ವಿಶೇಷ

1947 ರಲ್ಲಿ ದಿನಾ ಬಳಸೋ ವಸ್ತುಗಳ ಬೆಲೆ ಎಷ್ಟಿತ್ತು ಅಂತ ಕೇಳಿದ್ರೆ ಆಶ್ಚರ್ಯ ಪಟ್ಕೊಳ್ದೆ ಇರಕಾಗಲ್ಲ

1947 ರಲ್ಲಿ  ದಿನ ನಿತ್ಯದ ವಸ್ತುಗಳ ಬೆಲೆ ಕೇಳಿದರೆ ನೀವು ಊಹಿಸಲು ಆಗುವುದಿಲ್ಲ.

 

ಕಾಲಚಕ್ರ ಇನ್ನೂ ಯಾರಿಗಾಗಿಯೂ ಸಹ  ಕಾಯುವುದಿಲ್ಲ. ಬದಲಾಗಿ ದಿನ ಕಳೆದಂತೆ  ದಿನಗಳು ಉರುಳಿದಂತೆ ಸಮಯವೂ ನಿರಂತರವಾಗಿ ಸಾಗುತ್ತದೆ. ಅಷ್ಟೇ ಅಲ್ಲದೆ   ನಮ್ಮ ಸುತ್ತಮುತ್ತಲೂ ಅದೆಷ್ಟೋ  ಬದಲಾವಣೆಗಳು ಆಗುತ್ತವೆ. ಹೌದು, ಅದು ಕೇವಲ ನಮಗೆ ಹಳೆಯ  ನೆನಪುಗಳನ್ನು ಮಾತ್ರ ಉಳಿಸುತ್ತದೆ ವಿನಃ  ಆ ದಿನಗಳು ಮಾತ್ರ ಉರುಳಿ ಹೋಗುತ್ತವೆ, ಅಂತಹ ಕೆಲವು ವಿಷಯಗಳ ಬಗ್ಗೆ  ನಾವು ಮತ್ತೆ ಮರುಕಳಿಸಿ ಕೊಂಡರೆ  ಅಥವಾ ನೆನಪನ್ನು  ಮಾಡಿಕೊಂಡರೆ ನಮಗೆ ಅದು ಬಹಳ ವಿಚಿತ್ರ ಮತ್ತು ಅಚ್ಚರಿ ಅಂತಲೂ  ಅನಿಸುತ್ತೆ.

 

 

1947 ರಲ್ಲಿ ನಮಗೆ ಸ್ವಾತಂತ್ರ ಬಂದಿದ್ದು, ಸರಿ ಸುಮಾರು ಎಪ್ಪತ್ತು ವರ್ಷಗಳೇ  ಕಳೆದುಹೋಗಿವೆ. ಆದರೆ 1947 ರ ಆಗಸ್ಟ್ ನಲ್ಲಿ  ನಮಗೆ ಸ್ವಾತಂತ್ರ್ಯ ಬಂದಾಗ ಅಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ವಸ್ತುಗಳ ಬೆಲೆ ಹೇಗಿತ್ತು ? ಎಂದು ಇನ್ನು ಅವರು, ಇವರು , ಹಿರಿಯರು, ಹೇಳುತ್ತಿದ್ದರೆ ಕೇಳುತ್ತಿದ್ದೆವು.  ಆದರೆ ಪ್ರತ್ಯೇಕವಾಗಿ ಪ್ರತಿಯೊಂದು ವಸ್ತು  ಎಷ್ಟು ಹಣಕ್ಕೆ ಸಿಗುತ್ತಿತ್ತು ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ

ಆ ದಿನದಲ್ಲಿ ಐಷಾರಾಮಿ ಜೀವನ ಎನ್ನುವುದು ಬಹಳ ಅಪರೂಪವಾಗಿತ್ತು. ಅಷ್ಟೇ  ಅಲ್ಲದೆ ಪ್ರಸ್ತುತ ದಿನಗಳಲ್ಲಿ ಎಷ್ಟೇ ಸಂಬಳ ಬಂದರು ಸಾಮಾನ್ಯ ವ್ಯಕ್ತಿ ತನ್ನ ನೆಚ್ಚಿನ ಕುಟುಂಬಕ್ಕೆ ತೃಪ್ತಿದಾಯಕ ಜೀವನಶೈಲಿಯನ್ನು ಒದಗಿಸಲು  ಬಹಳ ಕಷ್ಟ ಪಡಬೇಕಾಗುತ್ತದೆ.

