ಭವಿಷ್ಯ

ಸಾಮುದ್ರಿಕ ಶಾಸ್ತ್ರದ ಪ್ರಕಾರ ದೇಹದ ಮೇಲಿರುವ ಗುರುತುಗಳು ನಿಮ್ಮ ಗುಣ ಸ್ವಭಾವಗಳ ಬಗ್ಗೆ ಚೆನ್ನಾಗಿ ಹೇಳುತ್ತವೆಯಂತೆ

ದೇಹದ ಮೇಲಿರುವ ಗುರುತು ನಿಮ್ಮ ಸ್ವಭಾವವನ್ನು ಹೇಳುತ್ತವೆ.

 

ಹುಟ್ಟುವಾಗ ಇಲ್ಲದಿದ್ದ ಚರ್ಮದಲ್ಲಿ ಕಾಲ ಕಾಲದಂತೆ ಹೊಸದಾಗಿ ಕಲೆಗಳು ಅಥವಾ ವರ್ತುಲಗಳು ಕಂಡುಬರುತ್ತದೆ. ಈ ದಿನ ಈ ಕಲೆಗಳು ಅಥವಾ ಗುರುತುಗಳ ಬಗ್ಗೆ ಕೆಲವು ಅಮೂಲ್ಯವಾದ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ

 

 

ನಮ್ಮ ಚರ್ಮದ ಜೀವಕೋಶಗಳು ಸತತವಾಗಿ ಸಾಯುತ್ತಾ ಹೊಸದಾಗಿ ಹುಟ್ಟುತ್ತಾ ಹೋಗುತ್ತದೆ.ಕೇವಲ ಹುಟ್ಟು ಮಚ್ಚೆಗಳು ಮಾತ್ರ ಹೆಚ್ಚು ಕಡಿಮೆ ಹಾಗೇ ಇರುತ್ತವೆ ಅಥವಾ ದೊಡ್ಡದಾಗುತ್ತಾ ಹೋಗುತ್ತದೆ. ಆದರೆ ಹುಟ್ಟುವಾಗ ಇಲ್ಲದಿದ್ದ ಚರ್ಮದಲ್ಲಿ ಕಾಲ ಕಾಲದಂತೆ ಹೊಸದಾಗಿ ಕಲೆಗಳು ಅಥವಾ ವರ್ತುಲಗಳು ಕಂಡುಬರುತ್ತದೆ.ಇವತ್ತಿನ ವಿಡಿಯೋದಲ್ಲಿ ಈ ಕಲೆಗಳು ಅಥವಾ ಗುರುತುಗಳ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.

ಸಾಮಾನ್ಯವಾಗಿ ನೋವು ಅಥವಾ ತುರಿಕೆ ಇಲ್ಲದಿದ್ದಲ್ಲಿ ನಾವೆಲ್ಲ ಈ ಗುರುತುಗಳನ್ನು ಅಲಕ್ಷಿಸುತ್ತೇವೆ. ಒಂದೇ ತಿಂಗಳಲ್ಲಿ ಮಾಯವಾಗುವ ತ್ವಚೆಯ ಕಪ್ಪು ಕಲೆ ಅಂದರೆ ಈ ಗುರುತುಗಳಿಗೆ   ತಮ್ಮದೇ ಆದ ವ್ಯಾಖ್ಯಾನ ಮತ್ತು ಅರ್ಥಗಳಿವೆ. ಇವುಗಳು ಸಾಮಾನ್ಯವಾಗಿ ಸಹಜ ವರ್ಣಕ್ಕೂ ಕೊಂಚ  ಗಾಢವಾಗಿ, ತಿಳಿಯಾಗಿ ಗುಲಾಬಿ ಅಥವಾ ಗಾಡ ನೀಲಿ ಬಣ್ಣ ಬೆರೆಸಿದಂತೆ ಇರುತ್ತದೆ.

 

ಇವುಗಳ ನಿಜವಾದ ಅರ್ಥವೇನು ? ವ್ಯಕ್ತಿತ್ವದ ಬಗ್ಗೆ ಇದೇನು ಹೇಳುತ್ತದೆ ?ನೊಡೋಣ ಬನ್ನಿ

 

ಬೆನ್ನಿನಲ್ಲಿರುವ ಗುರುತುಗಳು.

 

 

ಯಾವಾಗ ಬೆನ್ನಿನ ಮೇಲ್ಭಾಗದಲ್ಲಿ ಗುರುತುಗಳು ಮೂಡಲು ಪ್ರಾರಂಭವಾಯಿತು, ಆಗ ಆ ವ್ಯಕ್ತಿಗೆ ಭಾವನಾತ್ಮಕ ನೆರವು ದೊರಕುವುದು  ಕಡಿಮೆಯಾಗುತ್ತದೆ.

ಬೆನ್ನಿನ ಮಧ್ಯಭಾಗದಲ್ಲಿ ಇದ್ದರೆ ಈ ವ್ಯಕ್ತಿ ಮಾಡುವ ಒಂದು ತಪ್ಪಿನಿಂದಾಗಿ ಇಡೀ ಜೀವಮಾನ ಕೊರಗುವಂತಾಗುತ್ತದೆ.

ಕೆಳ ಬೆನ್ನಿನ ಮೇಲೆ ಮೂಡಿರುವ ಗುರುತುಗಳು ಅತಿ ಹೆಚ್ಚಿನ ಒತ್ತಡದ ಜೀವನ ಮತ್ತು ಅನಿಶ್ಚಿತತೆಯನ್ನು ತೋರುತ್ತದೆ.

