ವಿಶೇಷ

ಹುಟ್ಟಿದಾಗ ಕೇವಲ ಅಂಗೈಯಗಲಕ್ಕೆ ಇದ್ದ ಮಗು ಸತ್ತ ಮೇಲೆ ಆ ತಾಯಿ ಏನು ಮಾಡಿದಳು ಗೊತ್ತಾ

ಅಂಗೈಯಗಲ ಇದ್ದ ಮಗು ಆ ಮಗು ಹುಟ್ಟಿದ ತಕ್ಷಣ ಆಶ್ಚರ್ಯದ ಜೊತೆಗೆ ದುಃಖತಪ್ತ ಳಾದಳು ತಾಯಿ

 

ಗರ್ಭಾವಸ್ಥೆ ಎಂಬುದು ಪ್ರತಿಯೊಬ್ಬ ಹೆಣ್ಣು ಮಗುವಿನ ಜೀವನದಲ್ಲಿ ಅತ್ಯಂತ ಸುಮಧುರವಾದ ದಿನಗಳು ಎಲ್ಲರೂ ಈ ಸುಮಧುರವಾದ ದಿನಕ್ಕೆ ಕಾಯುತ್ತಾ ಕುಳಿತಿರುತ್ತಾರೆ , ಹೆಣ್ಣು ಮಕ್ಕಳು ತಾವು ಸಾಯುವಷ್ಟು ನೋವು ಅನುಭವಿಸಿದರೂ ಸಹ ಮನೆಗೆ ಹೊಸ ಅತಿಥಿಯ ಆಗಮನವಾಗುತ್ತದೆ ಎಂದು ಮುಖದಲ್ಲಿ ಸಂತೋಷವನ್ನು ತುಂಬಿಕೊಂಡಿರುತ್ತಾರೆ ಮಗುವನ್ನು ಹೆರುವುದು ಒಂದೇ ಸತ್ತು ಮರುಜೀವ ಪಡೆಯುವುದು ಒಂದೇ ಎಂಬ ಗಾದೆ ಮಾತೇ ಇದೆ ಇದು ನೂರಕ್ಕೆ ನೂರು ಸತ್ಯ .

 

 

ಆ ಮಗುವಿನ ತಾಯಿ ಅಲೆಕ್ಸಿನ್ ಫ್ರಿಟ್ಜ್ , ಅಮೆರಿಕ ಮಹಿಳೆ ಗರ್ಭಿಣಿಯಾಗಿರುತ್ತಾಳೆ ಕೇವಲ ಹತ್ತೊಂಬತ್ತು ವಾರಕ್ಕೆ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಳ್ಳಲು ಶುರುವಾಗುತ್ತದೆ ಏನು ಮಾಡುವುದು ಎಂದು ತೋಚದೆ ಆಕೆ ಅಮೆರಿಕದ ಆಸ್ಪತ್ರೆಯೊಂದಕ್ಕೆ ಅಡ್ಮಿಟ್ ಆಗುತ್ತಾರೆ .

ಆಕೆ ಹುಟ್ಟುವುದಕ್ಕೆ ಮುಂಚೆಯೇ ತನಗೆ ಹುಟ್ಟುವುದು ಗಂಡು ಮಗುವೇ ಎಂದು ನಿರ್ಧರಿಸಿಕೊಂಡು ಆತನಿಗೆ ಹುಟ್ಟುವ ಮುಂಚೆಯೇ ವಾಲ್ಟರ್ ಜೋಶಿಲೆ ಫ್ರಿಟ್ಜ್ ಎಂಬ ಹೆಸರನ್ನು ಇಟ್ಟಿರುತ್ತಾಳೆ ಆಕೆ .

 

 

ಕೇವಲ ಹತ್ತೊಂಬತ್ತು ವಾರಕ್ಕೆ ಭೂಮಿಯ ಮೇಲೆ ಬಂದ ಆ ಪುಟ್ಟ ಕಂದಮ್ಮ ತನ್ನ ತಾಯಿಯ ಕೈಯಲ್ಲಿ ಕೊನೆಯ ಉಸಿರನ್ನು ಎಳೆಯುತ್ತದೆ ಇನ್ನು ಮಗುವನ್ನು ಬದುಕಿಸಲಾಗುವುದಿಲ್ಲ ಎಂದು ಮಾಂಸದ ಮುದ್ದೆಯಂತಿದ್ದ ಮಗುವನ್ನು ಕೈಗಿಟ್ಟರು ಡಾಕ್ಟರ್ ಗಳು , ಹತಾಶಳಾದ ತಾಯಿ ತನ್ನ ಮಗುವನ್ನು ಕೈಯಲ್ಲಿಟ್ಟು ಕೊಂಡು ಆ ಮಗುವನ್ನು ನೋಡಿ ಸಾಕಷ್ಟು ದುಃಖ ಪಡುತ್ತಾಳೆ .

 

 

 

ಆದರೂ ಪರವಾಗಿಲ್ಲ ಎಂದು ಮಗುವಿನ ಭಾವ ಚಿತ್ರಗಳನ್ನು ತೆಗೆದರೂ ಅಲೆಕ್ಸಿಸ್ ಅವರ ಪತಿ ಇದಾದ ಬಳಿಕ ಅಲೆಕ್ಸಿಸ್ ತಮ್ಮ ಮಗುವಿನ ಭಾವಚಿತ್ರಗಳನ್ನು ಹಾಗೂ ತಮ್ಮ ಮಗುವಿನ ಹುಟ್ಟಿನ ಕಥೆಯನ್ನು ಗರ್ಭಾವಸ್ಥೆಯ ಮೊದಲ ದಿನದಿಂದ ಮಗು ಹುಟ್ಟುವವರೆಗೂ ತಾವು ಅನುಭವಿಸಿದ ಎಲ್ಲ ನೋವು ನಲಿವುಗಳನ್ನು ಹಂಚಿಕೊಂಡರು ಈ ಕಥೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.

 

 

 

ಅಮೆರಿಕದಲ್ಲಿ ಪ್ರತಿವರ್ಷ ಗರ್ಭಪಾತವಾಗಿ ಒಂದು ಮಿಲಿಯನ್ ಮಕ್ಕಳು ಸಾವನ್ನಪ್ಪುತ್ತಾರೆ ಇದೇ ಉದ್ದೇಶದಿಂದ ಅಲೆಕ್ಸಿಸ್ ತಮ್ಮ ಕಥೆಯನ್ನು ಹಂಚಿಕೊಂಡಿದ್ದರು ತಮ್ಮಂತೆಯೇ ದುಃಖತಪ್ತ ತಾಯಿಯಂದಿರಿಗೆ ಈ ಕಥೆ ಆಶಾದಾಯಕವಾಗಲಿದೆ ಎಂದು ಅಲೆಕ್ಸಿಸ್ ಭಾವಿಸಿದ್ದರು ಇನ್ನು ಈ ಕಥೆ ಕೋಟ್ಯಂತರ ಮಂದಿ ಶೇರ್ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top