ಭವಿಷ್ಯ

ಮಾರ್ಚ್ 9ನೇ ತಾರೀಖಿನಿಂದ ಜುಲೈ 10ನೇ ತಾರೀಖಿನವರೆಗೆ ಗುರು ವಕ್ರಿಯಾಗಲಿದ್ದಾನೆ ಇದ್ರಿಂದ 12 ರಾಶಿಗಳ ಮೇಲೆ ಒಳ್ಳೆಯ,ಕೆಟ್ಟ ಪರಿಣಾಮಗಳು ಯಾವುವು ತಿಳ್ಕೊಳ್ಳಿ

ಮಾರ್ಚ್ 9ನೇ ತಾರೀಖಿನಿಂದ ಜುಲೈ 10 ನೇ ತಾರೀಖಿನವರೆಗೆ ಗುರು ವಕ್ರಿಯಾಗಲಿದ್ದಾನೆ. ಇದರಿಂದ ಎಲ್ಲಾ ರಾಶಿಗಳ ಮೇಲೂ ಪ್ರಭಾವ ಬೀರಲಿದೆ .

 

ಸುಖ, ಸೌಭಾಗ್ಯ, ಪ್ರತಿಷ್ಠೆ, ಸ್ಥಾನಮಾನ, ಗೌರವ,  ಮತ್ತು ವೈವಾಹಿಕ ಸುಖವನ್ನು ಕೊಡುವ ಗುರು ಗ್ರಹವು, ಮಾರ್ಚ್ ಒಂಬತ್ತನೆಯ ತಾರೀಖಿನಿಂದ ಬೆಳ್ಳಗ್ಗೆ  10.09 ನಿಮಿಷರಿಂದ ಜುಲೈ ಹತ್ತನೇ ತಾರೀಖಿನವರೆಗೆ ರಾತ್ರಿ 10.45  ನಿಮಿಷಗಳವರೆಗೆ ತುಲಾ ರಾಶಿಯಲ್ಲಿ ಗುರು ವಕ್ರಿಯಾಗಲಿದ್ದಾನೆ. ಈ  123 ದಿನಗಳವರೆಗೆ ಎಲ್ಲಾ ರಾಶಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿತ ಗೊಳಿಸುತ್ತಾನೆ.

 

 

ವಕ್ರಿ ಗ್ರಹಗಳ ಸಂಬಂಧದಲ್ಲಿ ಜ್ಯೋತಿಷ್ಯ ಪ್ರಕಾಶನ  ತತ್ವ ಎನ್ನುವ ಹೆಸರಿನ ಗ್ರಂಥದಲ್ಲಿ ಹೇಳಲಾಗಿದೆ. ಕ್ರೂರ, ವಕ್ರ, ಮಹಾ ಕ್ರೂರ, ಸೌಮ್ಯ, ವಕ್ರ, ಮಹಾ ಶುಭ. ಅಂದರೆ ಕ್ರೂರ ಗ್ರಹವು ವಕ್ರಿಯಾಗುವುದರಿಂದ ಅತ್ಯಂತ ಕ್ರೂರ ಫಲವನ್ನು ನೀಡುತ್ತಾನೆ. ಸೌಮ್ಯ ಗ್ರಹವು  ವಕ್ರಿಯಾಗುವುದರಿಂದ ಅತ್ಯಂತ ಶುಭ ಫಲವನ್ನು ನೀಡುತ್ತಾನೆ.

 

 

ಜಾತಕ ತತ್ತ್ವ ಹಾಗೂ ಸರಾವಳಿ ಗ್ರಂಥದ ಪ್ರಕಾರ, ಶುಭ ಗ್ರಹ ವಕ್ರಿಯಾದರೆ ಮನುಷ್ಯನಿಗೆ ಧನ, ವೈಭವ, ಸುಖ, ಸೌಭಾಗ್ಯ, ಸಂಪತ್ತು ಪ್ರಾಪ್ತಿಯಾಗುತ್ತದೆ. ಆದರೆ ಕ್ರೂರ ಗ್ರಹ ವಕ್ರಿಯಾಗುವುದರಿಂದ ದನ, ಯಶಸ್ಸು, ಸಮ್ಮಾನ, ಗೌರವಗಳು, ಪ್ರತಿಷ್ಠೆಗೆ ಹಾನಿಯನ್ನು ಉಂಟು ಮಾಡುತ್ತವೆ. ಯಾಕೆಂದರೆ  ಬೃಹಸ್ಪತಿ (ಗುರು) ಸೌಮ್ಯ ಗ್ರಹವಾಗಿದ್ದು, ಆದ್ದರಿಂದ ಇದು ವಕ್ರಿಯಾಗಿರುವುದರಿಂದ ಸಮಸ್ತ ರಾಶಿಯವರಿಗೂ ಒಂದು ಒಂದಲ್ಲಾ ಒಂದು ರೀತಿಯಲ್ಲಿ ಶುಭ ಫಲಗಳು ಪ್ರಾಪ್ತಿಯಾಗಲಿವೆ. ಬನ್ನಿ ಯಾವ ರಾಶಿಯವರಿಗೆ ವಕ್ರಿ ಗುರು  ಏನು ಪ್ರಭಾವವನ್ನು ತೋರಿಸುತ್ತಾನೆಂದು ತಿಳಿದುಕೊಳ್ಳೋಣ

