ವಿಶೇಷ

ಸೇನೆಯಲ್ಲಿ ಅಸಮರ್ಥ, ನಿವೃತ್ತಿ ಹೊಂದಿದ ಮತ್ತು ತೀವ್ರವಾದ ಅನಾರೋಗ್ಯದಿಂದ ಬಳಲುತ್ತಿರುವ ನಾಯಿಗಳಿಗೆ ವಿಷ ಕೊಟ್ಟು ಸಾಯಿಸುತ್ತಾರೆ ಯಾಕೆ ಗೊತ್ತಾ

ನಿವೃತ್ತಿಯ ನಂತರ ಸೇನೆಯ ನಾಯಿಗಳನ್ನು ವಿಷ ಕೊಟ್ಟು ಸಾಯಿಸುತ್ತಾರೆ. ಯಾಕೆ ಗೊತ್ತಾ  ?

 

 

ದೇಶ ಕಾಯುವ ಸೈನಿಕರಲ್ಲಿ ಮನುಷ್ಯರು ಮಾತ್ರ ಇರುವುದಿಲ್ಲ, ಬದಲಾಗಿ ಅವರ ಪ್ರತಿ ಹೆಜ್ಜೆಗಳಲ್ಲೂ ಸಂಗಾತಿಯಾಗಿ ಹೆಜ್ಜೆ ಹಾಕುತ್ತಾ ತಮ್ಮ ಪ್ರಾಣ ಅರ್ಪಿಸುವ ಶ್ವಾನಗಳು ಕೂಡ ಸೈನಿಕರಷ್ಟೇ ಪಾಲುದಾರರಾಗಿ ಇರುತ್ತವೆ.

ಶ್ವಾನಗಳು ಸೈನಿಕರಿಗೆ ಶತ್ರುಗಳು  ಅಡಗಿಸಿ ಇಟ್ಟಿರುವ ಬಾಂಬುಗಳನ್ನು, ಭಯೋತ್ಪಾದಕರ ಅಡಗು ತಾಣಗಳನ್ನು ಹುಡುಕುವ ಇತ್ಯಾದಿ ಕಾರ್ಯಗಳನ್ನು ಮಾಡುತ್ತವೆ. ನಾಯಿಗಳು ಈ ನಿಯತ್ತಿನ ಕಾರಣದಿಂದಾಗಿ ಮನುಷ್ಯನ ಗೆಳೆಯನಾಗಿ, ತನ್ನ ನೈಜ ಗೆಳೆಯ ಒಂದೊಮ್ಮೆ ಸಹಾಯ ಮಾಡಲು, ಹಿಂದೇಟು ಹಾಕಬಹುದು. ಆದರೆ ನಾಯಿಗಳು ಯಾವತ್ತೂ ಹಿಂಜರಿಯುವುದಿಲ್ಲ. ಇದರ ಹೊರತಾಗಿ ದೇಶದ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ನಾಯಿಗಳನ್ನು ನಿವೃತ್ತಿಯ ನಂತರ ವಿಷ ತಿನ್ನಿಸಿ ಚಿರ ನಿದ್ರೆಗೆ ಜಾರಿಸುತ್ತಾರೆ. ಯಾಕಾಗಿ ಹೀಗೆ ಮಾಡುತ್ತಾರೆ ? ಎಂದು ತಿಳಿಯೋಣ ಬನ್ನಿ

 

 

ಸೇನೆಯ ನಾಯಿಗಳಲ್ಲಿ ಮೂರು ವಿಧದ ನಾಯಿಗಳು ಇವೆ.  ಇವುಗಳಲ್ಲಿ ಲ್ಯಾಬ್ರಡಾರ್, ಜರ್ಮನ್ ಶಫರ್ಡ್ ಹಾಗೂ ಬೆಲ್ಜಿಯನ್ ಶೆಫರ್ಡ್. ಸ್ಥಳೀಯ ನಾಯಿಗಳು ಸಹ ಇರುತ್ತವೆ. ಸೇನೆಗೆ ಸೇರಿಸಲ್ಪಡುವ ನಾಯಿಗಳನ್ನು ವಿಶೇಷವಾಗಿ ನೋಡಿಕೊಳ್ಳಲಾಗುತ್ತದೆ .

