ಜ್ಯೋತಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಎರಡೂ ರಾಶಿಯವರಿಗೆ ಮುಂದೆ ನಡೆಯುವುದು ಮೊದಲೇ ಅಸ್ಪಷ್ಟವಾಗಿ ತಿಳಿಯುತ್ತದೆಯಂತೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಎರಡೂ ರಾಶಿಯವರಿಗೆ ಮುಂದೆ ನಡೆಯುವುದು ಮೊದಲೇ ತಿಳಿಯುತ್ತದೆಯಂತೆ.

 

ಜ್ಯೋತಿಷ್ಯಶಾಸ್ತ್ರದಲ್ಲಿ ಅನೇಕನೇಕ ವಿಷಯಗಳ ಬಗ್ಗೆ ವಿಶ್ಲೇಷಣೆಗಳು  ಇವೆ ಮತ್ತು ವಿವರಣೆಗಳು ಇವೆ. ಈ ಶಾಸ್ತ್ರ ಇಂದಿನದಲ್ಲ, ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿ ಇರುವಂತದ್ದು. ಕೇವಲ ಜನಿಸಿದ ಸಮಯ ಹಾಗೂ ದಿನಾಂಕ  ಹೇಳಿದರೆ ಸಾಕು  ಆಯಾ ಮನುಷ್ಯನ ಗ್ರಹಬಲ, ರಾಶಿ, ನಕ್ಷತ್ರ ಇತ್ಯಾದಿತ್ಯಾದಿ ವಿಷಯಗಳನ್ನು  ಸಾಕಷ್ಟು ವಿಸ್ತಾರವಾಗಿ ಹೇಳಬಹುದು. ಎನ್ನುತ್ತಾರೆ ಜ್ಯೋತಿಷ್ಯಕಾರರು.

 

 

ಇನ್ನು  ಜ್ಯೋತಿಷ್ಯದಲ್ಲಿ ಹೇಳಿರುವಂತಹ ಕೆಲವು ವಿಷಯಗಳು ಜೀವನದಲ್ಲಿ ಜರುಗೇ ಜರುಗುತ್ತವೆ ಎಂದು ನಂಬುವ ಜನರು ಇದ್ದಾರೆ. ಹೀಗಾಗಿ  ಜ್ಯೋತಿಷ್ಯ ಶಾಸ್ತ್ರಕ್ಕೂ ಮನುಷ್ಯನ ಜೀವನಕ್ಕೂ ಅವಿನಾಭಾವ ಸಂಬಂಧ ಇದೆ ಎಂದರೆ  ತಪ್ಪಿಲ್ಲ. ಮನುಷ್ಯನ ಜೀವನದ ಏಳು ಬೀಳುಗಳು ,ಕಷ್ಟ ಸುಖಗಳು ಇನ್ನೂ ಯಾವಾಗ ಏನಾಗುತ್ತದೆ  ?ಅದು  ಯಾರಿಗೂ ಗೊತ್ತಿಲ್ಲ ?  ಆದರೂ  ಸಹ ಮನುಷ್ಯನು ತನ್ನ ಬಗ್ಗೆ ಜೀವನದಲ್ಲಿ ಕಾಳಜಿ ಎಚ್ಚರಿಕೆ ವಹಿಸಿಕೊಂಡೇ ಮುಂದುವರೆಯುತ್ತಾರೆ.

ತಮ್ಮ  ಭವಿಷ್ಯತ್ತು ಯಾವ  ರೀತಿಯಾಗಿ ಇರುತ್ತದೆ. ಏನು  ಮಾಡಿದರೆ ಜೀವನ ಸುಗಮವಾಗಿ  ಸುಂದರವಾಗಿ ಸಾಗುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ, ಮತ್ತು ಅವುಗಳನ್ನು  ಪಾಲಿಸುವ ಹಂಬಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಸಮಯಕ್ಕೆ ಸರಿಯಾಗಿ   ಯಾವುದೇ ಆಗಲಿ ಜರುಗಬೇಕಾದದ್ದು ಅತ್ಯಗತ್ಯ.

 

 

ಪ್ರತಿಯೊಬ್ಬರಿಗೂ ಭವಿಷ್ಯತ್ತಿನ ಬಗ್ಗೆ ಒಂದು ನಂಬಿಕೆ ಇದ್ದೇ ಇರುತ್ತದೆ. ನಂಬಿಕೆ ಇಲ್ಲದ ಜೀವನ, ಜೀವನದ ಬಗ್ಗೆ ನಂಬಿಕೆ ಇಡದೆ ಜೀವಿಸಲು ಸಹ  ಆಗುವುದಿಲ್ಲ. ನಮ್ಮ  ಜೀವನದ ಬಗ್ಗೆ ನಮಗೆ ಸ್ಥಿರತೆ  ಕೂಡ ಇರುವುದಿಲ್ಲ. ಇನ್ನು ಇತರರ ಬಗ್ಗೆ ನಾವು ಹೇಳೋದು  ಕಷ್ಟವೇ .ಒಳ್ಳೆಯದೇ ಆಗಲಿ  ಕೆಟ್ಟದೇ ಆಗಲಿ ಅದರ ಬಗ್ಗೆ ಯೋಚಿಸಲು ಅಥವಾ ಆನಂದ ಪಡುವುದಾಗಲಿ, ದುಃಖಪಡುವುದಾಗಲಿ ಜರುಗುತ್ತದೆ. ಅದರೆ ಈ ಎರಡು  ರಾಶಿಗಳಿಗೆ  ಸಂಬಂಧಪಟ್ಟಂತೆ  ನೋಡಿದಾಗ ವಿಚಿತ್ರವಾದ ಸಂಗತಿಯೊಂದು ತಿಳಿದು ಬಂದಿದೆ.

