ಭವಿಷ್ಯ

ವಾರ ಭವಿಷ್ಯ ಮಾರ್ಚ್ 12 ನೇ ತಾರೀಖಿನಿಂದ ಮಾರ್ಚ್ 18ನೇ ತಾರೀಖಿನವರೆಗೆ.

ಮೇಷ (Mesha)

 

 

 

ಈ ವಾರ ವ್ಯಾಪಾರದಲ್ಲಿ ಅಧಿಕ ಲಾಭ, ಮಿತ್ರರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಶರೀರದಲ್ಲಿ ಆಲಸ್ಯ, ವಾಹನ ರಿಪೇರಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉನ್ನತ ಸ್ಥಾನ ಮಾನ ಲಭ್ಯವಾಗಲಿದೆ.

ಪರಿಹಾರ.

ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ, ಬುಧವಾರ ವಿಷ್ಣು ದೇವಾಲಯಕ್ಕೆ ಭೇಟಿ ನೀಡಿ ,ನಾಟಿ ತುಳಸಿಯಿಂದ ಅರ್ಚನೆಯನ್ನು ಮಾಡಿ ದ್ವಾದಶ ಅಂದರೆ 12 ಪ್ರದಕ್ಷಿಣಾ  ನಮಸ್ಕಾರಗಳನ್ನು ಮಾಡಿ.

 

ವೃಷಭ (Vrushabha)

 

ಉದ್ಯೋಗದಲ್ಲಿ ಬಡ್ತಿ, ಪ್ರತಿಯೊಂದು ವಿಷಯದಲ್ಲಿಯೂ ಎಚ್ಚರವನ್ನು ವಹಿಸಬೇಕು ಇಲ್ಲ ಅಂದರೆ ಆಪತ್ತು ಕಟ್ಟಿಟ್ಟ  ಬುತ್ತಿ, ಶತ್ರುಗಳ ಬಾಧೆ ಹೆಚ್ಚಾಗುವುದು, ವಿಪರೀತ ಖರ್ಚು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಾಗಲಿದೆ, ಸಂಗಾತಿಯ ಸಲಹೆಯನ್ನು ತಿರಸ್ಕರಿಸಬೇಡಿ ಆ ಸಲಹೆಯಿಂದಲೇ ಅನುಕೂಲವಾಗುತ್ತದೆ.

ಪರಿಹಾರ.

ಕುಲ ದೇವರಿಗೆ ಪ್ರತಿನಿತ್ಯ ತುಪ್ಪದ ದೀಪವನ್ನು ಹಚ್ಚಿ ತಂದೆ ತಾಯಿಗಳಿಗೆ ನಮಸ್ಕರಿಸಿ  ಆಶೀರ್ವಾದವನ್ನು ಪಡೆಯಿರಿ.

 

ಮಿಥುನ (Mithuna)

 

 

ಆತ್ಮವಿಶ್ವಾಸ ಅತಿಯಾದರೆ ನಷ್ಟವಾಗುವ ಸಂಭವ ಹೆಚ್ಚು, ಉದ್ಯೋಗದಲ್ಲಿ ಬದಲಾವಣೆ ಕಂಡುಬರುತ್ತದೆ, ಸಾರ್ವಜನಿಕ ಕ್ಷೇತ್ರಗಳಲ್ಲಿ ಮನ್ನಣೆ ದೊರೆಯಲಿದೆ, ವಾರದ ಮದ್ಯ ಭಾಗದಲ್ಲಿ ಯತ್ನ ಕಾರ್ಯಗಳಲ್ಲಿ ಲಾಭ ಸಿಗಲಿದೆ, ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನವನ್ನು ಕೊಡುವ ಕೆಲಸವನ್ನು ಮಾಡಿ.

ಪರಿಹಾರ.

ಪ್ರತಿದಿನ “ಓಂ ಗಣೇಶಾಯ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಿ ,ಮಂಗಳವಾರ ಗರಿಕೆಯಿಂದ ಅರ್ಚನೆಯನ್ನು ಮಾಡಿ ನಮಸ್ಕಾರ ಮಾಡಿ.