ಅವುಗಳ ಊಟೋಪಾಚಾರ, ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ವಿಶೇಷ ಗಮನ ವಹಿಸಲಾಗುತ್ತದೆ. ಪ್ರತಿ ಕ್ಷಣವೂ ಸೇನಾಧಿಕಾರಿಗಳೇ (ಅಲರ್ಟ್) ಎಚ್ಚರಿಕೆಯಿಂದ ಇರುವಂತೆ ವಿಶೇಷ ತರಬೇತಿ ನೀಡಲಾಗುತ್ತದೆ .

 

ವಿಷ ತಿನ್ನಿಸಿ ಸಾಯಿಸಲಾಗುತ್ತದೆ.

 

 

ಯಾವುದೇ ಶ್ವಾನವು ಒಂದು ತಿಂಗಳಿಗಿಂತ ಹೆಚ್ಚು ಕಾಲ ಅನಾರೋಗ್ಯವಾಗಿದ್ದರೆ, ಅಥವಾ ಸರಿಯಾಗಿ ಡ್ಯೂಟಿ ಮಾಡಲು ಅಸಮರ್ಥವಾಗಿದ್ದರೆ, ಅಂತಹ ನಾಯಿಗಳನ್ನು ಅನಿಮಲ್ ಯುಥನೇಶಿಯಾ ಎಂಬ ವಿಷವನ್ನು ತಿನ್ನಿಸಿ ಕೊಲ್ಲಲಾಗುತ್ತದೆ.

ಯಾಕೆಂದರೆ ನಿವೃತ್ತಿಯ ನಂತರ ನಾಯಿಗಳನ್ನು ಕೊಲ್ಲುವುದು ಬ್ರಿಟಿಷರ ಕಾಲದಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಇವುಗಳನ್ನು ಕೊಲ್ಲಲು ಎರಡು ಮುಖ್ಯ ಕಾರಣ, ಈ ರೀತಿಯಾಗಿವೆ.

1. ಶ್ವಾನಗಳಿಗೆ ಸೇನೆಯ ಬೇಸ್ ಗಳ ಸಂಪೂರ್ಣ ಲೊಕೇಷನ್ ತಿಳಿದಿರುತ್ತದೆ. ಹಾಗೂ ಹಲವು ರಹಸ್ಯಗಳು ತಿಳಿದಿರುತ್ತದೆ. ಇದರಿಂದ ಅಪಾಯದ ಸಾಧ್ಯತೆಗಳಿರುತ್ತದೆ.

 

 

2. ಸೇನೆಯು ನೀಡಿದ್ದ ಸೌಲಭ್ಯ, ಊಟೋಪಚಾರ ಹಾಗೂ ಆರೈಕೆಯನ್ನು ಇತರ ಯಾವುದೇ ಪ್ರಾಣಿ ಸಂಘಗಳು ನೀಡಲು ಸಾಧ್ಯವಿಲ್ಲ ಹಾಗೂ ನಾಯಿಗಳು ಸೇನೆಯ ವಾತಾವರಣ ಹಾಗೂ ಆರೈಕೆಯನ್ನು ಇತರ ಯಾವುದೇ ಪ್ರಾಣಿ ಸಂಘಗಳು ನೀಡಲು ಸಾಧ್ಯವಿಲ್ಲ ಹಾಗೂ ನಾಯಿಗಳು ಸೇನೆಯ ವಾತಾವರಣ ಹಾಗೂ ಆರೈಕೆಗೆ ಓಗ್ಗಿ ಕೊಂಡಿರುವ ಕಾರಣ ಇತರ ಸಂಸ್ಥೆಗಳಲ್ಲಿ ಜೀವಿಸುವುದು ಕಷ್ಟವಾಗಿರುವ ಕಾರಣ ಅವುಗಳನ್ನು ಕೊಲ್ಲಲಾಗುತ್ತದೆ ಹಾಗೂ ಇತರರಿಗೆ ಹಸ್ತಾಂತರಿಸುವುದು ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಯಾಗಿದೆ ಅದ್ದರಿಂದ ಕೊಲ್ಲಲಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top