ದೇವರು

ತಿರುಪತಿ ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ದಿನನಿತ್ಯ ಮೊದಲು ಯಾರು ಮಾಡುತ್ತಾರೆ ಗೊತ್ತಾ

ತಿರುಪತಿ ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಮೊದಲು ಯಾರು ಮಾಡುತ್ತಾರೆ ? ಎಂದು ನಿಮಗೆ ಗೊತ್ತೇ ?

 

 

ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಬಗ್ಗೆ ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದೇ ಇರುತ್ತದೆ. ನಾವೆಲ್ಲರೂ ತಿರುಪತಿಗೆ ಹೋಗಿ ದರ್ಶನದ ಸಾಲಿನಲ್ಲಿ ನಿಂತುಕೊಂಡು ಗಂಟೆಗಟ್ಟಲೆ ಕಾದು, ನಾವೆಲ್ಲರೂ ಶ್ರೀ ವೆಂಕಟೇಶ್ವರನ ದರ್ಶನವನ್ನು ಮಾಡುತ್ತೇವೆ. ಇನ್ನು ಕೆಲವು ಜನರು ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತುತ್ತಾ ಸ್ವಾಮಿಯ ಹೆಸರನ್ನು ಕೂಗುತ್ತಾ, ಮೆಟ್ಟಿಲುಗಳಿಗೆ ಕರ್ಪೂರವನ್ನು ಬೆಳಗುತ್ತಾ, ಅರಿಶಿನ ಮತ್ತು  ಕುಂಕುಮವನ್ನು ಪ್ರತಿ ಮೆಟ್ಟಿಲಿಗೂ ಹಚ್ಚುತ್ತಾ, ಸ್ವಾಮಿಯ ದರ್ಶನಕ್ಕೆ ಬರುತ್ತಾರೆ.

ಆದರೆ ನಾವು ಅಷ್ಟು ಹೊತ್ತಿನವರೆಗೂ  ದರ್ಶನದ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನಕ್ಕೆ0ದು ಹೋದರೆ, ಕೇವಲ ಕ್ಷಣ ಮಾತ್ರದಲ್ಲಿ ದರ್ಶನ ಮುಗಿದು ಹೋಗುತ್ತದೆ. ಆ ಕ್ಷಣ ಮಾತ್ರದ ದರ್ಶನ ನಮಗೆ ಆನಂದ ಮತ್ತು ಅತಿಯಾದ ಸಂತೋಷವನ್ನು ನೀಡುತ್ತದೆ. ಏನೋ ಒಂದು ಸಾಧನೆಯನ್ನು ಮಾಡಿರುವ ಅನುಭವ ನಮಗಾಗುತ್ತದೆ.

 

 

ಆದರೆ ತಿರುಪತಿ ತಿರುಮಲದ ವೆಂಕಟೇಶ್ವರ ಸ್ವಾಮಿಯ ಮೊದಲ ದರ್ಶನವನ್ನು ಯಾರು ಮಾಡುತ್ತಾರೆ ? ಅವರೇ ಯಾಕೆ ? ಈ ಮೊದಲ ದರ್ಶನ ಮಾಡುತ್ತಾರೆ ಎಂದು  ನಮಗೆಲ್ಲರಿಗೂ ಆಶ್ಚರ್ಯ ಉಂಟಾಗುತ್ತದೆ. ಸಾಮಾನ್ಯವಾಗಿ ನಮ್ಮ ಊರಿನ ದೇವಸ್ಥಾನಗಳಲ್ಲಿ ನಮ್ಮ ಊರಿನ ಅರ್ಚಕರು, ನದಿ, ಕೆರೆ, ಬಾವಿಗಳಲ್ಲಿ ಸ್ನಾನವನ್ನು ಮಾಡಿ , ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ದೇವಸ್ಥಾನದ ಬಾಗಿಲನ್ನು ತೆಗೆದು, ಮೊದಲ ದರ್ಶನವನ್ನು ಮಾಡುತ್ತಾರೆ. ಇದು ನಮ್ಮ ಊರಿನ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ನೆಲೆಯೂರಿರುವ  ಆಚಾರ ಮತ್ತು   ಪದ್ಧತಿಯಾಗಿದೆ.

 

ಸನ್ನಿಧಿ ಗೊಲ್ಲರು ಯಾರು

 

ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ , ಮೊದಲ ದರ್ಶನ ಮಾಡುವವರು ಅರ್ಚಕರಲ್ಲ.  ಯಾರು ಮೊದಲು ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡುವವರು ಎಂದರೆ ಅವರೇ  ಸನ್ನಿಧಿ ಗೊಲ್ಲರು. ಹೌದು, ಸನ್ನಿಧಿ ಗೊಲ್ಲ ಎಂಬ ಕುಟುಂಬದವರು ಈ ಶ್ರೀನಿವಾಸನ ಮೊದಲ ದರ್ಶನ ಮಾಡುತ್ತಾರೆ. ಯಾಕೆ ? ಅವರೇ ಮೊದಲಿಗೆ ದರ್ಶನ ಮಾಡುತ್ತಾರೆ ?

