ಹೆಚ್ಚಿನ

ಇಂದು-ನಾಳೆ ಮೆಟ್ರೋ ಸಮಯದಲ್ಲಿ ಬದಲಾವಣೆ: ಕೆಲ ಘಂಟೆ ಸೇವೆ ಸ್ಥಗಿತ

ಬೆಂಗಳೂರಿನ ‘ನಮ್ಮ ಮೆಟ್ರೋ’ ದಲ್ಲಿ ಹಳಿಗಳ ನಿರ್ವಹಣೆ ಮಾಡುವ ಸಲುವಾಗಿ ಇಂದು ದಿನಾಂಕ್ ಮಾರ್ಚ 10 ರಂದು 45 ನಿಮಿಷಗಳ ಮುಂಚಿತವಾಗಿ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ತಿಳಿದು ಬಂದಿದೆ.

 

 

ನಾಳೆ ದಿನಾಂಕ್ ಮಾರ್ಚ 11 ರಂದು ಸುಮಾರು ಎರಡೂವರೆ ಗಂಟೆ ತಡವಾಗಿ ಮೆಟ್ರೋ ಸಂಚಾರ ಪ್ರಾರಂಭ ವಾಗಲಿದೆ ಎಂದು ಮೆಟ್ರೋ ಆಡಳಿತ ಮಂಡಳಿ ಯವರು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಕೂಡ ಇತ್ತೀಚೆಗೆ ಯಲಚೇನಹಳ್ಳಿ ನಿಲ್ದಾಣದ ಹಳಿ ಕ್ರಾಸ್ ಓವರ್ ಹತ್ತಿರ ಬಿರುಕು ಕಾಣಿಸಿ ಆತಂಕ ಸೃಷಿ ಮಾಡಿತ್ತು, ಕೂಡಲೇ ಎಚ್ಚೆತ್ತ ಅಧಿಕಾರಿಗಳು ಇದನ್ನು ದುರಸ್ತಿ ಮಾಡಿದ್ದರು. ನಂತರ ಎಲ್ಲ ಹಳಿಗಳ ಪರಿಶೀಲನೆ ನಡೆದಿತ್ತು.

 

 

ಈ ಕಾರಣಕ್ಕೆ ಶನಿವಾರ ಮೆಟ್ರೋ ಸಂಚಾರವನ್ನು ರಾತ್ರಿ 11 ರ ಬದಲಾಗಿ 10.15 ಕ್ಕೆ ಸ್ಥಗಿತ ಮಾಡಲಾಗುವುದು. ನಾಳೆ ಭಾನುವಾರ ಬೆಳಿಗ್ಗೆ 10.30 ಕ್ಕೆ ಮೆಟ್ರೋ ಸಂಚಾರ ಪುನಃ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ನಾಗಸಂದ್ರ, ಯಲಚೇನಹಳ್ಳಿ , ಬೈಯಪ್ಪನಹಳ್ಳಿ, ಮೈಸೂರು ರಸ್ತೆ ಟರ್ಮಿನಲ್ ನಿಂದ ಕೊನೆಯ ಮೆಟ್ರೋ ಇಂದು ರಾತ್ರಿ 10.15 ಕ್ಕೆ ಹೊರಡಲಿದೆ ಎಂದು ತಿಳಿದು ಬಂದಿದೆ. ಭಾನುವಾರ ಬೆಳಿಗ್ಗೆ ನಾಗಸಂದ್ರ, ಯಲಚೇನಹಳ್ಳಿ , ಬೈಯಪ್ಪನಹಳ್ಳಿ, ಮೈಸೂರು ರಸ್ತೆ ಟರ್ಮಿನಲ್ ನಿಂದ ಸಂಚಾರ ಪುನಃ ಪ್ರಾರಂಭವಾಗಲಿದೆ.

 

 

ಬದಲಾದ ಮೆಟ್ರೋ ಸಮಯಕ್ಕೆ ಅಗತ್ಯವಾಗಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚೆಯೇ ನಿಗದಿ ಮಾಡಿಕೊಳ್ಳಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top