ಮೇಷ (Mesha)

 

 

ವರ್ತಮಾನದಲ್ಲಿ ಗುರು ಸಪ್ತಮ ಭಾವದಲ್ಲಿ ತುಲಾ ರಾಶಿಯಲ್ಲಿ ಸ್ಥಿತನಿದ್ದು, ಇದರಿಂದ ಈ ರಾಶಿಯವರಿಗೆ ಗುರು ಗ್ರಹದ ಗೋಚರ ಶುಭವಾಗಲಿದೆ. ಕೆಲಸ ಕಾರ್ಯಗಳಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ. ವಿದೇಶ ಯಾತ್ರೆಯ ಯೋಗವಿದೆ. ದಾಂಪತ್ಯ ಜೀವನದಲ್ಲಿ ಸಮಸ್ಯೆ ಇದ್ದರೆ ಅವು ಸಹ ದೂರವಾಗುತ್ತವೆ. ದನಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತವೆ. ವೃತ್ತಿಯಲ್ಲಿ ,ವ್ಯಾಪಾರದಲ್ಲಿ ಲಾಭವಾಗುವುದು. ವಿದ್ಯಾರ್ಥಿಗಳಲ್ಲಿ ಗುರು ವಕ್ರಿಯಾಗಿರುವುದರಿಂದ ಅಧಿಕ ಮಟ್ಟದಲ್ಲಿ ಯಶಸ್ಸನ್ನು ಗಳಿಸುವರು.

 

ವೃಷಭ (Vrushabha)

 

ಆರನೇ ಸ್ಥಾನ ರೋಗ ಮತ್ತು ಕಾಯಿಲೆಗಳ ಸ್ಥಾನವಾಗಿದೆ. ಈ ರಾಶಿಯವರಿಗೆ ಈ ಮಿಶ್ರ ಫಲ ದೊರೆಯಲಿದೆ. ಶಿಕ್ಷಣದ ಕ್ಷೇತ್ರದಲ್ಲಿ ಇರುವವರಿಗೆ ಲಾಭವನ್ನು ಕಾಣುತ್ತೀರ. ಯಾರು ಈಗಾಗಲೇ ರೋಗ ಮತ್ತು ಅನೇಕ ಕಾಯಿಲೆಯಿಂದ ಬಳಲುತ್ತಿದ್ದೀರಿ ಅವರು ರೋಗ ಮುಕ್ತರಾಗುತ್ತಾರೆ. ಇವರು ಗುಣ ಮುಖರಾಗುತ್ತಾರೆ. ಆದರೆ ಕಾಯಿಲೆಗಳ ಚಿಕಿತ್ಸೆಗೆ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತದೆ.

 

ಮಿಥುನ (Mithuna)

 

ಗುರು ಐದನೇ ಸ್ಥಾನದಲ್ಲಿ ಅಂದರೆ ಪಂಚಮ ಭಾವದಲ್ಲಿ ವಕ್ರಿಯಾಗಲಿದ್ದಾನೆ. ಅಂದರೆ 5ನೇ ಸ್ಥಾನ ಸಂತಾನ ಸ್ಥಾನವಾಗುತ್ತದೆ. ಆದ್ದರಿಂದ ಈ ರಾಶಿಯವರಿಗೆ ಸಂತಾನಕ್ಕೆ ಸಂಬಂಧಪಟ್ಟಂತೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಸಂತಾನದಿಂದ ಗೌರವ ದೊರೆಯುತ್ತದೆ. ಹೊಸ ಕಾರ್ಯಗಳನ್ನು  ಪ್ರಾರಂಭಿಸುವ ಯೋಗವಿದೆ. ವ್ಯಾಪಾರದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಲಿದ್ದೀರಿ.

