ಹೆಚ್ಚಿನ

ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಸಂಬಳ ಮತ್ತು ಸಾಧನೆ ಕೇಳಿದ್ರೆ ಭೇಷ್ ಅಂತೀರಾ

ಬಾಲಿವುಡ್ ನಟ ಸಲ್ಮಾನ್ ಖಾನ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಈಗ ಇವರ ಬಾಡಿಗಾರ್ಡ್ ಸಕತ್ ಸುದ್ದಿ ಮಾಡುತ್ತಿದ್ದಾರೆ ಯಾಕೆ ಅಂತೀರಾ ಮುಂದೆ ಓದಿ.

 

 

ಸಲ್ಮಾನ್ ಖಾನ್ ಅವರ ಪರ್ಸನಲ್ ಬಾಡಿ ಗಾರ್ಡ್ ಆಗಿಸುವ ಶೇರಾ ಎಂಬುವವರು ಈಗ ಸುದ್ದಿಯಲ್ಲಿರುವ ವ್ಯಕ್ತಿ. ಪರ್ಸನಲ್ ಸೆಕ್ಯೂರಿಟಿ ಸಂಸ್ಥೆಯೊಂದು ಶೇರಾ ಅವರಿಗೆ ಉತ್ತಮ ಬಾಡಿಗಾರ್ಡ್ ಪ್ರಶಸ್ತಿ ನೀಡುವ ಮೂಲಕ ಗೌರವ ನೀಡಿದೆ. ಶೇರಾ ಸುಮಾರು 20 ವರ್ಷಗಳಿಂದ ಸಲ್ಮಾನ್ ಖಾನ ಅವರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಸಿಖ್ ಮನೆತನದಿಂದ ಬಂದಿರುವ ಶೇರಾ ರವರ ಮೂಲ ಹೆಸರು ಗುರ್ಮಿತ್ ಆಗಿದೆ. 1995ರಲ್ಲಿ ಸಲ್ಮಾನ್ ಖಾನ್ ಅವರಿಗೆ ಬಾಡಿ ಗಾರ್ಡ್ ಆಗಿ ನೇಮಕವಾದ ಶೇರಾ ತಮ್ಮ ಪ್ರಾಮಾಣಿಕ ಸೇವೆಯನ್ನು ಸಲ್ಮಾನ್ ಖಾನ್ ಅವರಿಗೆ ಶೇರಾ ಒದಗಿಸಿದ್ದಾರೆ.

 

ಶೇರಾ ಅವರ ಅಮೋಘ 20 ವರ್ಷಗಳ ಸೇವೆಗಾಗಿ ಪರ್ಸನಲ್ ಸೆಕ್ಯೂರಿಟಿ ಸಂಸ್ಥೆ ಈ ಪ್ರಶಸ್ತಿ ನೀಡಿದೆ. ನಟಿ ಮಾಧುರಿ ದೀಕ್ಷಿತ್ ಈ ಪ್ರಶಸ್ತಿ ನೀಡಿದ್ದಾರೆ.

 

 

ಮೂಲಗಳ ಪ್ರಕಾರ ಸಲ್ಮಾನ್ ಖಾನ್ ತನ್ನ ನೆಚ್ಚಿನ ಬಾಡಿ ಗಾರ್ಡ್ ಶೇರಾಗೆ ಪ್ರತಿ ತಿಂಗಳು 15 ಲಕ್ಷ ರೂಪಾಯಿ ಸಂಬಳ ನೀಡ್ತಾರೆ. ವರ್ಷಕ್ಕೆ ಸುಮಾರು 2 ಕೋಟಿ ರೂಪಾಯಿ ಸಂಬಳ ಪಡೆಯುತ್ತಾರೆ ಶೇರಾ. ಬಾಲಿವುಡ್ ಚಿತ್ರರಂಗದ ಯಾವ ಸ್ಟಾರ್ ಗಳ ಅಂಗರಕ್ಷಕರಿಗೂ ಇಷ್ಟು ದೊಡ್ಡ ಸಂಬಳ ಸಂಬಳ ಸಿಗುವುದಿಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top