ವಿಶೇಷ

ಕೆಲವು ಸಂಪ್ರದಾಯಗಳಲ್ಲಿ ಸತ್ತ ಮನುಷ್ಯನ ಹೆಬ್ಬೆರಳುಗಳನ್ನು ದಾರದಲ್ಲಿ ಕಟ್ಟುತ್ತಾರೆ ಏಕೆ ಗೊತ್ತೇ

ಮನುಷ್ಯ ಸತ್ತ ಮೇಲೆ ಅವನ ಬೆರಳುಗಳನ್ನು ದಾರದಲ್ಲಿ ಕಟ್ಟುತ್ತಾರೆ ಏಕೆ ಗೊತ್ತೇ

 

 

ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ಸಾವು ಎಂಬುದು ಖಚಿತ ಮನುಷ್ಯ ತಾನು ವಿಜ್ಞಾನದಲ್ಲಿ ಸಂಶೋಧನೆಯಲ್ಲಿ ಎಷ್ಟೇ ಮುಂದಿದ್ದೇನೆ ಎಂದುಕೊಂಡರು ಮರಣವನ್ನು ತಪ್ಪಿಸಿಕೊಳ್ಳಲು ಇಲ್ಲಿಯವರೆಗೆ ಸಾಧ್ಯವಾಗಲಿಲ್ಲ ಏಕೆಂದರೆ ಮರಣ ಎಂಬುದು ವಿಧಿಲಿಖಿತ ಹುಟ್ಟಿದಾಗಲೇ ನಮ್ಮ ಮರಣವನ್ನು ದೇವರು ಬರೆದು ಕಳಿಸಿರುತ್ತಾನೆ ಎಂದು ಅನೇಕ ಪುರಾಣ ಕಥೆಗಳು ಹಾಗೂ ಶಾಸ್ತ್ರಗಳು ಹೇಳುತ್ತವೆ .

 

ಸಾವು ಎಂಬುದು ಸಕಲ ಜೀವಿಗಳಲ್ಲೂ ಇದೆ ಮನುಷ್ಯ ಇದನ್ನು ಹೊರತು ಪಡಿಸಲು ಸಾಧ್ಯವಾಗಲಿಲ್ಲ ಆದರೆ ಮನುಷ್ಯ ಬದುಕಿರುವವರೆಗೂ ಒಂದು ಜಾತಿ ಧರ್ಮಕ್ಕೆ ಹಾಗೂ ಅದರ ಸಾಂಪ್ರದಾಯಿಕ ಕಟ್ಟುಪಾಡುಗಳಿಗೆ ಬದಲಾಗಿರುತ್ತಾನೆ ಸತ್ತಾಗ ಸಹ ಕೆಲವು ವಿಧಿ ವಿಧಾನಗಳನ್ನು ಪಾಲಿಸಿಯೇ ಬೇಕು , ಅವರವರ ಧರ್ಮಕ್ಕೆ ಹಾಗೂ ಜಾತಿಗೆ ಇತರ ಕಟ್ಟುಪಾಡುಗಳಿಗೆ ಅನುಗುಣವಾಗಿ ಮನುಷ್ಯನ ಅಂತಿಮ ವಿಧಿ ವಿಧಾನಗಳು ಇರುತ್ತವೆ .

 

 

ಹಿಂದೂ ಸಂಪ್ರದಾಯಗಳಲ್ಲಿ ಕೆಲವು ವಿಧಾನಗಳನ್ನು ಅನುಸರಿಸಲಾಗುತ್ತದೆ ಮನುಷ್ಯನ ದೇಹವನ್ನು ಸುಡಲಾಗುತ್ತದೆ ಇದಕ್ಕೂ ಮುಂಚೆ ಮೃತದೇಹಕ್ಕೆ ಸ್ನಾನ ಮಾಡಿಸಲಾಗುತ್ತದೆ ಮೆರವಣಿಗೆ ಮಾಡಲಾಗುತ್ತದೆ ಇತರ ಅನೇಕ ಕಟ್ಟುಪಾಡುಗಳು ಇವೆ , ಇನ್ನು ಕೆಲವು ಸಂಪ್ರದಾಯಗಳ ಪ್ರಕಾರ ಸತ್ತ ಮನುಷ್ಯನ ದೇಹವನ್ನು ನೆಲದಲ್ಲಿ ಹೂಳಲಾಗುತ್ತದೆ , ಇದಕ್ಕೂ ಮುನ್ನ ಸತ್ತ ಮೃತ ದೇಹಕ್ಕೆ ಎರಡು ಹೆಬ್ಬೆರಳುಗಳನ್ನು ಸೇರಿಸಿ ದಾರದಲ್ಲಿ ಕಟ್ಟುತ್ತಾರೆ ಹೀಗೆ ಏಕೆ ಮಾಡುತ್ತಾರೆ ಗೊತ್ತೇ?

ಸತ್ತ ಮೃತದೇಹದ ಹೆಬ್ಬೆರಳನ್ನು ಸೇರಿಸಿ ಕಟ್ಟಲಾಗುತ್ತದೆ ಈ ದಾರ ವ್ಯಕ್ತಿ ಸತ್ತ ನಂತರ ಹಾಗೂ ಕೊನೆಗೆ ಅಗ್ನಿ ಸ್ಪರ್ಶ ಮಾಡುವವರೆಗೂ ಅಥವಾ ಮಣ್ಣಿನಲ್ಲಿ ಹೂಳುವವರೆಗೂ ಹಾಗೆ ಇರುತ್ತದೆ .

 

 

ಹಿಂದೂ ಸಂಪ್ರದಾಯದ ನಂಬಿಕೆಯ ಪ್ರಕಾರ ಮನುಷ್ಯ ಸತ್ತ ಮೇಲೆ ಅವನ್ನು ಶ್ರಾದ್ಧ ಕಾರ್ಯ ಮಾಡುವವರೆಗೂ ಅವನ ಆತ್ಮ ಈ ಭೂಮಿಯ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ , ಸತ್ತ ವ್ಯಕ್ತಿ ಮತ್ತೆ ಮನೆಯೊಳಗೆ ಪ್ರವೇಶ ಮಾಡಬಾರದು ಎಂದು ಸತ್ತ ವ್ಯಕ್ತಿಯ ಹೆಬ್ಬೆರಳನ್ನು ಸೇರಿಸಿ ದಾರದಲ್ಲಿ ಕಟ್ಟಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top