 

ಕರ್ಕ (Karka)

 

ಗುರು ನಾಲ್ಕನೇ ಭಾವದಲ್ಲಿ ಅಂದರೆ ಸುಖ ಸ್ಥಾನದಲ್ಲಿ ವಕ್ರಿಯಾಗಿರುವುದರಿಂದ ಇದು ಗುರುವಿನ ಉಚ್ಚ ರಾಶಿಯೂ ಆಗಿದ್ದು ಇದರ ಪ್ರಭಾವದಿಂದ ಇವರ ಸುಖದಲ್ಲಿ ವೃದ್ಧಿಯಾಗುವ ಸಂಕೇತವಿದೆ. ಆದರೆ ಗಮನವಿಡಿ ನಿಮಗೆ ಸ್ವಲ್ಪ ಏನಾದರೂ ನಾನು ಎನ್ನುವ ಅಹಂಕಾರ ಭಾವನೆ ನಿಮ್ಮ ಮನಸ್ಸಿನಲ್ಲಿ ಬಂದರೆ ಅಥವಾ ಬೇರೆಯವರಿಗೆ ನೀವು ಕೆಟ್ಟದ್ದನ್ನು ಮಾಡಿದರೆ, ಬೃಹಸ್ಪತಿ ದಂಡವನ್ನು ನೀಡುತ್ತಾನೆ. ನಿಮ್ಮ ಗೌರವ ಕೆಟ್ಟು ಹೋಗಲು ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲ, ಆದ್ದರಿಂದ ಎಷ್ಟೇ ಹಣ ನಿಮ್ಮ ಬಳಿ ಬಂದರೂ ಸಹ ಎಂದಿಗೂ ಯಾವುದೇ ಕಾರಣಕ್ಕೂ ದುರಹಂಕಾರವನ್ನು ಪಡಬೇಡಿ. ನಿಮ್ಮ ಮಾತು ಮತ್ತು ಕೋಪವನ್ನು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.

 

ಸಿಂಹ (Simha)

 

 

ಮೂರನೇ ಸ್ಥಾನದಲ್ಲಿ ಗುರು ವಕ್ರಿಯಾಗಿದ್ದಾನೆ ಅಣ್ಣ ತಮ್ಮಂದಿರ ಜೊತೆಗೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಯಾವುದಾದರೂ ವಿಷಯದಲ್ಲಿ ಮನಸ್ಸಿಗೆ ಬೇಜಾರಾದರೆ ತುಂಬಾ ಶಾಂತವಾಗಿ ಕುಳಿತು ಯೋಚನೆ ಮಾಡಿ ಬಗೆಹರಿಸಲು ಪ್ರಯತ್ನಿಸಿ.ಹಣಕ್ಕೆ ಸಂಬಂಧಪಟ್ಟಂತೆ ಧನಾಗಮನವಾಗುವುದು ಹೊಸ ಮನೆ, ವಾಹನ, ಭೂಮಿ ಖರೀದಿ ಮಾಡುವ ಯೋಗವಿದೆ, ವೈವಾಹಿಕ ಜೀವನದಲ್ಲಿ ಸುಖವನ್ನು ಕಾಣುವಿರಿ, ಜೀವನ ಸಂಗಾತಿಯ ಜತೆಗೆ ಇದುವರೆಗೂ ಇದ್ದ ವೈಮನಸ್ಯ ದೂರವಾಗುವುದು.

 

ಕನ್ಯಾರಾಶಿ (Kanya)

 

ಗುರು ಎರಡನೇ ಸ್ಥಾನದಲ್ಲಿ ಅಂದರೆ ಧನ ಸ್ಥಾನದಲ್ಲಿ ವಕ್ರಿಯಾಗಲಿದ್ದಾನೆ, ಇದರ ಪ್ರಭಾವದಿಂದ ಎರಡು ರೀತಿಯ ಸಂದರ್ಭಗಳನ್ನು ನೀವು ಎದುರಿಸುತ್ತೀರಾ ಆಥವಾ ಎದುರಾಗಬಹುದು. ತಕ್ಷಣ ಎಲ್ಲಿಂದಲೂ ಯಥೇಚ್ಚವಾಗಿ ಹಣವೂ ಪ್ರಾಪ್ತಿಯಾಗಬಹುದು ಅಥವಾ ತಕ್ಷಣ ದೊಡ್ಡ ಮಟ್ಟದ ಹಣವನ್ನು ನೀವು ಕಳೆದುಕೊಳ್ಳಬಹುದು.ನಿಮ್ಮ ಮನೆಗೆ ಸಂಬಂಧಪಟ್ಟ ವಿಷಯಗಳಲ್ಲಿ  ಸಮಾಧಾನದಿಂದ ವರ್ತಿಸುವುದು ಒಳ್ಳೆಯದು. ಹೊಸ ಕಾರ್ಯ ವ್ಯವಸಾಯ ವ್ಯಾಪಾರಗಳು ಪ್ರಾಪ್ತಿಯಾಗುವುದು. ವೃತ್ತಿಗೆ ಸಂಬಂಧಪಟ್ಟಂತೆ ಬಡ್ತಿ ಅಥವಾ ವೇತನ ಹೆಚ್ಚಳವಾಗುವುದು ಸರ್ಕಾರಿ ಕೆಲಸ ದೊರೆಯುವುದು.