 

ಕರ್ಕ (Karka)

 

 

ಮಾನಸಿಕ ವೇದನೆ ಹೆಚ್ಚಾಗಲಿದೆ,ಪರರಿಗೆ ಸಹಾಯ ಮಾಡಲಿದ್ದೀರಿ, ತೀರ್ಥ ಯಾತ್ರೆಯ ದರ್ಶನ ಮಾಡುವ ಶುಭಯೋಗ, ಸುಖ ಭೋಜನ ಪ್ರಾಪ್ತಿ, ಯಾರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಿರೋ  ಅಂತವರಿಗೆ ಕೃಷಿಯಲ್ಲಿ  ಲಾಭಗಳು ಹೆಚ್ಚಾಗುವವು,ಪ್ರಿಯ ಜನರ ಭೇಟಿಯನ್ನು ಮಾಡುತ್ತೀರ,ಭೂ ಲಾಭ, ಕಾರ್ಯ ಕ್ಷೇತ್ರದಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ.

ಪರಿಹಾರ.

“ಓಂ ನಮಃ ಶಿವಾಯ” ಎಂಬ ಶಿವ ಪಂಚಾಕ್ಷರಿ ಮಂತ್ರವನ್ನು 108 ಬಾರಿ ಜಪಿಸಿ ಸೋಮವಾರ ಶಿವಾಲಯಕ್ಕೆ ಭೇಟಿ ನೀಡಿ,ಬಿಲ್ವಾರ್ಚನೆಯನ್ನು ಮಾಡಿಸಿ.

 

ಸಿಂಹ (Simha)

ಪರಸ್ತ್ರೀಯರಿಂದ ತೊಂದರೆಗೆ ಒಳಗಾಗುವ ಪರಿಸ್ಥಿತಿ ಎದುರಾಗಲಿದೆ, ದೇವತಾ ಕಾರ್ಯಗಳಲ್ಲಿ ಒಲವು, ಮಹಿಳೆಯರಲ್ಲಿ ತಾಳ್ಮೆ ಅಗತ್ಯ, ಆಗ್ನಿಯಿಂದ ಭಯ, ಸ್ವಲ್ಪ ಎಚ್ಚರಿಕೆಯಿಂದ ಇರಿ, ಚಂಚಲ ಮನಸ್ಸು, ಮನಸ್ಸನ್ನು ಏಕಾಗ್ರತೆಗೆ ತರುವ ಕೆಲಸವನ್ನು ಮಾಡಿ ,ಈ ವಾರ ಸುಳ್ಳನ್ನು ಹೆಚ್ಚಾಗಿ ಹೇಳಬೇಕಾಗಿ ಬರಬಹುದು, ಅದರೆ ಹೆಚ್ಚು ಸುಳ್ಳನ್ನು ಹೇಳಬೇಡಿ, ಅದರಿಂದ ಸಮಸ್ಯೆಗಳು ಹೆಚ್ಚಾಗಲಿವೆ,ಆನಾರೋಗ್ಯ ಕಾಡಲಿದೆ ಆದ್ದರಿಂದ ಆರೋಗ್ಯದ ಕಡೆಗೆ ಗಮನವನ್ನು ಹರಿಸಿ.ಆಧಿಕ ತಿರುಗಾಟ ಮಾಡಲಿದ್ದೀರಿ.

ಪರಿಹಾರ.

ಪ್ರತಿನಿತ್ಯ “ಓಂ ಸುದರ್ಶನಾಯ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಿ ,ಕಣ್ಣು ಕಾಣಿಸದೇ ಇರುವ ಅಂಧ ಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.

 

ಕನ್ಯಾರಾಶಿ (Kanya)

ಸರ್ಕಾರಿ ಹಾಗೂ ನ್ಯಾಯಾಲಯದ ಕಾರ್ಯಗಳಲ್ಲಿ ವಿಳಂಭವಾಗಲಿವೆ,ಸ್ಥಿರಾಸ್ತಿ ಮಾರಾಟ, ಓಳ್ಳೆಯವರು ಸಹವಾಸದಿಂದ ಯಶಸ್ಸು ಸಿಗಲಿದೆ, ಋಣ ವಿಮೋಚನೆಯಾಗುವುದು, ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ, ದ್ರವ್ಯ ಲಾಭ

ಪರಿಹಾರ.

