಿನ ಮಂತ್ರ  ಹೀಗಿದೆ

 

“ಓಂ  ವೃಷಭದ್ವಜಾಯ  ಧೀಮಹಿ,

ಗೃಣಿ ಹಸ್ತಾಯ ಧೀಮಹಿ,

 ತನ್ನೊ ಬೃಹಸ್ಪತಿ ಪ್ರಚೋದಯಾತ್”

 

ಪರಿಹಾರಗಳು.

ತೋರು ಬೆರಳಿನ ಕೆಳಗೆ 9 ಎನ್ನುವ ಸಂಖ್ಯೆಯನ್ನು ಕಿತ್ತಳೆ ಬಣ್ಣದಲ್ಲಿ  ಬರೆದುಕೊಳ್ಳಿ.ನಿಮಗೆ ಇದು  ಶಕ್ತಿಯನ್ನು ನೀಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top