ಸಮಾಚಾರ

ರಾಜಿ ಮಾಡಿಕೊಳ್ಳದ ಡಿಜಿಟಲ್ ಸಂಸ್ಥೆಗಳಿಗೆ ಸೆಡ್ಡು ಹೊಡೆದ ಚಿತ್ರರಂಗ, ಸ್ವಂತ ಡಿಜಿಟಲ್ ಸಂಸ್ಥೆ ಸ್ಥಾಪನೆಗೆ ಮುನ್ನಡಿ

ಕನ್ನಡ ಚಿತ್ರರಂಗ ಹಾಗು ಯುಎಫ್‌‌ಒ, ಸಿಯುಬಿಇ ಸಂಸ್ಥೆಗಳ ಒಪ್ಪಂದ ಮುರಿದು ಬಿದ್ದ ಕಾರಣ ಕಳೆದ ಶುಕ್ರವಾರ ಯಾವ ಹೊಸ ಕನ್ನಡ ಚಿತ್ರಗಳು ಆಗಿರಲಿಲ್ಲ. ಹೊಸ ಡಿಜಿಟಲ್ ವಿತರಕ ಸಂಸ್ಥೆಗಳ ಜೊತೆಗೆ ಒಪ್ಪಂದ ಆಗಿ ಚಿತ್ರ ಬಿಡುಗಡೆ ಆಗುವರೆಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವ ಸಾ. ರಾ. ಗೋವಿಂದು ಅವರು ತಿಳಿಸಿದ್ದಾರೆ. ಡಿಜಿಟಲ್ ಸರ್ವಿಸ್ ಪ್ರೊವೈಡರ್ ತೆರಿಗೆ ದರ ಸಂಬಂಧ ಈ ಬಿಕ್ಕಟ್ಟು ಚಿತ್ರರಂಗ ಹಾಗು ಯುಎಫ್‌‌ಒ, ಸಿಯುಬಿಇ ಮಧ್ಯೆ ಏರ್ಪಟ್ಟಿದೆ.

 

 

ನೆರೆಯ ತಮಿಳುನಾಡಿನಲ್ಲೂ ಕೂಡ ಇದೆ ಕಾರಣಕ್ಕೆ ಯಾವುದೇ ಸಿನಿಮಾಗಳು ಬಿಡುಗಡೆ ಆಗಿರಲಿಲ್ಲ. ಈ ವಿಷಯವಾಗಿ ಬೆಂಗಳೂರಿನಲ್ಲಿ ತಮಿಳು ನಟ ವಿಶಾಲ್, ಪ್ರಕಾಶ್ ರೈ, ರಾಕ್‌ಲೈನ್ ವೆಂಕಟೇಶ್, ಮುನಿರತ್ನ, ಸಾ.ರಾ. ಗೋವಿಂದು ಹಾಗು ಇನ್ನು ಹಲವಾರು ಕನ್ನಡ ಹಾಗು ತಮಿಳು ಚಿತ್ರರಂಗದವರು ಭಾಗಿ ಆಗಿದ್ದರು. ಐದು ಚಿತ್ರರಂಗದವರು ಒಟ್ಟಾಗಿ ನಿರ್ಣಯ ತೆಗೆದುಕೊಳ್ಳಲಿದ್ದಾರೆ.

 

 

ಕರ್ನಾಟಕ ಚಿತ್ರರಂಗ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ. ಗೋವಿಂದು ಮಾತನಾಡಿ ಕಳೆದ ಮೂರೂ ತಿಂಗಳಿಂದ ಬೇಡಿಕೊಂಡರು ಡಿಜಿಟಲ್ ಸಂಸ್ಥೆಗಳು ರಾಜಿ ಆಗುತ್ತಿಲ್ಲ. ಆದ ಕಾರಣದಿಂದ ನಾವೇ ದಕ್ಷಿಣ ಭಾರತ ಐದು ಚಿತ್ರರಂಗದವರು ಬಂಡವಾಳ ಹೂಡಿ ಸ್ವಂತ ಡಿಜಿಟಲ್ ಸಂಸ್ಥೆ ಮಾಡಲು ತೀರ್ಮಾನ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು. ಎಲ್ಲ ನಿರ್ಮಾಪಕರಿಗೆ ಹೊಸ ಚಿತ್ರಗಳನ್ನು ಬಿಡುಗಡೆ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದೇವೆ. ನಾವೇ ಸ್ವಂತ ಡಿಜಿಟಲ್ ಸಂಸ್ಥೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ನಿರ್ಮಾಪಕರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು,

 

 

ದಕ್ಷಿಣ ಭಾರತದ ಐದು ಚಿತ್ರರಂಗದವರು ಒಂದಾಗಿರುವುದರಿಂದ ಡಿಜಿಟಲ್ ಸಂಸ್ಥೆಗಳು ಮಣಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಅವರು ರಾಜಿ ಆಗದಿದ್ದ ಪಕ್ಷದಲ್ಲಿ ದಕ್ಷಿಣ ಭಾರತದ ಚಿತ್ರದವರು ಹೊಸ ಡಿಜಿಟಲ್ ಸಂಸ್ಥೆ ಪ್ರಾರಂಭ ಮಾಡಲಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top