 

 

ಈ ದೇವಸ್ಥಾನಕ್ಕೆ ಒಂದು ವ್ಯವಸ್ಥೆ ಇದೆ . ಅದರ ಪ್ರಕಾರ ಈ ದೇವಸ್ಥಾನವನ್ನು ಕೆಲವರು ನೋಡಿಕೊಳ್ಳುತ್ತಾರೆ. ಹಾಗೆಯೆ ಸ್ವಾಮಿಯ ಪೂಜಾ ಕಾರ್ಯಕ್ರಮಗಳನ್ನು ಅರ್ಚಕರು ನೋಡಿಕೊಳ್ಳುತ್ತಾರೆ, ಪ್ರಸಾದ  ವಿತರಣೆಯನ್ನು ಕೆಲವರು ನೋಡಿಕೊಳ್ಳುತ್ತಾರೆ. ಹೀಗೆ ಸನ್ನಿಧಾನದ ಜವಾಬ್ದಾರಿಯನ್ನು ಸಹ  ಕೊಟ್ಟಿರುತ್ತಾರೆ. ಅವರ ಕೆಲಸ ರಾತ್ರಿ ಸನ್ನಿಧಾನವನ್ನು ಮುಚ್ಚಿ ಮತ್ತೆ ಬೆಳಗ್ಗೆ ಗರ್ಭಗುಡಿಯ ಬಾಗಿಲನ್ನು ತೆರೆಯುವುದು. ಈ ಆಚಾರ ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ.

ಬೆಳಗ್ಗೆ ಸೂರ್ಯೋದಯಕ್ಕೂ ಮುಂಚೆ ಅರ್ಚಕರೆಲ್ಲ ಸೇರಿ ಸನ್ನಿಧಿ ಗೊಲ್ಲರ ನಿವಾಸದ ಹತ್ತಿರ ಹೋಗಿ ದೇವಸ್ಥಾನದ ಬಾಗಿಲನ್ನು ತೆಗೆಯಲು ಆಹ್ವಾನ ಮಾಡುತ್ತಾರೆ. ಆಗ ಸನ್ನಿಧಿ ಗೊಲ್ಲನು  ಸ್ನಾನವನ್ನು ಮಾಡಿ, ಸನ್ನಿಧಾನದ  ಭೀಗವನ್ನು ತೆಗೆದುಕೊಂಡು ದೇವಸ್ಥಾನದ ಹತ್ತಿರ ಬರುತ್ತಾನೆ. ಆಗ ಅರ್ಚಕರೆಲ್ಲರೂ ಬಾಗಿಲಿನ ಎರಡೂ ಕಡೆ ನಿಂತು ಸ್ವಾಮಿಗೆ ಸುಪ್ರಭಾತವನ್ನು ಹಾಡುತ್ತಾರೆ. ಆಗ ಸನ್ನಿಧಿ ಗೊಲ್ಲನು  ಬಾಗಿಲನ್ನು ತೆಗೆದು, ಸನ್ನಿಧಿ ಗೊಲ್ಲನೆ ಸ್ವಾಮಿಯ ಮೊದಲ ದರ್ಶನವನ್ನು ಮಾಡುತ್ತಾನೆ. ಈ ರೀತಿ ತಿರುಪತಿಯ ತಿರುಮಲದ ಶ್ರೀ ವೆಂಕಟೇಶ್ವರನ ದರ್ಶನ ಸನ್ನಿಧಿ ಗೊಲ್ಲ ಎಂಬ ಕುಟುಂಬದವರು ಮಾಡುತ್ತಾರೆ.

 

 

ಅದರೆ ನಾವು  ಆ ಸ್ವಾಮಿಯ ಒಂದು ಕ್ಷಣದ ದರ್ಶನಕ್ಕಾಗಿ ಎಷ್ಟು ಕಷ್ಟ ಪಡುತ್ತೇವೆ. ಆದರೆ ಈ ಸನ್ನಿಧಿ ಗೊಲ್ಲ ಎಂಬುವವರು ಪ್ರತಿ ನಿತ್ಯ ಆ ಸ್ವಾಮಿಯ ಮೊದಲ ದರ್ಶನವನ್ನು ಮಾಡುತ್ತಾರೆ .ಇವರು ಎಷ್ಟು ಪುಣ್ಯವಂತರೆಂದು ನೀವೇ ಊಹಿಸಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top