 

ತುಲಾ (Tula)

 

 

ಈ ರಾಶಿಗೆ ಪ್ರಥಮ ಭಾಗದಲ್ಲಿ ಅಂದರೆ ಲಗ್ನದಲ್ಲಿಯೇ ಗುರು ವಕ್ರಿಯಾಗಲಿದ್ದಾನೆ . ಪ್ರಥಮ ಭಾವದ ಗುರು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.ಆದ್ದರಿಂದ ತುಲಾ ರಾಶಿಯವರಿಗೆ ಬೃಹಸ್ಪತಿಯಿಂದ ಶುಭಫಲಗಳು ಪ್ರಾಪ್ತಿಯಾಗುವುದು . ಎಲ್ಲಾ ಕೆಲಸ ಕಾರ್ಯಗಳು ಬೇಗನೆ ಸಾಗುವವು. ಧನಾಗಮನವಾಗುವುದು, ಅಧಿಕ ದಿನಗಳಿಂದ ನಿಂತು ಹೋಗಿದ್ದ  ಹಣ ನಿಮ್ಮ ಬಳಿ ಮರಳಿ ಬರೆಯುವುದು, ಖರ್ಚಿನಿಂದ ಮುಕ್ತರಾಗುವಿರಿ, ಪರಿವಾರದವರೊಂದಿಗೆ ಸುಖವಾದ ಜೀವನ ನಡೆಸುವರು, ಅವಿವಾಹಿತರಿಗೆ ವಿವಾಹಯೋಗ ಕೂಡಿಬರಲಿದೆ .

 

ವೃಶ್ಚಿಕ (Vrushchika)

 

 

ಈ ರಾಶಿಯವರಿಗೆ ಹನ್ನೆರಡನೇ ಮನೆಯಲ್ಲಿ ಗುರು ವಕ್ರಿಯಾಗಲಿದ್ದಾನೆ. ಈ ಸ್ಥಾನ ವ್ಯಯ ಸ್ಥಾನವಾಗಿದ್ದು, ತಕ್ಷಣ ಖರ್ಚು ಹೆಚ್ಚಾಗುವ ಸಂಭವವಿದೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗುವುದು.ಅದರೆ ತಕ್ಷಣವೇ ಎಲ್ಲವೂ ಸರಿಹೋಗಲಿದೆ. ಕುಟುಂಬದಲ್ಲಿ ಸುಖ, ಶಾಂತಿ ನೆಲೆಸುವುದು. ವಿದೇಶ ಯಾತ್ರೆಯ ಯೋಗವಿದೆ, ಆರ್ಥಿಕ ಪರಿಸ್ಥಿತಿಯಲ್ಲಿ ಮೊದಲು ಹಣ ಖರ್ಚಾದರೂ ನಂತರ ಸುಧಾರಣೆ ಕಾಣುವುದು, ಸಂಬಂಧಗಳಲ್ಲಿ ಅನುಸರಿಸಿಕೊಂಡು ಹೋಗುವುದನ್ನು ಕಲಿತುಕೊಳ್ಳಿ .

 

ಧನು ರಾಶಿ (Dhanu)

 

 

ಈ ರಾಶಿಯ ಸ್ವಾಮಿ ಬೃಹಸ್ಪತಿ ಯಾಗಿರುವುದರಿಂದ ಮತ್ತು ಹನ್ನೊಂದನೇ ಮನೆಯಲ್ಲಿ ಗುರು ವಕ್ರಿಯಾಗಿರುವ ಕಾರಣ  ದನಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಬರುತ್ತಿರುವ ಸಮಸ್ಯೆಗಳು ದೂರವಾಗುವವು. ಯಾವುದಾದರೂ ಕಾರಣದಿಂದ ಕೆಲಸ ನಿಂತು ಹೋಗಿದ್ದರೆ ಅದು ಪೂರ್ಣವಾಗುವುದು. ಹೊಸ ವ್ಯವಹಾರ ಪ್ರಾರಂಭ ಮಾಡುವ ಯೋಗವಿದೆ, ವರ್ತಮಾನದಲ್ಲಿ ನೌಕರಿಯಲ್ಲಿ ಇರುವವರಿಗೆ ಬಡ್ತಿ, ಉನ್ನತ ಸ್ಥಾನಮಾನ ದೊರೆಯುವುದು. ಅವಿವಾಹಿತರಿಗೆ ವಿವಾಹಯೋಗ ದೊರೆಯಲಿದೆ.

