ಹೆಚ್ಚಿನ

ಬೆಳಗಾವಿಯಲ್ಲಿ ಹಾರಾಡಲಿದೆ ದೇಶದ ಎತ್ತರದ ರಾಷ್ಟಧ್ವಜ.

ದೇಶದ ಎತ್ತರದ ಧ್ವಜ ನಾಳೆ ಅನಾವರಣ.

ದೇಶದಲ್ಲೇ ಅತೀ ಎತ್ತರದಲ್ಲಿ ಹಾರಾಡಲಿರುವ, ಕೋಟೆ ಕೆರೆಯ ದಂಡೆಯಲ್ಲಿ ಸ್ಥಾಪಿಸಿರುವ ಸುಮಾರು 110 ಮೀಟರ್ ಎತ್ತರದ ಧ್ವಜ ಫೆಬ್ರುವರಿ 12 ರಂದು ಸಮಾಜಕ್ಕೆ ಸಮರ್ಪಣೆಯಾಗಲಿದೆ.

 

 

ಸ್ಥಳೀಯ ಶಾಸಕರಾಗಿರುವ ಫಿರೋಜ್ ಸೇಠ್ ರವರ ಕನಸಿನ ಯೋಜನೆಯಾಗಿದ್ದು, ಬೆಳಗಾವಿಯ ಕೋಟೆ ಕೆರೆ ಆವರಣದಲ್ಲಿ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಸತತ ಪರಿಶ್ರಮದಿಂದ ಐದು ತಿಂಗಳು ಕಾರ್ಮಿಕರು ಕಾರ್ಯನಿರ್ವಹಿಸಿದ್ದಾರೆ.

 

 

 

 

ನಾಳೆ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ರಮೇಶ್ ಜಾರಕಿಹೊಳಿ ಭಾಗವಹಿಸಲಿದ್ದಾರೆ ಎಂದು ಶಾಸಕ ಫಿರೋಜ್ ಶೇಠ ಅವರು ತಿಳಿಸಿದ್ದಾರೆ. ಕುಂದನಗರದ ಜನ ಎತ್ತರದಲ್ಲಿ ಹಾರಾಡಲಿರುವ ರಾಷ್ಟ್ರಧ್ವಜವನ್ನು ಕಾಣಲು ಕುತೂಹಲವಾಗಿದ್ದಾರೆ. ಈ ಧ್ವಜವು ದೇಶದಲ್ಲೇ ಅತ್ಯಂತ ಎತ್ತರಕ್ಕೆ ಹಾರಾಡಲಿರುವ ಧ್ವಜವಾಗಲಿದೆ ಎಂದು ತಿಳಿದು ಬಂದಿದೆ. ವಾಘಾ ಗಡಿಯಲ್ಲಿ 105 ಮೀಟರ್ ಎತ್ತರದ ಧ್ವಜವಿದೆ. ಪುಣೆಯಲ್ಲಿ 109 ಮೀಟರ್ ಎತ್ತರದ ಧ್ವಜವಿದೆ.

 

 

ಈ ಧ್ವಜದ ಎತ್ತರ 110 ಮೀಟರ್ ಅಥವಾ 360 ಫೀಟ್ ಇರಲಿದೆ. ಬಜಾಜ್ ಎಲೆಕ್ಟ್ರಿಕ್ ಲಿಮಿಟೆಡ್ ನ ಸಂಜಯ್ ದೇವ್ರಾಜ್ ಭಗತ್ ಕಂಟ್ರಾಕ್ಟರ್ ಅವರು ಈ ಯೋಜನೆ ಕೈಗೆತ್ತಿಕೊಂಡು ಈಗ ಯಶಸ್ವಿಯಾಗಿ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ. ಈ

 

ಮೊದಲೇ ಮುಗಿಯಬೇಕಿದ್ದ ಯೋಜನೆ ತಾಂತ್ರಿಕ್ ಕಾರಣಗಳಿಂದ ಸ್ವಲ್ಪ ತಡವಾಯಿತು ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top