fbpx
ಭವಿಷ್ಯ

ಜ್ಯೋತಿಷ್ಯ ಶಾಸ್ತ್ರದ ಗ್ರಹ ನಕ್ಷತ್ರಚಾರ ಹಾಗೆ ವಿಜ್ಞಾನಗಳು ರಾತ್ರಿ ಹುಟ್ಟಿದವರ ವಿಶೇಷತೆಗಳ ಬಗ್ಗೆ ಏನು ಹೇಳುತ್ತೆ ತಿಳ್ಕೊಳ್ಳಿ

ಹಗಲು ಹುಟ್ಟಿದವರಿಗಿಂತ ರಾತ್ರಿ ಹುಟ್ಟಿದವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಅದು ಹೇಗೆ ಯಾರು ಹೀಗೆ ಹೇಳಿದ್ದು ?ಯಾಕೆ ಹೀಗೆ ಹೇಳಿದ್ದಾರೆ ಎಂದು ಗೊತ್ತಾ ?

 

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಜನಿಸಿದ ಸಮಯ ಗ್ರಹ ನಕ್ಷತ್ರ ವ್ಯಕ್ತಿಯ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದೇ ರೀತಿ ರಾತ್ರಿ ಜನಿಸಿದ ವ್ಯಕ್ತಿಗಳ ವಿಶೇಷತೆಗಳೇನು ?  ಎಂಬುದರ ಬಗ್ಗೆಯೂ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ

ಪ್ರಪಂಚದಲ್ಲಿನ ಮನುಷ್ಯರಲ್ಲಿ ತುಂಬಾ ಬುದ್ಧಿವಂತರು ಕೆಲವೊಂದು ಜನ ಇರುತ್ತಾರೆ ಸ್ವಲ್ಪ ಬುದ್ಧಿವಂತರು ಸಹ ಇರುತ್ತಾರೆ. ಇನ್ನೂ ಕೇಳುವುದು ಜನ ಎಂದರೆ ಹಾಗೆಯೇ  ಇವರ ಜೊತೆ ಬುದ್ದಿನೇ ಇಲ್ಲದವರು ಕೂಡ ಸಾಕಷ್ಟು ಮಂದಿ ಇದ್ದಾರೆ. ಹಾಗೆಯೇ ಕೆಲವರಿಗೆ ಹುಟ್ಟಿನಿಂದಲೇ ಬುದ್ಧಿ ಇರುತ್ತದೆ. ಇನ್ನು ಕೆಲವರಿಗೆ ಹುಟ್ಟಿದ ನಂತರ ಈ ಬುದ್ದಿ ಬರುತ್ತದೆ . ಇನ್ನು ಬುದ್ಧಿವಂತಿಕೆಯ ವಿಷಯದಲ್ಲಿ ಯಾರು ಹೇಗಿದ್ದರೂ ಕೂಡ ವಿಶೇಷವಾಗಿ ರಾತ್ರಿಯಲ್ಲಿ ಹುಟ್ಟಿದವರು ಹಗಲು ಹುಟ್ಟಿದವರಿಗಿಂತ ಹೆಚ್ಚಾಗಿ ಬುದ್ದಿ ಶಾಲಿಗಳಾಗಿರುತ್ತಾರೆ ಎಂದು ಹೇಳುತ್ತಾರೆ.

 

 

ಹೌದು ಇದು ನಿಜ , ಈ ಮಾತನ್ನು ನಾವು ಹೇಳುತ್ತಿಲ್ಲ. ಕೆಲವೊಂದು ವಿಜ್ಞಾನಿಗಳು ಹೇಳುತ್ತಿರುವ ಮಾತಿದು. ಯೂನಿವರ್ಸಿಟಿ ಆಫ್ ಮೆಟ್ರಿಡ್ ಗೆ ಸೇರಿದ ಕೆಲವೊಂದು ವಿಜ್ಞಾನಿಗಳು ರಾತ್ರಿ ಹುಟ್ಟಿದ ಮನುಷ್ಯರ ಮೇಲೆ ಅವರು ಹುಟ್ಟಿದ ಸಮಯ ಹಾಗೂ ದಿನದ ಆಧಾರದ ಮೇಲೆ ಹೇಳುತ್ತಿದ್ದಾರೆ. ಜೊತೆಗೆ ಅವರ ವಿಜ್ಞಾನ, ಓದು, ಬುದ್ಧಿಶಕ್ತಿ, ಐಕ್ಯೂ ಲೆವೆಲ್ ಗಳನ್ನು ಕೂಡ ಪರೀಕ್ಷಿಸಿದ್ದಾರೆ.

