fbpx
ದೇವರು

ರಾವಣ ಇನ್ನೇನು ಸಾಯ್ಬೇಕು ಅಂದಾಗ ಲಕ್ಷ್ಮಣನಿಗೆ ಹೇಳಿದ ಈ 5 ಮುಖ್ಯವಾದ ರಹಸ್ಯಗಳು ಪ್ರತಿಯೊಬ್ಬರೂ ಜೀವನದಲ್ಲಿ ತಿಳ್ಕೊಳ್ಳೆಬೇಕು

ರಾವಣನು ಮರಣ ಹೊಂದುವಾಗ ಲಕ್ಷ್ಮಣನಿಗೆ ಹೇಳಿದ ಜೀವನದ 5 ಅತಿ ಮುಖ್ಯವಾದ ಕಿವಿಮಾತುಗಳು ಅದರ ರಹಸ್ಯಗಳು.

 

ರಾಮನ ಚರಿತೆ ಪರಮ ಅದ್ಬುತ ರಾಮಾಯಣ ಪರಮ ಆನಂದವನ್ನು ನೀಡುವಂತಹ ಒಂದು ಗ್ರಂಥ. ರಾಮಾಯಣದಲ್ಲಿ ಅಡಗಿರುವ ರಹಸ್ಯಗಳು ಅವು ಜೀವನದಲ್ಲಿ ಜೀವನದ ಉದ್ದಕ್ಕೂ ಪಾಲಿಸುವಂತಹ ಅನೇಕ ಯುಕ್ತಿಗಳನ್ನು ಮಾರ್ಗದರ್ಶನಗಳನ್ನು ನೀಡುವಂಥವು. ರಾಮಾಯಣದಲ್ಲಿ ಬರುವ ಪಾತ್ರಗಳು ಮುಖ್ಯವಾಗಿ ರಾಮ, ಸೀತೆ, ಹನುಮಂತ, ಲಕ್ಷ್ಮಣ , ಖಳನಾಯಕನಾದ  ರಾವಣ.

 

 

ರಾವಣನು ಈ ಸಂಪೂರ್ಣ ರಾಮಾಯಣದಲ್ಲಿ ಕೆಟ್ಟ ಪ್ರವೃತ್ತಿ  ಉಳ್ಳವನಾದರೂ  ಕೂಡ ಅತನು  ಪರಮ ಪಂಡಿತನು.  ಬ್ರಾಹ್ಮಣೋತ್ತಮನು . ಅಷ್ಟೇ ಅಲ್ಲದೆ ಸಕಲ ವಿದ್ಯಾ ಪಾರಂಗತನೂ, ಸಕಲ ಕಲಾ ಕೋವಿತನು.  ಅಂತಹ ರಾವಣನು ಮರಣ ಆವಸ್ಥೆಯಲ್ಲಿ ಇರುವಾಗ  ಶ್ರೀ ರಾಮನ  ತಮ್ಮನಾದ  ಲಕ್ಷ್ಮಣನನ್ನು ಕರೆದು ಕೆಲವು  ಹಿತನುಡಿಗಳನ್ನು ಹೇಳುತ್ತಾನೆ.

ಅಂತಹ ಶ್ರೇಷ್ಠ ವ್ಯಕ್ತಿಯ, ಮಹಾನ್ ವ್ಯಕ್ತಿಯ ಕಿವಿಮಾತುಗಳನ್ನು ಆಲಿಸಿ ಬಾ ಎಂದು ಕಳುಹಿಸುತ್ತಾನೆ ಶ್ರೀ ರಾಮನು. ರಾಮನ ಕೈಯಲ್ಲಿ ಸಂಹಾರವಾದ ರಾವಣನು ಮರಣಾವಸ್ಥೆಯಲ್ಲಿ ಯುದ್ಧ ಭೂಮಿಯಲ್ಲಿ ನರಳುತ್ತಾ ಬಿದ್ದಿರುತ್ತಾನೆ. ಅಣ್ಣನ ಮಾತಿಗೆ ಮನ್ನಣೆಯನ್ನು ನೀಡುತ್ತಾ , ಗೌರವಿಸುತ್ತಾ ಲಕ್ಷ್ಮಣನು ಯುದ್ಧ ಭೂಮಿಗೆ ತೆರಳುತ್ತಾನೆ .ಯುದ್ಧ ಭೂಮಿಗೆ ಹೋಗಿ ರಾವಣನ ಪಾದಕ್ಕೆ ನಮಸ್ಕರಿಸಿ  ಸ್ವತಃ ರಾಮನೇ ಇಲ್ಲಿ ಕಳುಹಿಸಿರುವುದಾಗಿ ಹೇಳುತ್ತಾನೆ.

