fbpx
ಧರ್ಮ

ಮಂಥರೆ ಎಂಬ ಗೂನು ಬೆನ್ನಿನ ಸೇವಕಿಯ ಮಾತು ಕಟ್ಟಿಕೊಂಡು ರಾಮನ ತಂದೆಯಿಂದ ಕುತಂತ್ರವಾಗಿ ಈ ಎರಡು ವರ ಪಡ್ಕೊಂಡ್ಲು ಕೈಕೇಯಿ

ದಶರಥನಿಂದ  ಕೈಕೇಯಿಯು  ವರವನ್ನು ಕೇಳಿದ್ದು.

 

ಕೈಕೇಯಿ ದಶರಥನ ಮೂರನೇ ಹೆಂಡತಿ. ಅವಳು ಚಿಕ್ಕವಳಿದ್ದಾಗಿನಿಂದಲೂ ಅವಳನ್ನು ನೋಡಿಕೊಳ್ಳುತ್ತಿದ್ದವಳು ಮಂಥರೆ  ಎಂಬ ಗೂನು ಬೆನ್ನಿನ ಸೇವಕಿ. ಅವಳು ಚಾಡಿ  ಹೇಳಿ ಇನ್ನೊಬ್ಬರ ಬಗ್ಗೆ ಕೆಟ್ಟ ಮಾತು ಆಡುತ್ತಿದ್ದುದರಿಂದ, ಯಾರೂ ಅವಳಿಗೆ ಬೆಲೆ ಕೊಡುತ್ತಿರಲಿಲ್ಲ, ಆದರೆ ಕೈಕೇಯಿಗೆ ಅವಳ ಮೇಲೆ ಅಭಿಮಾನವಿತ್ತು. ಮಂಥರೆಯು ಅರಮನೆಯಲ್ಲಿನ ಸಂಭ್ರಮದ ಕಾರಣವನ್ನು ಕೇಳಿ  ತಿಳಿದಳು. ರಾಮನಿಗೆ ಪಟ್ಟಾಭಿಷೇಕವಾದರೆ, ಕೌಸಲ್ಯೆಯು ಪಟ್ಟದ ರಾಣಿ  ಆಗಿದ್ದವಳು.  ಹೆಚ್ಚು ಸ್ಥಾನಮಾನ ಹೊಂದುವಳು. ಆಗ ಕೈಕೇಯಿಗೆ ಹೀಗೆ ಒಳಿತಾಗುವುದಿಲ್ಲವೆಂದು ತಿಳಿದು ಕೈಕೆಯಿಗೆ ವಿಷಯ ತಿಳಿಸಲು ಬಂದಳು.

 

 

ಮಂಥರೆಯಿಂದ ಶ್ರೀರಾಮನ ಪಟ್ಟಾಭಿಷೇಕದ ವಿಷಯ ತಿಳಿದು ಕೈಕೇಯಿ ಅತ್ಯಂತ ಸಂತಸಗೊಂಡಳು. ತಮ್ಮ ಮಗ ಭರತನಂತೆಯೇ  ಕೈಕೇಯಿಗೆ ಶ್ರೀರಾಮನ ಮೇಲೆ ಪ್ರೀತಿ ಇತ್ತು. ಒಳ್ಳೆಯ ಸುದ್ದಿ ಹೇಳಿದ್ದಕ್ಕಾಗಿ ಮಂಥರೆಗೆ ಮುತ್ತಿನ ಹಾರವನ್ನು ಕೊಟ್ಟಳು. ಆದರೆ ಮಂಥರೆ ಆ ಹಾರವನ್ನು ಬಿಸಾಡಿ ಆಕ್ರೋಶದಿಂದ ನಿನ್ನ ಸವತಿಯ ಮಗನಿಗೆ ರಾಜ್ಯದಲ್ಲಿ ಪಟ್ಟಾಭಿಷೇಕವಾದರೆ ನಿನಗೇನು ಲಾಭವೆಂದು ಕೇಳಿದಳು. ಆಗ ಕೈಕೇಯಿ  ರಾಮನು ಸಹ ನನಗೆ ಸ್ವಂತ ಮಗನಂತೆ, ಅವನು  ನನ್ನನ್ನು ಪ್ರೀತಿಯಿಂದ ಕಾಣುತ್ತಾನೆ ,ಎಂದಾಗ ಮಂಥರೆ ಕೈಕೇಯಿಗೆ ದುರ್ಬೋಧನೆ ಮಾಡಲಾರಂಭಿಸಿದಳು. ರಾಮನು ರಾಜನಾದರೆ ಭರತನು ಸೇವಕನಾಗುವನು, ಕೌಸಲ್ಯೆ ರಾಜಮಾತೆಯಾಗಿ ನೀನು ರಾಮನ ತಾಯಿಯ ದಾಸಿಯಾಗುವೆ, ನಾನಿನ್ನೂ ಈ ರಾಜ್ಯದಲ್ಲಿ ಇರುವುದಿಲ್ಲ. ಎಂದು ಹಠ ಹಿಡಿದು ನಾನಾ ರೀತಿಯಿಂದ ಕೈಕೇಯಿಯ ಮನಸ್ಸನ್ನು ಕೆಡಿಸಿದಳು.

