ಹೆಚ್ಚಿನ

ದೇವಾಲಯದ ಅರ್ಚಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

ದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳಗಳು ಹೆಚ್ಚಾಗುತ್ತಿವೇ. ಈ ಲೈಂಗಿಕ ಕಿರುಕುಳ ಸಮಸ್ಯೆ ಸೆಲೆಬ್ರೆಟಿ ಮಹಿಳೆಯರಿಗೂ ಕೂಡ ಕಾಡುತ್ತಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿದ್ದ ರೂಪದರ್ಶಿ ಅರ್ಶಿ ಖಾನ್ ಅವರು ದೇವಾಲಯದ ಅರ್ಚಕರೋಬ್ಬರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ಸಾಯಿ ಧಾಮ್ ದೇವಾಲಯದ ಅರ್ಚಕರಾಗಿರುವ ಪಂಡಿತ್ ರಮೇಶ್ ಜೋಶಿ ಮೇಲೆ ಅರ್ಶಿ ಖಾನ ಈ ಆರೋಪ ಮಾಡಿದ್ದಾರೆ. ಈ ಹಿಂದೆ 2 ವರ್ಷಗಳ ಹಿಂದೆ ತನ್ನ ಬಳಿ ಪಡೆದ 40000 ರೂಪಾಯಿ ಹಣವನ್ನು ಆರ್ಶಿ ಖಾನ್ ತನಗೆ ಮರಳಿಸಿಲ್ಲ ಎಂದು ಪಂಡಿತ್ ರಮೇಶ್ ಆರ್ಶಿ ಖಾನ್ ಮೇಲೆ ದೂರಿದ್ದರು. ಇದರ ಬೆನ್ನಲ್ಲೇ ಈಗ ರಮೇಶ್ ಮೇಲೆ ಲೈಂಗಿಕ ಆರೋಪ ಮಾಡಿದ್ದಾರೆ.

 

 

ಆರ್ಶಿ ತನ್ನ ಹಣ ಮರಳಿ ಕೊಟ್ಟಿಲ್ಲ ಎಂದು ರಮೇಶ್ ಸಮ್ತಾ ನಗರ್ ಪೊಲೀಸ್ ಠಾಣೆಗೆ ದೂರು ಕೂಡ ಕೊಟ್ಟಿದ್ದರು. ದೂರಿನ ಪ್ರಕಾರ ದೇವಾಲಯಕ್ಕೆ ದರ್ಶನಕ್ಕಾಗಿ ಬರುತ್ತಿದ್ದ ಅರ್ಶಿಯ ಪರಿಚಯ ರಮೇಶ್ ಗೆ ಇತ್ತು. ಒಂದು ಸಾರಿ ತನ್ನ ಹಣ ಕಳುವು ಆಗಿರುವುದಾಗಿ ತನಗೆ ತುರ್ತಾಗಿ ಚಿಕಿತ್ಸೆ ಪಡೆಯಲು ಹಣ ಬೇಕಾಗಿ ಕೇಳಿದ್ದರಂತೆ ಆಗ ಅರ್ಚಕ ಅರ್ಶಿಗೆ ಹಣ ನೀಡಿದ್ದರಂತೆ. ಆಮೇಲೆ ಆರ್ಶಿ ದೇವಸ್ಥಾನಕ್ಕೆ ಬರುವುದನ್ನು ನಿಲ್ಲಿಸಿದರು ನನ್ನ ಹಣ ಕೊಡಲು ನಿರಾಕರಣೆ ಮಾಡಿದರು ಎಂದು ಅರ್ಚಕ ದೂರಿನಲ್ಲಿ ತಿಳಿಸಿದ್ದಾರೆ.

 

 

ಇದಕ್ಕೆ ವಿರುದ್ಧ ಪ್ರತಿ ದೂರನ್ನು ನೀಡಿರುವ ಆರ್ಶಿ ರಮೇಶ್ ಜೋಶಿ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪ ಮಾಡಿದ್ದಾರೆ. ಇದರ ಜೊತೆ ಸುಲಿಗೆ ಮಾಡಿದ್ದಾರೆ ಎಂದು ಕೂಡ ದೂರಿದ್ದಾರೆ. ಇಬ್ಬರ ಕೇಸ್ ಗಳನ್ನೂ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top