 

 

ಆದರೆ ಅಂದಿನ ದಿನಗಳಲ್ಲಿ ಸಂಭಾವನೆ ಮತ್ತು ಸಂಬಳವೂ ಕಡಿಮೆಯಿದ್ದು ಸಾಮಾನ್ಯವಾಗಿ  ಜೀವನ ಸಾಗಿಸಲು ಯಾವುದೇ  ಅಡ್ಡಿ ಆತಂಕಗಳು ಇರಲಿಲ್ಲ. ಅದರೆ 1947 ರಲ್ಲಿ ಯಾವ ವಸ್ತುಗಳು  ಎಷ್ಟು ಬೆಲೆಯಲ್ಲಿ ಲಭ್ಯವಾಗುತ್ತಿತ್ತು ಎಂಬುದನ್ನು ಈಗ ತಿಳಿದುಕೊಳ್ಳಿ.

ಅಂದಿನ ಕಾಲದಲ್ಲಿ ಒಂದು ರೂಪಾಯಿ ಅಂದ್ರೆ ಅರವತ್ನಾಲ್ಕು ಪೈಸೆಯಾಗಿತ್ತು . ಬದಲಿಗೆ ನೂರು ಪೈಸೆ ಆಗಿರಲಿಲ್ಲ. ಆಷ್ಟೇ  ಅಲ್ಲದೆ ಒಂದು ರೂಪಾಯಿಗೆ ಹದಿನಾರು ಆಣೆಗಳನ್ನಾಗಿ ಹೇಳ್ತಿದ್ದರೂ. ಇನ್ನೂ 1957 ರಲ್ಲಿ ಕ್ರಿಸ್ಟಿ ಪದ್ಧತಿ ಬಂದ ನಂತರ ಅರವತ್ನಾಲ್ಕು ಪೈಸೆಯಿಂದ  ನೂರು ಪೈಸೆಗಳಿಗೆ ಒಂದು ರೂಪಾಯಿಗೆ  ಮಾರ್ಪಾಡಾಯಿತು.

ಪ್ರಸ್ತುತ ಈಗಿನ ದಿನಗಳಲ್ಲಿ 65 ರೂಪಾಯಿಗೆ ಒಂದು ಡಾಲರ್ . ಆದರೆ ಅಂದಿನ ಕಾಲದಲ್ಲಿ ಒಂದು ರೂಪಾಯಿಗೆ 64 ಪೈಸೆ ಅಷ್ಟೇ ಇತ್ತು. ಇನ್ನು ಒಂದು ರೂಪಾಯಿಯನ್ನು ತೆಗೆದುಕೊಂಡು ಹೋಗಿ ಈ ಮಾರುಕಟ್ಟೆಗೆ ಅದೆಷ್ಟು ವಸ್ತುಗಳನ್ನು ಕೊಂಡುಕೊಂಡು ಬರಬಹುದಿತ್ತು.

 

 

ಅಂದಿನ ಕಾಲದಲ್ಲಿ ವ್ಯವಹಾರವೆಲ್ಲವೂ ರೂಪಾಯಿ ಮತ್ತು ಚಿಲ್ಲರೆ ಕಾಸುಗಳಲ್ಲಿ ನಡೆದು ಹೋಗುತ್ತಿತ್ತು. ಒಂದು ಕೆ.ಜಿ ಅಕ್ಕಿಯ ಬೆಲೆ ಅರವತ್ತೈದು ಪೈಸೆ,  ಒಂದು ಕೆ.ಜಿ ಗೋಧಿಯ ಬೆಲೆ ಎಂಬತ್ತಾರು ಪೈಸೆ, ಇನ್ನು ಉಳಿದಂತೆ ಸಕ್ಕರೆ 57 ಪೈಸೆಗೆ   ಲಭ್ಯವಾಗುವುದು.

