ಸಮಾಚಾರ

ಅಸಹ್ಯ ಚಿತ್ರ, ಸಂದೇಶ್ ಫೇಸಬುಕನಲ್ಲಿ ಕಳುಹಿಸಿ ರವಿ ಬೆಳಗೆರೆ ಪುತ್ರಿ ಭಾವನಾಗೆ ಕಿರುಕುಳ

“ನನ್ನ ಫ್ರೆಂಡ್ ಲಿಸ್ಟ್ ನಲಿ ಯಾರಾದರೂ ಪೋಲೀಸ್ ಸ್ನೇಹಿತರು ಇದ್ದೀರಾ? ನಾನು ಕಂಪ್ಲೇಂಟ್ ಕೊಡಬೇಕಿತ್ತು” ಎಂದು ಪತ್ರಕರ್ತ ರವಿ ಬೆಳಗೆರೆ ಅವರ ಪುತ್ರಿ ಭಾವನಾ ಬೆಳಗೆರೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

 

 

ಭಾವನಾ ಅವರಿಗೆ ಪ್ರದೀಪ್ ಎನ್ನುವ ವ್ಯಕ್ತಿಯೊಬ್ಬ ಪದೇ ಪದೇ ಫೇಸ್ಬುಕ್ ನಲ್ಲಿ ವಿಡಿಯೋ ಕಾಲ್ ಮಾಡಿ ತೊಂದರೆ ಕೊಡ್ದುತ್ತಿದ್ದಂತೆ, ಆತನಿಗೆ ಮೊದಲಿಗೆ ಮನವಿ ಮಾಡಿದ ಭಾವನಾ ಬೆಳಗೆರೆ ಏನಾದರು ಹೇಳುವುದಿದ್ದರೆ ಮೆಸೇಜ್ ಮಾಡಿ ನಾನು ಕಾಲ್ ರಿಸೀವ್ ಮಾಡುವುದಿಲ್ಲ ಎಂದು ತಿಳಿಸಿದ್ದರು.

 

 

 

 

ಆದರೆ ಭಾವನಾ ಬೆಳಗೆರೆ ಅವರು ಮಾಡಿದ ಮನವಿದೆ ಸುಮ್ಮನಾಗದ “Pradeep Pradeep kumar Payal” ಎನ್ನುವ ಫೇಸ್ಬುಕ್ ಖಾತೆ ಹೊಂದಿರುವ ವ್ಯಕ್ತಿ ಅವರಿಗೆ ಮತ್ತೆ ಕಾಲ್ ಮಾಡಲು ಶುರು ಮಾಡಿದ. ಅಷ್ಟೇ ಅಲ್ಲದೆ ಅಸಹ್ಯ ಚಿತ್ರಗಳನ್ನು ಹಾಗು ಸಂದೇಶಗಳನ್ನು ಕಳುಹಿಸಿದ ಇದರ ಕುರಿತು ಫೇಸ್ಬುಕ್ ಪೋಸ್ಟ್ ಮಾಡಿದ ಭಾವನಾ ಬೆಳಗೆರೆ ನನಗೆ ಗೊತ್ತಿಲ್ಲ ನಾನು ಸೈಬರ್ ಕ್ರೈಂ ನಲ್ಲಿ ಕಂಪ್ಲೇಂಟ್ ಮಾಡಲೇ ಅಥವಾ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಮಾಡಲೇ ಎಂದು ಹೇಳಿದರು.

 

 

 

ಸಾಮಾಜಿಕ ಜಾಲತಾಣದಲ್ಲಿ ಭಾವನಾ ಬೆಳಗೆರೆ ಅವರಿಗೆ ಅಪಾರವಾದ ಬೆಂಬ ವ್ಯಕ್ತವಾಗಿದೆ. ಬಸವರಾಜ ಎಂ ಮಠಪತಿ ಎಂಬುವವರು ಬೆಂಬಲ ಸೂಚಿಸಿ ” ನಿಮ್ಮ ಸಹಾಯಕ್ಕೆ ಮಾಧ್ಯಮ ಮಿತ್ರರಾದ ನಾವಿದ್ದೇವೆ.ಮಾಧ್ಯಮ ಲೋಕದ ದೊರೆ ರವಿ ಬೆಳಗೆರೆಯವರ ಮಗಳಿಗೂ ಕಾಟ ಕೊಡುವ ಆ ನಾಲಾಯಕನಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಲಿಸ್ತಾರೆ.ಬೇಗ ದೂರು ಸಲ್ಲಿಸಿ. ” ಎಂದು ಬರೆದಿದ್ದಾರೆ.

 

 

ಭಾವನಾ ಅವರು ಈ ಬಗ್ಗೆ ದೂರು ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ದೂರು ದಾಖಲಿಸಿರುವ ಬಗ್ಗೆ ಇನ್ನು ಯಾವುದೇ ಖಚಿತ ಮಾಹಿತಿ ಇಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top