 ಈ ಎರಡು ರಾಶಿಗಳಿಗೆ ಅವರ ಜೀವನದಲ್ಲಿ ಜರುಗುವ ಘಟನೆಗಳ ಅರಿವು ಮೊದಲಿಗೆ ತಿಳಿಯುತ್ತದೆಯಂತೆ. ಆದರೆ  ಆ ರಾಶಿಗಳು ಯಾವುವು ? ಅವರಿಗೆ ಏನೇನು ಗೊತ್ತಾಗುತ್ತದೆ ?

 

ಮಿಥುನ ರಾಶಿ.

 

 

ಈ ರಾಶಿಯಲ್ಲಿ ಜನಿಸಿದವರಿಗೆ ತಮ್ಮ ಜೀವನದಲ್ಲಿ ನಡೆಯುವ ಕೆಲವು ಸಂಗತಿಗಳು,ಕೆಲವು ವಿಷಯಗಳು  ತಿಳಿದುಕೊಳ್ಳುವ ಸಾಮರ್ಥ್ಯ ಅವರಿಗೆ ಇರುತ್ತಂತೆ.  ಜೀವನದಲ್ಲಿ  ಜರುಗಬಹುದಾದ ಒಳಿತಾಗಲಿ ಅಥವಾ ಕೆಡುಕೇ ಆಗಲಿ  ಅವು ಇವರಿಗೆ  ಮೊದಲಿಗೆ ತಿಳಿಯುತ್ತದೆಯಂತೆ.  ಜೀವನದಲ್ಲಿ ನಟಿ ಸಂಭವಿಸಬಹುದಾದಂಥ  ಇನ್ನು ವ್ಯಾಪಾರ ಕುರಿತು ಜೀವನದಲ್ಲಿ ಎಂಥ ವಿಷಯಗಳು ಸನ್ನಿವೇಶಗಳು ಜರುಗಬಹುದು ಎನ್ನುವುದರ ಕುರಿತು ಇವರಿಗೆ ಮೊದಲೇ ಗೋಚರವಾಗುತ್ತದೆ. ಇನ್ನು ಯಾವ ವ್ಯಾಪಾರದಲ್ಲಿ ಹಣ ಹೂಡಿದರೆ ಲಾಭದಾಯಕ ಯಾವ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವುದಕ್ಕೆ  ಅವರ ಮಸ್ತಿಷ್ಕದಲ್ಲಿ ಸಂಕ್ಷಿಪ್ತವಾಗಿ ತಿಯಿಯುತ್ತದೆಯಂತೆ. ಹೀಗೆ ಈ ಮಿಥುನ ರಾಶಿಯ ಮೊದಲಿಗೆ ಊಹೆ ಮಾಡಿಕೊಳ್ಳುವ ಶಕ್ತಿ ಹೆಚ್ಚಾಗಿರುತ್ತದೆ ಎಂದು ಜ್ಯೋತಿಷಿ ಶಾಸ್ತ್ರಗಳು ಹೇಳುತ್ತದೆ.

 

ಮಕರ ರಾಶಿ.

 

 

ಇವರು  ಕೂಡ ಮೊದಲಿನಿಂದಲೇ ಕೆಲವು ವಿಷಯಗಳ ಕುರಿತು ತಿಳಿದುಕೊಳ್ಳುವ ಶಕ್ತಿ ಇವರಿಗೆ ಇರುತ್ತದೆಯಂತೆ. ಆದ್ದರಿಂದ ಇವರ  ಜೀವನದಲ್ಲಿ ಜರುಗ ಬಹುದಾದ ಕೆಲವು ವಿಷಯಗಳನ್ನು ಮೊದಲೇ ಊಹಿಸಿಕೊಂಡು ಅವರು ತಿಳಿದು ಕೊಂಡಿರುತ್ತಾರೆ.  ಇಂತಹ ವಿಷಯಗಳು ಚಿಕ್ಕದಿರಲಿ ಅಥವಾ ದೊಡ್ಡದಾಗಿರಲಿ  ಇವರಿಗೆ ಅವುಗಳನ್ನು ಗ್ರಹಿಸುವ ಸಾಮರ್ಥ್ಯ ಅವರಿಗೆ ಇರುತ್ತದೆಯಂತೆ. ಆಷ್ಟೇ ಅಲ್ಲ  ಮೊದಲಿಗೆ ಆ ವಿಷಯಗಳು  ತಿಳಿದು ಬರುತ್ತವಂತೆ. ಹೀಗೆ ಮಕರ ರಾಶಿಯವರಿಗೆ ತಮ್ಮ ಜೀವನದಲ್ಲಿ ಮತ್ತು ಕೆಲವೊಂದು ಸಂಘಟನೆಗಳು, ಕೆಲವೊಂದು ವಿಷಯಗಳು ಮೊದಲಿಗೆ ತಿಳಿಯುತ್ತದೆ ಎಂದು ಹೇಳುತ್ತಾರೆ  ಜ್ಯೋತಿಷ್ಯಕಾರರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top