ಜೀವನಕ್ಕೆ  ಅಗತ್ಯವಾದ ಕೆಲವು  ಕಿವಿಮಾತುಗಳನ್ನು  ಹೇಳಬೇಕೆಂದು ಬಿನ್ನವಿಸಿಕೊಳ್ಳುತ್ತಾನೆ.  ಆಗ ರಾವಣನು ತನ್ನ ವಿರೋಧಿಯಾದ ರಾಮನ  ತಮ್ಮನನ್ನು ಕಂಡು ಹಸನ್ಮುಖನಾಗಿ, ಅವನಿಗೆ ಕರೆದು ಕೆಲವು ಕಿವಿಮಾತುಗಳನ್ನು ಹೇಳುತ್ತಾನೆ. ಅವು ಏನು ಎಂದರೆ.

 

 

1.ರಥ ಸಾರಥಿಗಾಗಲಿ ,ಅಡಿಗೆಯವರಿಗಾಗಲಿ,ಕಾವಲುಗಾರನಿಗೆ ಆಗಲಿ  ಸಹೋದರರಿಗೆ ಆಗಲಿ ಯಾವಾಗಲೂ ಇವರೊಂದಿಗೆ ಸ್ನೇಹದಿಂದ ವ್ಯವಹರಿಸಬೇಕು. ಅಂತವರ ಜೊತೆಗೆ  ಶತ್ರುತ್ವ ಸಲ್ಲದು. ಯಾಕೆಂದರೆ  ಸಮಯ ಬಂದಾಗ ಇವರಿಂದ ನೀನು ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಅವರೊಂದಿಗೆ ಸ್ನೇಹ ಶಿಲೆಯಾಗಿ ವರ್ತಿಸಬೇಕು ಎಂದು ಹೇಳುತ್ತಾನೆ.

2.ನಿನ್ನೊಂದಿಗೆ ಇದ್ದು ನಿನ್ನನ್ನು ವಿಮರ್ಶೆ ಮಾಡುವವರ ಬಗ್ಗೆ ಹೆಚ್ಚು ನಂಬಿಕೆಯಿಂದ ಇರು. ಆದರೆ ನಿನ್ನನ್ನು ಹೊಗಳುವವರನ್ನು  ಮಾತ್ರ ನಂಬಬೇಡ ಜೀವನದಲ್ಲಿ ಎಂದು ಹೇಳುತ್ತಾನೆ.

 

 

3.ಎದುರಾಳಿ ಶತ್ರುವನ್ನು ಕಡಿಮೆ ಮಾಡಿ ಅಂದಾಜು ಮಾಡಬೇಡ. ಯಾವಾಗಲೂ ನೀನು ಜಯಶಾಲಿ ಆಗುತ್ತಿಯಾ ? ಎಂದು ಬೀಗಬೇಡ. ಯಾರ  ಹಿಂದೆ ಎಷ್ಟು ಬಲ ಅಡಗಿದೆ ಎನ್ನುವುದು ಯಾರಿಗೆ ಗೊತ್ತು ? ಆದಕ್ಕೆ  ಒಂದೇ ಒಂದು ತಪ್ಪು ಹೆಜ್ಜೆ ಜೀವನವನ್ನೆ ನಾಶ ಪಡಿಸುತ್ತದೆ . ಈಗ ನಾನು  ಬಗ್ಗೆ  ಕೂಡ ಅದೇ ಆಗಿದ್ದು . ಹನುಮಂತನ್ನನ್ನು ಕಡಿಮೆ ಮಾಡಿ ನೋಡಿದ್ದರಿಂದಲೇ ನನ್ನ ಗತಿ ಹೀಗಾಯಿತು ಎಂದು ಹೇಳುತ್ತಾನೆ.