1947 ರಲ್ಲಿ  ಪೆಟ್ರೋಲ್ ಬೆಲೆ  ಕೇಳಿದರೆ  ಖಂಡಿತಾ ನೀವೆಲ್ಲರೂ  ಬೆಚ್ಚಿ ಬೆರಗಾಗುತ್ತೀರ. ಕೇವಲ 27  ಪೈಸೆಗೆ  ಒಂದು ಲೀಟರ್  ಪೆಟ್ರೋಲ್ ಸಿಗುತ್ತಿತ್ತು.  ಸೀಮೆ ಎಣ್ಣೆ ಒಂದು ಲೀಟರ್ ಗೆ ಹದಿನೆಂಟು ಪೈಸೆಗೆ ಸಿಗುತ್ತಿತ್ತು.

ಇನ್ನು ಪಾನಿಪೂರಿ ಇವು ಒಂದು ಆಣೆಗೆ  ಅಂದರೆ   ಹದಿನಾರು ಜನ  ಒಟ್ಟಿಗೆ ಒಂದು ರೂಪಾಯಿಯನ್ನು ಕೊಟ್ಟು ಪಾನಿಪೂರಿಯನ್ನು ತಿನ್ನ ಬಹುದಿತ್ತು.

ಕುದುರೆ ಸವಾರಿಗಾಗಿ ಒಂದು ಕಿಲೋಮೀಟರ್ ಗೆ ಕೇವಲ ಎಂಟು ಪೈಸೆ ನೀಡಿದರೆ ಸಾಕಾಗುತ್ತಿತ್ತು. ಇದು ಅಂದಿನ ಕಾಲದಲ್ಲಿ ಅಹಮದಾಬಾದನಿಂದ  ಮುಂಬೈಗೆ  ವಿಮಾನದಲ್ಲಿ ಹೋಗಲು ಕೇವಲ ಹದಿನೆಂಟು ರೂಪಾಯಿಗಳು ಇದ್ದರೆ ಸಾಕಾಗುತ್ತಿತ್ತು.   ಅಂದಿನ ಕಾಲದಲ್ಲಿ  1947 ರಲ್ಲಿ ಚಲನ ಚಿತ್ರವನ್ನು  ನೋಡಲು ಮೂವತ್ತರಿಂದ ಐವತ್ತು ಪೈಸೆ  ನೀಡಿದರೆ ಸಾಕಾಗುತ್ತಿತ್ತು. ಅಂದಿನ ಕಾಲದಲ್ಲಿ ಚಿನ್ನದ ದರ  ಒಂದು ಗ್ರಾಂ ಗೆ 10 ರೂಪಾಯಿಗಿಂತ  ಕಡಿಮೆ ಇರುತ್ತಿತ್ತು.

 

 

ಆದರೆ ಪ್ರಸ್ತುತ ದಿನಗಳಲ್ಲಿ  ಆ ಒಂದು ಬೆಲೆಗೆ ವಸ್ತುಗಳು ಲಭ್ಯವಿದ್ದರೆ  ಎಷ್ಟು ಚೆನ್ನಾಗಿ ಇರುತ್ತಿತ್ತು ಅಂತ  ನಮ್ಮ ಮನಸ್ಸು  ಅಂದುಕೊಳುತ್ತದೆ. ಅದರೆ ದಿನಗಳು ಕಳೆದಂತೆ ತಾಂತ್ರಿಕ ಯುಗದ ಆಧುನಿಕತೆಯಲ್ಲಿ ನಾವು ಬದಲಾವಣೆಯನ್ನು  ಹೊಂದುತ್ತಿದ್ದೇವೆ. ಬೆಳವಣಿಗೆಯನ್ನು  ಹೊಂದುತ್ತಿದ್ದೇವೆ. ಹಾಗಾಗಿ  ಪ್ರಸ್ತುತ ಸಿಗುವ  ಸಂಭಾವನೆಗಳಿಗೆ ಅಂದಿನ ಕಾಲದಲ್ಲೂ  ಸಹ ಖರ್ಚು ಅನ್ವಯವಾಗುತ್ತದೆ. ಈಗಿನ ನಮ್ಮ ಜೀವನದಲ್ಲಿ  ಈ ಬೆಲೆಯಲ್ಲಿ ನಮಗೆ ಯಾವುದೇ ವಸ್ತುಗಳು ಲಭ್ಯವಾಗುವುದಿಲ್ಲ  ಆದರೆ ಇದರ ನೆನಪು ಮಾತ್ರ ಉಳಿಯುತ್ತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top