 

 

ಇದರಿಂದಾಗಿ ಕೈಕೇಯಿ ಹಾಗಾದರೆ ನನ್ನ ಮಗ ಭರತನಿಗೆ ರಾಜ್ಯ ಸಿಗಬೇಕಾದರೆ, ನಾನು ಏನು ಮಾಡಲಿ ? ಎಂದು ಮಂಥರೆಯನ್ನು ಕೇಳಿದಳು  ಕೈಕೇಯಿ  ಅದಕ್ಕೆ ಮಂಥರೆಯು ಒಂದು ವಿಷಯವನ್ನು ಹೇಳಿದಳು. ಹಿಂದೆ ದೇವಾಸುರ ಯುದ್ಧದಲ್ಲಿ ದಶರಥನೊಂದಿಗೆ  ಕೈಕೇಯಿ ಸಹ ಹೋದಾಗ, ಯುದ್ಧದಲ್ಲಿ ಅಸುರ ಶಕ್ತಿಯಿಂದ ದಶರಥನು  ಎಚ್ಚರ ತಪ್ಪಿ ಬಿದ್ದಿದ್ದನು. ಕೈಕೇಯಿ ತಾನೇ ರಥ ನೆಡೆಸಿಕೊಂಡು ಉಪಚಾರ ಮಾಡಿದ್ದಳು. ಆಗ ದಶರಥನು ನಿಮಗೆ ಬೇಕಾದ ಎರಡು ವರಗಳನ್ನು ಕೇಳು ಎಂದಿದ್ದನು. ಕೈಕೆಯಿಗೆ  ಆಗ ಏನೂ ಬೇಕಿರಲಿಲ್ಲ. ವರ ಕೇಳದೇ ಹಾಗೆಯೇ ಉಳಿದಿದ್ದವು. ಈ ವರಗಳ ಸದುಪಯೋಗ ಈಗ ಮಾಡಿಕೊಳ್ಳಬಹುದೆಂದು ಮಂಥರೆ ಸೂಚಿಸಿದಳು.

 

 

ಮೊದಲನೆಯ ವರವಾಗಿ ರಾಮನನ್ನು ಹದಿನಾಲ್ಕು ವರ್ಷಗಳ ವರೆಗೆ ಕಾಡಿಗೆ ಕಳಿಸು, ಅಲ್ಲಿಯೇ ರಾಕ್ಷಸರಿಂದಲೇ  ಪ್ರಾಣಿಗಳಿಂದ ರಾಮನು ಮರಣ ಹೊಂದುವನು .ಎರಡನೆಯ ವರವಾಗಿ ಭರತನಿಗೆ ರಾಜ್ಯವನ್ನು ಕೇಳೆಂದು ಮಂಥರೆ ಕೈಕೇಯಿಗೆ ದುರ್ಬೋಧನೆ ಮಾಡಿದಾಗ, ಹೇಗೇ ಆಗಲಿ ವರಗಳನ್ನು ಪಡೆಯಬೇಕೆಂದು ಕೈಕೇಯಿ ತೀರ್ಮಾನಿಸಿ ಕೋಪಾಗಾರವನ್ನು ಪ್ರವೇಶಿಸಿದಳು .