4.ರಾಜನಿಗೆ ಯುದ್ಧದಲ್ಲಿ ಗೆಲ್ಲುವ ಬಯಕೆ ಇರಬೇಕು. ಆದರೆ ಅತಿಯಾದ ಬಯಕೆ  ಎಂದಿಗೂ ಸಲ್ಲದು. ಇನ್ನು ಭಗವಂತನನ್ನು ಪ್ರೀತಿಸಲು ಬಹುದು ಅಥವಾ ಪ್ರೀತಿಸದೆ ಕೂಡ ಇರಬಹುದು. ಆದರೆ ನಿನ್ನ  ನಿಲುವು ಯಾವುದೇ ಆಗಲಿ ಅದು ದೃಢವಾಗಿರಬೇಕು. ದೃಢ ನಂಬಿಕೆ ಇರಬೇಕು ಎಂದು ಹೇಳುತ್ತಾನೆ.

 

 

5.ಯುದ್ಧದಲ್ಲಿ ಆಗಲಿ ಜೀವನದಲ್ಲಿ ಆಗಲಿ ನಿನ್ನೊಂದಿಗೆ ಸಹಕರಿಸುವವರಿಗೆ  ಯಾವಾಗಲೂ ಸದಾವಕಾಶ ನೀಡಬೇಕು. ಆ ಅವಕಾಶಗಳಿಂದ   ಅವರು ಮುನ್ನುಗ್ಗಿದರೆ ನೀನು ಕೂಡ ಜಯಶಾಲಿಯಾಗುತ್ತಿಯ  ಎನ್ನುವುದನ್ನು ಮರೆಯಬಾರದು.

ಈ ಕೆಲವು  ಕಿವಿಮಾತುಗಳನ್ನು ನೀನು ನಿನ್ನ ಮನಸ್ಸಿನಲ್ಲಿ ಮತ್ತು ಜೀವನದಲ್ಲಿ ಅಳವಡಿಸಿಕೊಂಡು . ಈ ಕಿವಿಮಾತುಗಳು ಕೇವಲ ಲಕ್ಷ್ಮಣನಿಗೆ ಮಾತ್ರವೇ ಅಲ್ಲ ಸಮಸ್ತ ಪ್ರಪಂಚದಲ್ಲಿರುವ ಪ್ರತಿಯೊಬ್ಬರಿಗೂ ಅನ್ವಯವಾಗುವಂತಹ ಕಿವಿಮಾತುಗಳು. ಜೀವನ ಸುಗಮವಾಗಿ ಸಾಗಬೇಕು ಅಂದ್ರೆ ಇಂತಹ ಆಸಕ್ತಿದಾಯಕ ಸದ್ವಿಚಾರಗಳು ಸಾಕಷ್ಟು ರಾಮಾಯಣದಲ್ಲಿ  ಅಡಗಿವೆ. ಅದಕ್ಕೆ ರಾಮನೇ ಸ್ವತಃ  ಲಕ್ಷ್ಮಣನನ್ನು  ರಾವಣನ ಬಳಿ ಕಳುಹಿಸಿ, ಇಂತಹ ಮಾತುಗಳನ್ನು ಸಮಸ್ತ ಪ್ರಪಂಚಕ್ಕೆ ತಿಳಿಯುವಂತೆ ಮಾಡುತ್ತಾನೆ. ಹೀಗೆ  ರಾಮಾಯಣ ಒಂದು ಸಾಕ್ಷಿಯಾಗಿ ನಿಲ್ಲುತ್ತದೆ.

 

 

ಇಂದು ನಾವು ಮಾತನಾಡುವ ಪರ್ಸನಾಲಿಟಿ ಡವಲಪ್ಮೆಂಟ್ ಎಂದು ಹೇಳುವ ವಿಷಯದಲ್ಲಿ ಈ ವಿಷಯಗಳು ಸಾಕಷ್ಟು ಅತ್ಯಮೂಲ್ಯವಾದ ಪಾತ್ರವನ್ನು ವಹಿಸುತ್ತದೆ ಹೀಗೆ ಸರ್ವತೋಮುಖ ಅಭಿವೃದ್ಧಿಗೆ ಜೀವನದಲ್ಲಿ ಎಂತಹ ಕಿವಿಮಾತುಗಳು ಅವಶ್ಯಕತೆ ಎಷ್ಟಾದರೂ ಇದೆ. ಇಂತಹ ಕಿವಿ ಮಾತುಗಳು ರಹಸ್ಯವನ್ನು ಪ್ರತಿಯೊಬ್ಬರೂ ಜೀವನದಲ್ಲಿ ತಿಳಿಯಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top