ವಿಶೇಷ

ಭಾರತದಲ್ಲಿರೋ ವಿಚಿತ್ರ ಮತ್ತು ಅದ್ಬುತವಾದ ಈ ಹಳ್ಳಿಗಳ ಬಗ್ಗೆ ತಿಳ್ಕೊಂಡ್ರೆ ಎಷ್ಟೊಂದು ವಿಶೇಷ ಅಂತ ಅನ್ನಿಸದೆ ಇರಲ್ಲ

ಭಾರತದ  ವಿಚಿತ್ರ ಮತ್ತು ಅದ್ಬುತ 10 ಹಳ್ಳಿಗಳು. ಯಾಕೆ ವಿಚಿತ್ರ ಮತ್ತು ಅದ್ಬುತ ಇಲ್ಲಿನ ವಿಶೇಷತೆ ಏನು  ಎಂದು ತಿಳಿದುಕೊಳ್ಳಿ

 

ನಮ್ಮ ಭಾರತ ದೇಶ ಹಳ್ಳಿಗಳ ನಾಡು . ಹಳ್ಳಿಗಳು ಪ್ರಕೃತಿದತ್ತವಾಗಿ, ಸಹಜವಾಗಿ, ಸ್ವಾಭಾವಿಕವಾಗಿ ಉತ್ತಮ ಪರಿಸರವನ್ನು ಒಳಗೊಂಡಿರುವುದಲ್ಲದೆ, ಹಲವಾರು  ಹಳ್ಳಿಗಳು ನಮ್ಮ ದೇಶದಲ್ಲಿ  ತಮ್ಮ ದೇಶದಲ್ಲಿ  ಉತ್ತಮ ಸಾಧನೆಯ ಮೂಲಕ ನಿಜಕ್ಕೂ ಪ್ರಪಂಚದಲ್ಲಿ ಅತ್ಯುನ್ನತ ಹಳ್ಳಿಗಳಲ್ಲಿ ಮತ್ತು ಅತ್ಯದ್ಭುತ  ಆದರ್ಶಮಯ ಹಳ್ಳಿಗಳಲ್ಲಿ ಒಂದಾಗಿವೆ. ಅವುಗಳಲ್ಲಿ ಮೊದಲಿಗೆ

 

1.ಶನಿ ಸಿಂಗಾನಾಪುರ.

 

 

ಮಹಾರಾಷ್ಟ್ರದಲ್ಲಿ ಕಂಡು ಬರುವ ಈ ಶನಿ ಸಿಂಗಾನಾಪುರಕ್ಕೆ ಬಾಗಿಲು ಇರೋದೇ ಇಲ್ಲ . ಇನ್ನು ಈ ಶನಿ ಸಿಂಗನಾಪುರದಲ್ಲಿ ಮತ್ತೊಂದು ವಿಚಿತ್ರ ಎಂದರೆ ಯಾವುದೇ ಮನೆಗಳಿಗೂ  ಬಾಗಿಲುಗಳು  ಇರೋದೇ ಇಲ್ಲ . ಬದಲಾಗಿ ಇಲ್ಲಿ ಪೊಲೀಸ್ ಠಾಣೆಗೂ ಸಹ ಯಾವುದೇ ಬೀಗವನ್ನು ಹಾಕುವುದಿಲ್ಲ. ಇನ್ನೊಂದು ಅಚ್ಚರಿಯ ವಿಷಯ ಏನೆಂದರೆ  ಯು.ಸಿ.ಒ ಬ್ಯಾಂಕ್ ತನ್ನ ಶಾಖೆಯನ್ನು ಇಲ್ಲಿ ಆರಂಭ ಮಾಡಿ ಈ ಬ್ಯಾಂಕಿಗೂ  ಸಹ ಇಲ್ಲಿ ಬಾಗಿಲು ಇಲ್ಲದೇ ಇರುವುದೇ ಇದಕ್ಕೆ ನೈಜ ಉದಾಹರಣೆ.

 

2.ಬಲ್ಲಿಯ.

 

 

ಅವು ಉತ್ತರ ಪ್ರದೇಶದಲ್ಲಿ ಕಂಡು ಬರುವ ಈ ಹಳ್ಳಿ ಆತ್ಯಂತ ಭಯಂಕರವಾದ ಒಂದು ಆರೆಸೆನಿಕ  ಆಸಿಡ್ ಅನ್ನು  ನೀರಲ್ಲಿ ಹೊಂದಿದೆ. ಆದರೆ ಇಲ್ಲಿನ ಜನರು ಮಾತ್ರ ಆ ನೀರನ್ನು ಒಪ್ಪಿಕೊಳ್ಳದೆ  ಮತ್ತು ಅದನ್ನು ಕುಡಿಯಲು ಸಾಧ್ಯವಾಗದೆ ಸರಕಾರಕ್ಕೆ  ಒಂದು  ಶಿಫಾರಸ್ಸನ್ನು  ಮತ್ತು ವಕಾಲತ್ತನ್ನು ನೀಡಿದ್ದರು. ಆದರೆ ಸರ್ಕಾರ ಯಾವುದೇ ಸೂಕ್ತ  ಕ್ರಮ ಕೈಗೊಳ್ಳದೇ ಇರುವುದರಿಂದ, ಅಲ್ಲಿನ ಹಳ್ಳಿಯ ಜನರೇ ಬಾವಿಗಳನ್ನು ಅಗೆದು ಅದರಿಂದ ಶುದ್ಧವಾದ ನೀರನ್ನು ಕುಡಿಯುತ್ತಿದ್ದಾರೆ .