ರಾಜ್ಯ ಕಾರ್ಯಗಳನ್ನು ಮುಗಿಸಿದ ದಶರಥನು ಕೈಕೇಯಿಯನ್ನು ಸಮಾಧಾನ ಪಡಿಸಲು ಕೋಪಗಾರಕ್ಕೆ ಬಂದನು. ರಾಣಿ, ನಿನ್ನ  ಕೋಪಕ್ಕೆ ಕಾರಣವೇನು ? ನಿಮ್ಮ ಕೋರಿಕೆ ಏನು  ? ಅದನ್ನು ನಾನು ಈಡೇರಿಸಿ ಕೊಡುತ್ತೇನೆಂದು ದಶರಥನು  ಹೇಳಿದಾಗ ಮಂಥರೆಯಿಂದ ಪ್ರೇರಣೆ ಪಡೆದ ಕೈಕೇಯಿ  ಖಂಡಿತ ನೆರವೇರಿಸಿ ಕೊಡುವ ಬಗ್ಗೆ ಪ್ರತಿಜ್ಞೆ ಮಾಡಿದರೆ ಮಾತ್ರ ಹೇಳುವನೆಂದು ಹಟ ಹಿಡಿದಳು.

ಸೂರ್ಯ ವಂಶದವರು ಆಡಿದ ಮಾತಿಗೆ ತಪ್ಪಿದವರಲ್ಲ, ಶ್ರೀರಾಮನ ಮೇಲೆ ಆಣೆ ಇಟ್ಟು ನೆರವೇರಿಸುತ್ತೇನೆ ಎಂದು ದಶರಥನು ಹೇಳಿದಾಗ, ಕೈಕೇಯಿ ವರ ಕೇಳಿದಳು. ಕೈಕೇಯಿ ಮತ್ತೊಮ್ಮೆ ಎಚ್ಚರಿಸಿ, ಹಿಂದೆ  ನೀನು ನನೆಗೆ ನೀಡಿದ ಎರಡು ವರಗಳನ್ನು ಇಂದು ಕೇಳುವೆನು. ಈಗ ರಾಮನ ಪಟ್ಟಾಭಿಷೇಕಕ್ಕೆ ತಯಾರಿ ನಡೆದಿದೆಯಲ್ಲವೇ ? ಎಂದು ಕೇಳಿದಳು ಕೈಕೇಯಿ. ರಾಮನ ಪಟ್ಟಾಭಿಷೇಕದ ಬದಲಿಗೆ ಭರತನಿಗೆ ಪಟ್ಟ ಕಟ್ಟಬೇಕು.ಇದು ಒಂದನೇ ವರ. ಎರಡನೆಯದಾಗಿ ರಾಮನು ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕು ಎಂಬುದು ಇವೆರಡೂ ವರಗಳನ್ನು ಆಡಿದ ಮಾತಿನಂತೆ ನೆಡೆಸಿಕೊಡು ಮಹಾರಾಜ ಎಂದಳು ಕೈಕೇಯಿ.

 

 