 

ಕುತ್ತಿಗೆಯ ಮುಂಭಾಗದ  ಗುರುತುಗಳು.

 

 

ಕುತ್ತಿಗೆಗೆ ಸರ ಹಾಕಿದಾಗ ಪೆಂಡೆಂಟ್ ತಾಗುವ ಗುರುತುಗಳು ಥೈರಾಡ್ ಅಥವಾ ಹಾರ್ಮೋನುಗಳ ತೊಂದರೆಯ ಪರಿಣಾಮಗಳಾಗಿವೆ. ಇವು ವ್ಯಕ್ತಿತ್ವದ  ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ.

 

ಕುತ್ತಿಗೆಯ ಹಿಂಭಾಗದಲ್ಲಿ ಗುರುತುಗಳು.

 

 

ಈ ಭಾಗದಲ್ಲಿ ಗುರುತಿರುವ ವ್ಯಕ್ತಿಗಳು ಹಿಂದು ಮುಂದು ನೋಡದೆ ನುಗ್ಗುವ ಮತ್ತು ತಕ್ಷಣವೇ ನಿರ್ಧಾರವನ್ನು ತೆಗೆದುಕೊಳ್ಳುವ ವ್ಯಕ್ತಿಗಳಾಗಿದ್ದಾರೆ. ಇದರಿಂದ ಈ ವ್ಯಕ್ತಿಗಳು  ಅಥವಾ ಇವರ ಆಪ್ತರು ಮತ್ತು ಒಡನಾಟದಲ್ಲಿರುವವರು ಬಾರಿ  ತೊಂದರೆಯನ್ನು ಎದುರಿಸುವಂತಾಗುತ್ತದೆ.

 

ಹೊಟ್ಟೆಯ ಮೇಲಿನ ಗುರುತುಗಳು.

 

 

ಈ  ಗುರುತುಗಳು ವ್ಯಕ್ತಿತ್ವದ ಬಗ್ಗೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಆದರೆ ಈ ಗುರುತುಗಳು ಮಹಿಳೆಯರಲ್ಲಿ  ಗರ್ಭ ಕೋಶದ ತೊಂದರೆಯ ಗುರುತುಗಳು ಆಗಿರಬಹುದು. ತಕ್ಷಣವೇ ವೈದ್ಯರಲ್ಲಿ ತಪಾಸಣೆಗೊಳಗಾದ ಅಗತ್ಯ.

 

ತೊಡೆಯ ಮೇಲಿನ ಗುರುತುಗಳು.

 

 

ಈ ಭಾಗದಲ್ಲಿ ಗುರುತು ಇರುವ ವ್ಯಕ್ತಿಗಳು ಮಹತ್ವಾಕಾಂಕ್ಷಿಗಳಾಗಿದ್ದು, ಶ್ರಮಜೀವಿಗಳು ಆಗಿರುತ್ತಾರೆ. ಆದರೆ ಕೆಲವೊಮ್ಮೆ ಇವರು ಯೋಚಿಸಿದಂತೆ ಆಗದೇ ಹೋದರೆ ಇವರು ಭಾವನಾತ್ಮಕವಾಗಿ ಖಿನ್ನರಾಗುತ್ತಾರೆ.

 

ಮೊಣಕಾಲಿನ ಹಿಂಭಾಗದ ಗುರುತುಗಳು.

 

 

ಮೊಣಕಾಲಿನ  ಹಿಂಭಾಗ ಅಂದರೆ ಮಡಚಿದಾಗ ಮರೆಯಾಗುವ ಭಾಗದಲ್ಲಿರುವ ಗುರುತುಗಳಿರುವ ವ್ಯಕ್ತಿಗಳ ಜೀವನದಲ್ಲಿ ತುಂಬಾ ಕಷ್ಟವಿದ್ದು, ಸದಾ ಒತ್ತಡದಲ್ಲಿಯೇ ಇರುತ್ತಾರೆ. ಇವರು ಸಾಮಾನ್ಯವಾಗಿ ಸುಲಭವಾಗಿ ರೋಗಕ್ಕೆ ತುತ್ತಾಗುತ್ತಾರೆ. ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ಇವರ ಪ್ರಾಮುಖ್ಯತೆಯಾಗಬೇಕು.

 

ಕಣ್ಣಿನ ಕೆಳಭಾಗದ ಗುರುತುಗಳು.

 

 

ಈ ಗುರುತುಗಳು ಖಿನ್ನತೆಯ ಸ್ಪಷ್ಟ ಸಂಕೇತವಾಗಿದೆ.ಇವು ಆತ್ಮ ವಿಶ್ವಾಸದ ಕೊರತೆ ಮತ್ತು ಏಕಾಂಗಿ ಜೀವನವನ್ನು ಪ್ರಕಟಿಸುತ್ತದೆ. ಈ ವ್ಯಕ್ತಿಗಳಿಗೆ ಮದುವೆಯ ಭಾಗ್ಯ ತುಂಬಾ ತಡವಾಗಿ ಆಗುತ್ತದೆ. ಇವರು ಸಂಗಾತಿಯಲ್ಲಿ  ಭಿನ್ನಾಭಿಪ್ರಾಯ ಹೊಂದಿದ್ದು ಮನೆಯವರೊಂದಿಗೆ ಆಗಾಗ ಜಗಳ ಕಾಯುತ್ತಿರುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top