ಪ್ರತಿನಿತ್ಯ 18 ಬಾರಿ ಅಶ್ವಥ ವೃಕ್ಷ ಪ್ರದಕ್ಷಿಣೆಯನ್ನು ಮಾಡಿ, ಆಶ್ವಥ ಮರಕ್ಕೆ ನೀರನ್ನು ಹಾಕುವ ಕೆಲಸವನ್ನು ಮಾಡಿ.

 

ತುಲಾ (Tula)

ಅಲಂಕಾರಿಕ ವಸ್ತುಗಳಿಗೆ ಹೆಚ್ಚು ಹಣವನ್ನು ಖರ್ಚು ಮಾಡಲಿದ್ದೀರಿ, ವೃಥಾ ಧನವ್ಯಯ, ಕೋಪ ಜಾಸ್ತಿಯಾಗತ್ತೆ,ಮಾತಿನ ಮೇಲೆ ಹಿಡಿತವಿರಲಿ, ಕೆಲಸದಲ್ಲಿ ಪರಿಶ್ರಮ ಹೆಚ್ಚಾಗಲಿದೆ, ಕಾರ್ಯ ವೈಖರಿಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಈ ವಾರ ಕಾಣಲಿದ್ದೀರಿ, ಆಪ್ತರಿಂದ ಸಹಾಯವನ್ನು ಪಡೆಯುತ್ತೀರ, ಸಾಲ ಮರುಪಾವತಿ ಮಾಡಲಿದ್ದೀರಿ.

ಪರಿಹಾರ.

ಪ್ರತಿದಿನ ಹನುಮಾನ್ ಚಾಲೀಸ ಪಾರಾಯಣ ಮಾಡಿ , ಮಂಗಳವಾರ 108 ವೀಳ್ಯದೆಲೆಯ ಹಾರವನ್ನು ಹನುಮಂತನ ದೇವಾಲಯದಲ್ಲಿ ಅರ್ಪಿಸಿ ನಮಸ್ಕಾರ ಮಾಡಿ.

 

ವೃಶ್ಚಿಕ (Vrushchika)

 

ನಾನಾ ರೀತಿಯ ಸಮಸ್ಯೆಗಳು ಎದುರಾಗಲಿವೆ,  ಯತ್ನ ಕಾರ್ಯದಲ್ಲಿ ಭಂಗ, ನಂಬಿಕಸ್ಥರಿಂದ  ಮೋಸ ಹೋಗುವ ಸಂಭವ ಹೆಚ್ಚು, ಪುತ್ರರ ಮೇಲೆ  ದ್ವೇಷ ಹೆಚ್ಚಾಗಲಿದೆ, ಅಕಾಲ ಭೋಜನ, ಆನಾರೋಗ್ಯ ಕಾಡಲಿದೆ, ವಿರೋಧಿಗಳ ಹೆಚ್ಚು ಕುತಂತ್ರಕ್ಕೆ ಒಳಗಾಗಬೇಕಾಗುತ್ತದೆ.

ಪರಿಹಾರ.

ಪ್ರತಿನಿತ್ಯ ಗೋ ಪೂಜೆಯನ್ನು ಮಾಡಿ ಹಸು ಮತ್ತು ಕರುವಿಗೆ  ಬೆಲ್ಲ ಮತ್ತು ಬಾಳೆ ಹಣ್ಣನ್ನು ತಿನ್ನಿಸಿ ನಮಸ್ಕಾರ ಮಾಡಿ.

