ಉಪಯುಕ್ತ ಮಾಹಿತಿ

ಅಡ್ರೆಸ್ಸ್ ಪ್ರೂಫ್ ಮತ್ತು ಗುರುತಿನ ಚೀಟಿ ಇಲ್ಲದೆ ಸುಲಭವಾಗಿ ಪಾನ್ ಕಾರ್ಡ್ ಮಾಡಿಸೋದು ಹೇಗೆ ಗೊತ್ತಾ?

ಇತ್ತೀಚಿಕೆ ಬಹುತೇಕ ಎಲ್ಲಾ ಆರ್ಥಿಕ ಕೆಲಸಗಳಿಗೆ ಪಾನ್ ಕಾರ್ಡ್ ನಂಬರ್ ಕೇಳುವುದು ಮಾಮೂಲಿಯಾಗಿದೆ. ಅಸಲಿಗೆ ಈ ಪಾನ್ ಕಾರ್ಡ್ ಮಾಡಿಸೋದೇ ದೊಡ್ಡ ತಲೆನೋವು ಇದನ್ನು ಮಾಡಿಸಲು ಕೆಲವು ಅಗತ್ಯ ಡಾಕ್ಯುಮೆಂಟ್ ಗಳನ್ನೂ ನೀವು ಕೊಡ್ಲೇಬೇಕು ಅಂತ ನೀವು ಹೇಳೋದನ್ನು ನೀವು ಕೇಳಿರುತ್ತೀರಿ ಆದರೆ ಅಡ್ರೆಸ್ ಪ್ರೂಫ್ ಮತ್ತು ಗುರುತಿನ ಚೀಟಿಗಳಿಲ್ಲ ಅಂತ ತಲೆಕೆಡಿಸಿಕೊಂಡು ಕೂರೋಹಾಗಿಲ್ಲ ಏಕೆಂದರೆ ಅವೇನೂ ಇಲ್ಲದಿದ್ದರೂ ನೀವು ಪಾನ್ ಕಾರ್ಡ್ ಪಡ್ಕೋಬೋದು ಅದು ಹೇಗೆ ಅಂತೀರಾ? ಮುಂದೆ ಓದಿ.

 

 

ಅಡ್ರೆಸ್ಸ್ ಪ್ರೂಫ್ ಇಲ್ಲದೆಯೇ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ನೀವು ಯಾವುದಾದರೂ ಒಬ್ಬ ಗೆಜೆಟೆಡ್ ಆಫೀಸರ್ ಅಥವಾ ಎಂಎಲ್ಎ, ಎಂಪಿಯವರಿಂದ ಆದಾಯ ತೆರಿಗೆ ಇಲಾಖೆಯಿಂದ ಸೂಚಿಸಲಾದ ನಿರ್ದಿಷ್ಟ ಸ್ವರೂಪದ ಒಂದು ಪ್ರಮಾಣ ಪತ್ರವನ್ನು ಪಡೆಯಬೇಕು.ಪಾನ್ ಕಾರ್ಡ್ ಗೆ ಅಪ್ಲೈ ಮಾಡಲು ಆದಾಯ ತೆರಿಗೆ ಇಲಾಖೆಯಿಂದ ನಿಯಮ 114(04) ಕಲಂ ರ ಅಡಿಯಲ್ಲಿ ಸೂಚಿಸಲಾದ ನಿರ್ದಿಷ್ಟ ಅರ್ಜಿಯು ಈ ಕೆಳಕಂಡಂತಿದೆ.

 

 

ಈ ಪ್ರಮಾಣ ಪಾತ್ರವನ್ನು ಮತ್ತು ಅದನ್ನು ನೀಡುವ ವ್ಯಕ್ತಿಯ ಅಡ್ರೆಸ್ಸ್ ಐಡಿ ಪ್ರೂಫ್’ನ ಒಂದು ಜೆರಾಕ್ಸ್ ಪ್ರತಿಯನ್ನು ಪಾನ್ ಕಾರ್ಡ್ ಅಪ್ಲೈ ಫಾರಂ ಜೊತೆ ಲಗತ್ತಿಸಿ ಅರ್ಜಿ ಸಲ್ಲಿಸಿದರೆ ನಿರ್ದಿಷ್ಟ ಅವಧಿಯೊಳಗೆ ನಿಮ್ಮ ಮನೆ ಬಾಗಿಲಿಗೆ ಪಾನ್ ಕಾರ್ಡ್ ಬರುತ್ತದೆ. ಐಡಿ ಪ್ರೂಫ್ ಗಳಿಲ್ಲದೆ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ ವಿಧಾನ ಬಿಟ್ಟು ಬೇರೆ ಯಾವುದೇ ಮಾರ್ಗಗಳಿಲ್ಲ. ಮೇಲಿನ ಪ್ರಮಾಣ ಪಾತ್ರವನ್ನು ಪಡೆಯುದರಿಂದ ಮಾತ್ರ ಪಡೆಯಬಹುದಾದರಿಂದ ಬೇರೆ ಯಾರಾದರೂ ನಾವು ಮಾಡಿಸಿಕೊಡುತ್ತೇವೆ ಇಷ್ಟು ಮೊತ್ತದ ಹಣ ಕೊಡು ಎಂದು ಬೇಡಿಕೆಯಿಟ್ಟರೆ ಅಂತವರ ಕೈಗೆ ದುಡ್ಡು ಕೊಟ್ಟು ಯಾಮಾರಬೇಡಿ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top