ಹೆಚ್ಚಿನ

ನೋಡ್​ ನೋಡ್ತಿದ್ದಂತೆ ಧರೆಗುರುಳಿದ ರಥ. ದೇವರ ದಯೆಯಿಂದ ಪಾರಾದ ಭಕ್ತರು.

ಆನೇಕಲ್​ ತಾಲೂಕಿನಲ್ಲಿ ರಥ ನೆಲಕ್ಕೆ ಉರುಳಿರುವ ಅವಘಡ ಸಂಭವಿಸಿದೆ. ಐತಿಹಾಸಿಕ ಪ್ರಸಿದ್ಧ ಮದ್ದೂರಮ್ಮ ದೇವರ ಜಾತ್ರೆಯಲ್ಲಿ 75 ಅಡಿ ಎತ್ತರದ ರಥ ಉರುಳಿಬಿದ್ದಿದ್ದು ಅದೃಷ್ಟವಶಾತ್ ದೇವರ ದಯೆಯಿಂದ ಸಂಭವಿಸಬೇಕಿದ್ದ ಭಾರಿ ಅನಾಹುತವೊಂದು ತಪ್ಪಿದೆ.

 

 

ಹುಸ್ಕೂರಿನ ಮದ್ದೂರಮ್ಮ ದೇವರ ಜಾತ್ರೆ ಸಲುವಾಗಿ ತೇರು ನಿರ್ಮಾಣ ಮಾಡಿ ರಸ್ತೆಯಲ್ಲಿ ಎತ್ತುಗಳ ಸಹಾಯದಿಂದ ಎಳೆದು ತರುತ್ತಿದ್ದರು. ಬೆಳ್ಳಗ್ಗೆ 10ಗಂಟೆಗೆ ವೇಳೆ ರಥ ಧರೆಗುರುಳಿದೆ ಎಂದು ತಿಳಿದು ಬಂದಿದೆ. ನೋಡ್​ ನೋಡ್ತಿದ್ದಂತೆ ನೆಲಕ್ಕುರುಳಿದ ರಥ ವಿಡಿಯೋ ಸೆರೆ ಹಿಡಿದಿದ್ದು ದೇವರ ದಯೆಯಿಂದ ಯಾರಿಗೂ ಹಾನಿ ಉಂಟಾಗಿಲ್ಲ. ರಥವು ಹೆಚ್ಚು ಎತ್ತರವಿದ್ದ ಕಾರಣ ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

 

 

ಈ ತೇರು ಸುಮಾರು 75ಅಡಿ ಎತ್ತರ ಇರಬಹುದು ಎಂದು ಅಂದಾಜಿಸಲಾಗಿದೆ ಹುಸ್ಕೂರಿನ ಮದ್ದೂರಮ್ಮ ಜಾತ್ರೆ ನಿಮಿತ್ತ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ತೇರು ನಿರ್ಮಾಣ ಮಾಡಿ ಎಳೆದು ತರುವುದು ಇಂದಿಗೂ ರೂಢಿಯಿರುವ ಪದ್ಧತಿಯಾಗಿದೆ. ಇದನ್ನು ಬಹಳ ವರ್ಷಗಳಿಂದ ಆಚರಿಸಿಕೊಂಡು ಗ್ರಾಮಸ್ಥರು ಬಂದಿದ್ದಾರೆ.

 

ಈ ದೇವಸ್ಥಾನಕ್ಕೆ ಈ ಮೊದಲು ಒಟ್ಟು 11 ಹಳ್ಳಿಗಳಿಂದ ರಥಗಳು ಬರುತ್ತಿದ್ದವು. ಬೆಂಗಳೂರು ಅಭಿವೃದ್ಧಿ ಆದಂತೆ ಬೆಳವಣಿಗೆ ಆಗಿ ಹೊಲಗದ್ದೆಗಳು ಲೇಔಟ್ ಅದ ಪರಿಣಾಮ ಇದೀಗ ರಥಗಳನ್ನು ಎಳೆದು ತರಲು ಆಗದೆ ಕೇವಲ 7 ಗ್ರಾಮಗಳ ರಥಗಳು ಮಾತ್ರ ಈಗ ಬರುತ್ತಿವೆ ಎಂದು ತಿಳಿದು ಬಂದಿದೆ.

ಈ ವಿಡಿಯೋ ನೋಡಿ:

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top