3.ಕೂರ್ಗ ಬಲ್ಲುರ್ .

 

 

ಇದು ಕರ್ನಾಟಕದಲ್ಲಿ ಕಂಡು ಬರುತ್ತದೆ . ಇನ್ನು ಏನಾದರು ಪಕ್ಷಿಗಳಿಗೆ ಏನಾದರೂ ಇಲ್ಲಿ ಹಾರಾಡುವಾಗ ತೊಂದರೆಯಾದರೆ  ಅವುಗಳಿಗಾಗಿ ವಿಶೇಷ ವಸತಿಗಳನ್ನು ಈ ಹಳ್ಳಿಯಲ್ಲಿ ಏರ್ಪಾಡು ಮಾಡಲಾಗುತ್ತದೆ.

 

4.ಚಾಬರ್ .

 

 

ಹರಿಯಾಣ ರಾಜ್ಯದಲ್ಲಿ ಕಂಡು ಬರುತ್ತದೆ. ಹೆಣ್ಣು ಮಕ್ಕಳು ಇಲ್ಲಿ ಜನಿಸಿದರೆ ಹಬ್ಬವನ್ನಾಗಿ ಆಚರಣೆ ಮಾಡುತ್ತಾರೆ. ಆಷ್ಟೇ ಅಲ್ಲದೆ ಆ ಹೆಣ್ಣು ಮಗುವನ್ನು ಹೆತ್ತ ಮಹಾತಾಯಿ ಕುಂಗಾಟ ಅಂದರೆ ಮುಖಕ್ಕೆ ಹಾಕಿಕೊಳ್ಳುವ ಸ್ಕ್ಯಾರ್ಫ್  ಎಂಬ ವಸ್ತುವನ್ನು  ಮತ್ತೆ ಕಟ್ಟಿಕೊಳ್ಳುವುದಿಲ್ಲ.  ಬದಲಾಗಿ ಆ ಒಂದು ಹೆಣ್ಣು ಮಗುವಿಗೆ ಜನನ ನೀಡಿದ ಕಾರಣದಿಂದ ಆಕೆ  ಬಹಳಷ್ಟು ಹೆಮ್ಮೆ  ಪಡುತ್ತಾಳೆ.

 

5.ದಾರ್ನನ್.

 

 

ಭಾರತದ ಅತ್ಯಂತ ಬಡ ರಾಜ್ಯ ಎಂದು ಹೇಳಿ ಕೊಳ್ಳುವ  ಬಿಹಾರದಲ್ಲಿ ಕಂಡು ಬರುತ್ತದೆ. ಇಲ್ಲಿ ಮೂವತ್ತು ವರ್ಷಗಳಿಂದ ವಿದ್ಯುತ್ ಪೂರೈಕೆ ಸಹ  ಇಲ್ಲ. ಹಾಗಾಗಿ ಸೋಲಾರ್ ಪವರ್ ನಿಂದ ಮತ್ತು  ಸೌರಶಕ್ತಿಯಿಂದ ತಮ್ಮ ದಿನನಿತ್ಯದ ಕೆಲಸಗಳನ್ನು ಇಲ್ಲಿನ ಜನರು ಮಾಡಿಕೊಳ್ಳುತ್ತಾರೆ.

 

6.ಪೊರತಾಣಿಘಟ.

 

 

ಕೇರಳ ರಾಜ್ಯದಲ್ಲಿ ಕಂಡುಬರುತ್ತದೆ. ಈ ಹಳ್ಳಿಯಲ್ಲಿ ಎಲ್ಲರೂ ವಿದ್ಯಾವಂತರಾಗಿದ್ದು, 2011ರ ಲೆಕ್ಕದ ಪ್ರಕಾರ 17,563 ಜನರು ಸಹ ಐದು  ಇಲ್ಲಿ ಅಕ್ಷರಸ್ಥರಾಗಿದ್ದರು. ಇಲ್ಲಿ ಶೇಖಡ ನೂರರಷ್ಟು ಅಕ್ಷರಸ್ಥ ಎನ್ನುವ ಹಳ್ಳಿಗೆ ಇದು ಪ್ರತೀತಿ ಪಡೆದಿದೆ.

 

7.ಪೋನ್ಸಾರಿ.