ಕೈಕೇಯಿಯ ಮಾತನ್ನು ನಂಬಲಾರದ ದಶರಥನು ಹಾಸ್ಯ ಮಾಡುತ್ತಿದ್ದಾಳೆಂದು  ತಿಳಿದು ಮತ್ತೆ ಸರಿಯಾಗಿ ತಿಳಿಯ ಬಯಸಿದಾಗ ಕೈಕೇಯಿ ಕೇಳಿದಳು ಭರತನಿಗೆ  ರಾಜ್ಯ,  ರಾಮನಿಗೆ ವನವಾಸ, ಇವು ನನ್ನ ವರಗಳು ಎಂದು ಹೇಳಿದಳು. ದಶರಥನು ಕೋಪದಿಂದ ನಿನ್ನನ್ನು ಸಹ ಸ್ವಂತ ತಾಯಿಯಂತೆ ನೋಡುವ ರಾಮನ ಮೇಲೆ ಏಕೆ ಇಷ್ಟೊಂದು ದ್ವೇಷ ? ಅವನು ನಿನಗೇನು ಅನ್ಯಾಯ ಮಾಡಿದ್ದಾನೆ. ಒಬ್ಬನಿಗೆ ರಾಜ್ಯ, ಇನ್ನೊಬ್ಬನಿಗೆ ವನವಾಸ ಇದು ನ್ಯಾಯವೇ ? ಛಿ ಪಾಪಿ ಎಂದು ಹಂಗಿಸಿದನು. ಈ ರೀತಿ ದುರ್ಬುದ್ಧಿ ನಿನಗೇಕೆ ಬಂತು ಎಂದು ದುಃಖಿಸಿದನು. ಕೈಕೇಯಿ ನಿನ್ನನ್ನು ಬೇಡಿಕೊಳ್ಳುತ್ತೇನೆ, ಉದಾರತೆಯನ್ನು ತೋರು, ಎನ್ನುತ್ತಿದ್ದಂತೆ ದಶರಥನು ಎಚ್ಚರ ತಪ್ಪಿ ಬಿದ್ದು ಬಿಟ್ಟನು.

 

 

ಕೈಕೇಯಿ ನಿಷ್ಠುರವಾಗಿ ಆಡಿದ ಮಾತಿನಂತೆ ವರ ನೀಡಿ ಎಂದಾಗ ದಶರಥ ನಿನ್ನ ಸುಂದರ ರೂಪದ ಹಿಂದೆ ಇರುವ ಈ ವಿಷವನ್ನು ನಾನು ಅರಿಯಲಿಲ್ಲ. ರಾಮನನ್ನು ಅಡವಿಗೆ ಕಳಿಸಲೇ ? ನನಗೀಗಲೇ ಸಾವು ಬರಬಾರದೇ ? ಸುಂದರವಾದುದೇ  ಒಳ್ಳೆಯದೆಂದು ನಂಬಿ ಮೂರ್ಖನಾದೆ ಎಂದು ಹಲುಬುತ್ತಾ ಹೊರಳಾಡಲು  ಆರಂಭಿಸಿದನು.

ಮಾರನೇ ದಿನ ಅಯೋಧ್ಯೆಯ ನಗರ ವಾಸಿಗಳು ಶ್ರೀರಾಮನ ಪಟ್ಟಾಭಿಷೇಕವನ್ನು ನಿರೀಕ್ಷಿಸಿ ಬಂದವರಿಗೆ, ಅನಿರೀಕ್ಷಿತ ಸುದ್ದಿ ಕಾದಿತ್ತು. ದಶರಥ ಕೈಕೇಯಿ ದಯವಿಟ್ಟು ನಿನ್ನ ಮಾತನ್ನು ಹಿಂತೆಗೆದುಕೋ  ಎಂದು ಪ್ರಾರ್ಥಿಸಿದನು.” ಆಗ ಕೈಕೇಯಿ  ನಿನ್ನ ಪ್ರೀತಿಯ ಮಗನಿಗೆ ಹೇಳುವುದು ಕಠಿಣ ಎನಿಸಿದರೆ ನಾನೇ ಹೇಳುತ್ತೇನೆ” ಎಂದು ರಾಮನನ್ನು ಕರೆತರಲು ಸೇವಕನನ್ನು ಕಳಿಸಿದಳು. ಈ ಸಮಯದಲ್ಲಿ ಆಡಿದ ಮಾತಿಗೆ ಕಟ್ಟುಬಿದ್ದ ದಶರಥನು  ನಿರುಪಾಯನಾಗಿ ನೆಲದಲ್ಲಿ ಬಿದ್ದು  ಪರಿಪರಿಯಾಗಿ ಬೇಡಿದರು,  ಏನು ಪ್ರಯೋಜನವಾಗಲಿಲ್ಲ, ಕೈಕೇಯಿ ತನ್ನ ಮಾತನ್ನು ಹಿಂತೆಗೆದುಕೊಳ್ಳಲಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top