ಇದರಿಂದ ಒಂದು ವಿಷಯ ವಿಜ್ಞಾನಿಗಳು ಹೇಳುತ್ತಿದ್ದಾರೆ. ಹಗಲು ಹುಟ್ಟಿದವರಿಗಿಂತ ರಾತ್ರಿ ಹುಟ್ಟಿದವರು ಹೆಚ್ಚು ಬುದ್ಧಿವಂತರು ಇರುತ್ತಾರೆ ಎಂದು ತಿಳಿಸಿದ್ದಾರೆ. ಜೊತೆಗೆ ಇನ್ನೂ  ಕೆಲವೊಂದು ವಿಷಯ ಕೂಡ ತಿಳಿಸಿದ್ದಾರೆ. ರಾತ್ರಿ ಹುಟ್ಟಿದವರಿಗೆ ಬುದ್ಧಿಶಕ್ತಿ ಮಾತ್ರ ಅಲ್ಲ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಕೂಡ ಇರುತ್ತದೆಯಂತೆ. ಇವರು ಜೀವನದಲ್ಲಿ ಮುಂದೆ ಇರುತ್ತಾರೆ. ಹಾಗೆ ಒಳ್ಳೆಯ ಉದ್ಯೋಗದಲ್ಲಿಯೂ ಕೂಡ ಇರುತ್ತಾರೆ. ಇತರ ಸಾಮಾನ್ಯರಿಗೆ ಏಳು ಗಂಟೆಯ ನಿದ್ರೆ ತುಂಬಾ ಅವಶ್ಯಕತೆ ಇರುತ್ತದೆ, ಆದರೆ ರಾತ್ರಿ ಹುಟ್ಟಿದವರಿಗೆ ಐದು ಗಂಟೆಗಳ ಕಾಲ ನಿದ್ರೆ ಮಾಡಿದರೇ ಸಾಕಂತೆ. ಇವರಿಗೆ ಹೆಚ್ಚು ನಿದ್ದೆಯ ಅವಶ್ಯಕತೆ ಇಲ್ಲ ತುಂಬಾ ಚುರುಕಾಗಿರುತ್ತಾರೆ ಎಂದು ಅಧ್ಯಯನಗಳಲ್ಲಿ ತಿಳಿದುಬಂದಿದೆ .

 

 

ರಾತ್ರಿ ಜನಿಸಿದ ವ್ಯಕ್ತಿಗಳು ಹೆಚ್ಚು ಸೃಜನಶೀಲರಾಗಿರುತ್ತಾರೆ. ಹಾಗೆಯೇ ಚಿಂತಕ ಹಾಗೂ ತತ್ವಜ್ಞಾನಿಯಾಗುವ ಸಾಧ್ಯತೆಗಳಿವೆ .ರಾತ್ರಿ ಜನಿಸಿದ ವ್ಯಕ್ತಿಗಳಲ್ಲಿ ಸಂಗೀತ ಹಾಗೂ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಯಾವುದಾದರೂ ವಿಷಯವನ್ನು ಬೇಗನೇ ಹೆಚ್ಚಾಗಿ ಗ್ರಹಿಸುವ ಶಕ್ತಿ ಇವರಿಗೆ ಇರುತ್ತದೆ .ಕಾಲ್ಪನಿಕವಾಗಿರುವ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸ ತುಂಬಿರುತ್ತದೆ. ಹಾಗಾಗಿ ಯಾವುದೇ ಸಮಸ್ಯೆ ಎದುರಾದರೂ ಕ್ಷಣ ಮಾತ್ರದಲ್ಲಿ ಪರಿಹಾರ ಕಂಡುಕೊಳ್ಳುತ್ತಾರೆ. ಉತ್ಸಾಹಿ ಹಾಗೂ ಪ್ರತಿಭಾವಂತ ವ್ಯಕ್ತಿಗಳಾಗಿ ಒಳ್ಳೆಯ ಸ್ನೇಹಿತರು  ಎಂಬುದನ್ನು ಸಹ ಸಾಬೀತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top