 

 

ಇದು ಗುಜರಾತ್ ರಾಜ್ಯದಲ್ಲಿ ಕಂಡು ಬರುತ್ತದೆ .ಈ ಪ್ರಾಂತ್ಯ ಅತ್ಯಂತ ಟೆಕ್ನಾಲಜಿಯಲ್ಲಿ ಮುಂದಿರುವ ಪ್ರಾಂತ್ಯ . ಯಾವುದೇ ನಗರಕ್ಕೂ ಸರಿಸಾಟಿ ಇರುವ ಈ ಒಂದು ಹಳ್ಳಿಯಲ್ಲಿ ಸಿಸಿಟಿವಿ, ವೈಫೈ ಕನೆಕ್ಷನ್, ಹೀಗೆ ಎಲ್ಲಾ ಆಧುನಿಕ ತಾಂತ್ರಿಕತೆಯ ವಿದ್ಯಾಮಾನಗಳು ಮತ್ತು ತಾಂತ್ರಿಕ ಶಕ್ತಿಯಂತ ಬೆಳವಣಿಗೆಯಾಗಿದೆ.

 

8.ಆಲಿನೈಲ್

 

 

ಇದು ಈಸ್ಟ್ ಕಾಶಿಜಿರಿ  ಎಂಬ ಜಿಲ್ಲೆಯಲ್ಲಿ ಮೇಘಾಲಯದಲ್ಲಿ ಕಾಣಬರುವ ಒಂದು ಹಳ್ಳಿ. ಇದು ನಿಜಕ್ಕೂ ಅತ್ಯಂತ ಸ್ವಚ್ಛ ಹಳ್ಳಿ ಎಂದೇ ಖ್ಯಾತಿಯಾಗಿದೆ.

 

9.ಯುವಾರೆ ಬಜಾರ.

 

 

ಇದು ಮಹಾರಾಷ್ಟ್ರದಲ್ಲಿ ಕಂಡುಬರುತ್ತದೆ. ಈ ಹಳ್ಳಿಯಲ್ಲಿ ಎಲ್ಲರೂ ಲಕ್ಷಾಧಿಕಾರಿಗಳು ಮತ್ತು ಕೋಟ್ಯಾಧಿ  ಪತಿಗಳೇ. ಆಷ್ಟೇ ಅಲ್ಲದೆ 60 ಜನ ಬಿಲೇನಿಯರ್ ಇರುವ ಒಂದು ಹಳ್ಳಿಯಾಗಿದೆ. ಬಡತನ ಅಂದ್ರೆ ಏನು ಅಂತಲೇ ಗೊತ್ತಿಲ್ಲ. ಭಾರತದ ಅತ್ಯಂತ ಶ್ರೀಮಂತ ಹಳ್ಳಿ ಎಂದು ಇದು ಖ್ಯಾತಿಗಳಿಸಿದೆ.

 

10.ವಿಪಲ್ ರಾಟರಿ.

 

 

ಇದು ರಾಜಸ್ತಾನದಲ್ಲಿ  ಕಂಡುಬರುತ್ತದೆ.  ಈ ಹಳ್ಳಿಯಲ್ಲಿ ಹೆಣ್ಣು ಮಕ್ಕಳು ಜನಿಸಿದರೆ 101 ಸಸಿಗಳನ್ನು   ನೆಡುತ್ತಾರೆ. ಅಷ್ಟೇ  ಆಲ್ಲದೇ ಇಲ್ಲಿ  ಗ್ರಾಮಸ್ಥರು ಎಲ್ಲರೂ ಸೇರಿ ಮೂವತ್ತೊಂದು ಸಾವಿರ ಹಣವನ್ನು ಆ ಒಂದು ಮಗುವಿನ ಹೆಸರಿಗೆ ಇಪ್ಪತ್ತು ವರ್ಷಗಳಿಗೆ ಫಿಕ್ಸೆಡ್ ಮಾಡುತ್ತಾರೆ. ಒಟ್ಟಿನಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಶಾಪ ಎಂದು ತಿಳಿದುಕೊಳ್ಳುವ ಈ ಕಾಲದಲ್ಲಿ ಈ ಹಳ್ಳಿ ಹೆಣ್ಣು ಮಕ್ಕಳ ಜನನಕ್ಕೆ ನಾಂದಿ ಆಡಿದೆ.

ಹಳ್ಳಿಯಲ್ಲಿ ಹುಟ್ಟಿರುತ್ತೇವೆ ಎಂದು ಅದೆಷ್ಟು ಜನ ತಲೆ ಚಚ್ಚಿ ಕೊಳ್ಳುತ್ತಾರೆ. ಆದರೆ ಹಳ್ಳಿಗಳಲ್ಲಿ ಹುಟ್ಟುವುದಕ್ಕೆ ಎಂದು  ನಾಚಿಕೆ ಪಡಬೇಡಿ, ಬದಲಾಗಿ ಗರ್ವ ಪಡುವಂತಹ ಹಳ್ಳಿಗಳು ಸಹ ನಮ್ಮ ದೇಶದಲ್ಲಿ ಇರುವುದಕ್ಕೆ ಭಾರತ ಹಳ್ಳಿಗಳ ದೇಶ ಎಂದು ಹೇಳಿಕೊಳ್ಳಲು ನಾವೆಲ್ಲರೂ ಹೆಮ್ಮೆ ಪಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top