 

ಮಕರ (Makara)

 

 

ಈ ರಾಶಿಯಲ್ಲಿ ಗುರು ನೀಚನಾಗಿರುತ್ತಾನೆ , ಈ ರಾಶಿಗೆ ಹತ್ತನೇ ಭಾವದಲ್ಲಿ ಗುರು ವಕ್ರಿಯಾಗಲಿದ್ದಾನೆ, ನೌಕರಿಯಲ್ಲಿರುವವರು ಎಚ್ಚರದಿಂದಿರಿ, ನಿಮ್ಮ ಜೊತೆಯಲ್ಲಿ ಕೆಲಸ ಮಾಡುವವರೇ ನಿಮ್ಮ ಮರ್ಯಾದೆಯನ್ನು ಗೌರವವನ್ನು ಹಾಳು ಮಾಡುವರು, ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಹೊಂದಿಕೊಂಡು ಹೋಗಿ, ಆಗ ಕೆಲಸ ಸುಗಮವಾಗಿ ಸಾಗಲಿದೆ, ನೌಕರಿಯಲ್ಲಿ ಬಡ್ತಿ, ವೈವಾಹಿಕ ಸುಖ, ಆರ್ಥಿಕ ಸಂಕಷ್ಟ ದೂರವಾಗಲಿದೆ, ವಾಹನ ಖರೀದಿಯ ಯೋಗವಿದೆ.

 

ಕುಂಭರಾಶಿ (Kumbha)

 

ಈ ರಾಶಿಯವರಿಗೆ ಒಂಬತ್ತನೇ ಮನೆಯಲ್ಲಿ ಗುರು ವಕ್ರಿಯಾಗಲಿದ್ದಾನೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುವುದು, ಸಂಪತ್ತಿಗೆ ಸಂಬಂಧಪಟ್ಟಂತೆ ಅಣ್ಣ ತಮ್ಮಂದಿರಲ್ಲಿ ಮತ್ತು ಸಂಬಂಧಿಕರಲ್ಲಿ ವಿವಾದಗಳು ಉಂಟಾಗುವವು. ಆದರೆ ನೀವು ಎಲ್ಲರ ಜೊತೆ ಒಂದೇ ರೀತಿಯ ನ್ಯಾಯವನ್ನು ಮಾಡಬೇಕಾಗಿದೆ. ನಿಮ್ಮ ನಿರ್ಣಯಗಳನ್ನು ತೆಗೆದುಕೊಳ್ಳುವುದರಲ್ಲಿ ಸಮರ್ಥರಾಗಿರಿ. ಯುವಕರಿಗೆ ದೊಡ್ಡಮಟ್ಟದ ನೌಕರಿ ದೊರೆಯಲಿದೆ.ವಿದೇಶ ಯಾತ್ರೆಯ ಯೋಗವಿದೆ ಪ್ರೇಮ ಸಂಬಂಧ ಪ್ರಾಪ್ತಿಯಾಗುತ್ತದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗುವುದು.

 

ಮೀನರಾಶಿ (Meena)

 

 ಎಂಟನೆ ಭಾವದಲ್ಲಿ ಗುರು ವಕ್ರಿಯಾಗಲಿದ್ದಾನೆ ಇದು ಗುರುವಿನ ರಾಶಿಯೇ ಆಗಿರುವುದರಿಂದ, ಅಷ್ಟಮ ಸ್ಥಾನ ಶುಭವಲ್ಲ, ಆದ್ದರಿಂದ ಈ ರಾಶಿಯವರಿಗೆ  ಮಿಶ್ರ ಫಲ ದೊರೆಯಲಿದೆ. ಈ ರಾಶಿಯವರಿಗೆ ಮಾನಸಿಕ ಸ್ಥಿತಿ ಹದಗೆಟ್ಟು ಚಂಚಲತೆ ಉಂಟಾಗಲಿದೆ. ಮಾನಸಿಕ ಒತ್ತಡದಿಂದ ನಕಾರಾತ್ಮಕತೆಯ ಸೃಷ್ಟಿಯಾಗಲಿದೆ. ಆರೋಗ್ಯ ಹದಗೆಡಲಿದೆ ಆರ್ಥಿಕವಾಗಿ ನಿಮಗೆ ಜಯ ಲಭಿಸಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top