 

ಧನು ರಾಶಿ (Dhanu)

 

ಗುರಿಯನ್ನು ಸಾಧಿಸಲು ಬಹಳಷ್ಟು ಪರಿಶ್ರಮ ಪಡಬೇಕಾಗುತ್ತದೆ, ಸ್ತ್ರೀಯರಿಗೆ ಲಾಭ, ರಾಜ ಸನ್ಮಾನ ಸಿಗುವ ವಾರವಾಗಲಿದೆ, ಉತ್ತಮವಾದ ಫಲಗಳು ಈ ವಾರ ಹೆಚ್ಚಾಗಿ ಲಭಿಸಲಿದೆ, ಪ್ರಭಾವಿ ವ್ಯಕ್ತಿಗಳ ಭೇಟಿ, ಹೊಸ ವ್ಯವಹಾರಗಳಲ್ಲಿ ಆಸಕ್ತಿ, ಮಕ್ಕಳ  ಅಗತ್ಯಕ್ಕೆ ಹೆಚ್ಚು  ಖರ್ಚು ಮಾಡಲಿದ್ದೀರಿ.

ಪರಿಹಾರ.

ಪ್ರತಿನಿತ್ಯ “ಓಂ ಸುಬ್ರಹ್ಮಣ್ಯಯ ನಮಃ”ಈ ಮಂತ್ರವನ್ನು 54 ಬಾರಿ ಜಪಿಸಿ ಮಂಗಳವಾರ ಸುಬ್ರಹ್ಮಣ್ಯನಿಗೆ ಬಸ್ಮಾರ್ಚನೆಯನ್ನು ಮಾಡಿಸಿ.

 

ಮಕರ (Makara)

 

ರಪ್ತು ಮಾರಾಟಗಾರರಿಗೆ ಬಹಳಷ್ಟು ಲಾಭವಾಗಲಿದೆ, ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ,ಬದುಕಿಗೆ ಉತ್ತಮ ತಿರುವು,ಮನಃ ಶಾಂತಿ, ಮಕ್ಕಳ ಸಾಧನೆಗೆ ಅನುಕೂಲ,ಆವಿವಾಹಿತರಿಗೆ  ವಿವಾಹ ಯೋಗ, ಯತ್ನ ಕಾರ್ಯಗಳು ನಿರ್ವಿಘ್ನವಾಗಿ  ನೆರವೇರುತ್ತವೆ.

ಪರಿಹಾರ.

ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಮಾಡಿ, ಪಕ್ಷಿಗಳಿಗೆ ನೀರನ್ನು ಕುಡಿಯಲು ಇಡಿ.

 

ಕುಂಭರಾಶಿ (Kumbha)

 

ದಿನ ಬಳಕೆ ವಸ್ತುಗಳಿಂದ  ಲಾಭ, ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಶುಭಯೋಗ, ನಂಬಿಕಸ್ಥರಿಂದ ದ್ರೋಹ, ಬಣ್ಣ  ಬಣ್ಣದ ಮಾತಿಗೆ ಮರುಳಾಗಬೇಡಿ,ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗಲಿದೆ,ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಲಾಭ.

ಪರಿಹಾರ.

ಪ್ರತಿನಿತ್ಯ “ಓಂ ನಂದೀಶ್ವರಾಯ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಿ ಅನ್ನ ಆಕಾಂಕ್ಷೆಯುಳ್ಳ ಬಡ ಮಕ್ಕಳಿಗೆ ಅನ್ನ ದಾನ ಮಾಡಿ.

 

ಮೀನರಾಶಿ (Meena)

 

ಅತಿಯಾದ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾಗಿದೆ, ಕೆಲಸದಲ್ಲಿ ಪ್ರಗತಿ,ದುಷ್ಟರಿಂದ ದೂರವಿರಿ,ಕೋರ್ಟ್ ಕೆಲಸಗಳಲ್ಲಿ ವಿಳಂಭ, ಮೇಲಧಿಕಾರಿಗಳಿಂದ ತೊಂದರೆ, ಪಿತ್ರಾರ್ಜಿತ ಆಸ್ತಿ ಗಳಿಕೆ,ಆತಿಯಾದ ಕೋಪ ಮಾಡಿಕೊಳ್ಳುವಿರಿ,ಶಾಂತ ರೀತಿಯಿಂದ ವರ್ತಿಸಿ.

ಪರಿಹಾರ.

ಮಂಗಳವಾರ ವಟು ಬ್ರಾಹ್ಮಣರಿಗೆ ಸ್ವಯಂ ಪಾಕವನ್ನು ದಾನ ನೀಡಿ, ಆಶೀರ್ವಾದವನ್ನು ಪಡೆಯಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top