ಭವಿಷ್ಯ

12 ರಾಶಿಗಳವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಯಾವ ಚಟ ಜಾಸ್ತಿ ಇರುತ್ತೆ ಗೊತ್ತಾ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರಿಗೆ ಯಾವ ಚಟ ಜಾಸ್ತಿ ? ಎಂದು ನಿಮಗೆ ಗೊತ್ತೇ ?

 

 

ಪ್ರತಿಯೊಬ್ಬರಿಗೂ ಒಂದೊಂದು ವಿಷಯದಲ್ಲಿ ಆಸಕ್ತಿ ಇರುತ್ತದೆ. ಇನ್ನು ಆಸಕ್ತಿಗಿಂತ ಹೆಚ್ಚಾಗಿ ಬರೀ ಅದೇ ಯೋಚನೆ ಮಾಡುತ್ತಿದ್ದರೆ ಅದನ್ನು ಚಟ ಎನ್ನುತ್ತಾರೆ. ಹಾಗಾದರೆ ಈ ಕೆಲವು ರಾಶಿಗಳಿಗೆ ಕೆಲವು ಚಟಗಳಿರುತ್ತವೆಯಂತೆ. ಚಟ ಎಂದರೆ ಬರೀ ಕುಡಿಯುವುದು ತಿನ್ನುವುದು ಅಲ್ಲ ಇದರ ಜೊತೆಗೆ ಬೇರೆ ರೀತಿಯ ಚಟಗಳು ಸಹ ಇರುತ್ತವೆ . ಹಾಗಾದರೆ ಯಾವ ರಾಶಿಯ ಮಹಿಳೆಯರಿಗೆ ಯಾವ ಚಟ ಇರುತ್ತದೆ ನೋಡಿ.

 

ಮೇಷ (Mesha)

 

ಮೇಷ ರಾಶಿಯ ಮಹಿಳೆಯರಿಗೆ ದ್ರವ ರೀತಿಯ ಪದಾರ್ಥಗಳನ್ನು ಸೇವನೆ ಮಾಡುವ ಚಟ ಇರುತ್ತದೆಯಂತೆ ಹಾಗೂ ಅವರು ಯಾವಾಗಲೂ ಅದರ ಬಗ್ಗೆ ಆಲೋಚಿಸುತ್ತಾರೆ.

 

ವೃಷಭ (Vrushabha)

ಇವರಿಗೆ ಯಾವಾಗಲೂ ತಿಂಡಿಗಳ ಮೇಲೆ ಆಸಕ್ತಿ ಇರುತ್ತದೆಯಂತೆ. ಹಾಗೂ ಸಂಜೆಯಾದರೆ ಸಾಕು ಈ ರೀತಿಯ ಅಂಗಡಿಗಳಲ್ಲಿಯೇ ಇರುತ್ತಾರಂತೆ ಹಾಗಾಗಿ ಇವರು ಸ್ವಲ್ಪ ದಪ್ಪ ಇರುತ್ತಾರಂತೆ.

 

ಮಿಥುನ (Mithuna)

 

ಮಿಥುನ ರಾಶಿಯವರಿಗೆ ಯಾವಾಗಲೂ ಕೂಡ ಓದುವುದರ ಬಗ್ಗೆ ಆಸಕ್ತಿ ಇರುತ್ತದೆಯಂತೆ. ಹಾಗೂ ಯಾವುದಾದರೂ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಅವರಿಗೆ ಆಸಕ್ತಿ ಹೊಂದಿರುತ್ತಾರೆ.

 

ಕರ್ಕ (Karka)

ಇವರಿಗೆ ಯಾರಾದರೂ ಏನಾದರೂ ಹೇಳಿದರೆ ಅದರ ಬಗ್ಗೆಯೇ ಯೋಚಿಸುತ್ತಾ ಇರುತ್ತಾರಂತೆ. ಹಾಗೂ ಪ್ರತಿ ಚಿಕ್ಕ ವಿಷಯಗಳಿಗೂ ತುಂಬಾ ಯೋಚಿಸಿ ಮನಸ್ಸಿನ ನೆಮ್ಮದಿ ಕೆಡಿಸಿಕೊಳ್ಳುತ್ತಾರಂತೆ .

 

ಸಿಂಹ (Simha)

 

ಇವರು ಯಾವಾಗಲೂ ನಾನೇ ಹೆಚ್ಚು ನಾನು ಮಾಡೋದೆಲ್ಲಾ ಸರಿ ಎಂದು ಗರ್ವ ಪಡುತ್ತಾರಂತೆ. ಹಾಗೂ ಅವರು ಯಾರ ಮಾತನ್ನು ಕೂಡ ಕೇಳುವಂತಹ ಸ್ಥಿತಿಯಲ್ಲಿ ಇರುವುದಿಲ್ಲವಂತೆ.

 

ಕನ್ಯಾರಾಶಿ (Kanya)

 

ಕನ್ಯಾ ರಾಶಿಯವರಿಗೆ ಎಲ್ಲವೂ ಶುಭ್ರವಾಗಿ ಇರಬೇಕು. ಬಯಕೆಯಂತೆ ಏನನ್ನಾದರೂ ನೋಡಿದಾಗ, ಅದು ಸ್ವಚ್ಛತೆಯಾಗಿರಲಿಲ್ಲ ಎಂದರೆ ಕೋಪ ಬರುತ್ತದೆಯಂತೆ ಹಾಗೂ ಅವರು ಅದು ಸರಿಯಾಗುವವರೆಗೆ ನೆಮ್ಮದಿಯಾಗಿ ಇರುವುದಿಲ್ಲವಂತೆ.

 

ತುಲಾ (Tula)

 

ತುಲಾ ರಾಶಿಯ ಮಹಿಳೆಯರಿಗೆ ವಸ್ತುಗಳನ್ನು ಕೊಂಡುಕೊಳ್ಳುವ ಹುಚ್ಚು ಹೆಚ್ಚಿರುತ್ತದೆಯಂತೆ. ಇವರು ಯಾವಾಗಲೂ ಇಂದು ಏನು ಶಾಪಿಂಗ್ ಮಾಡಲಿ ಎಂದು ಯೋಚಿಸುತ್ತಾರೆ. ಇವರನ್ನು ಮದುವೆಯಾದವರು ದುಡಿದ ಹಣವನ್ನೆಲ್ಲ ಖರೀದಿಸಲು ಮತ್ತು ಶಾಪಿಂಗ್ ಮಾಡಲು ಖರ್ಚು ಮಾಡಬೇಕಾಗುತ್ತದೆ.

 

ವೃಶ್ಚಿಕ (Vrushchika)

 

ಲೈಂಗಿಕ ಸುಖ ಅನುಭವಿಸುವ ಚಟ ಇರುವ ಏಕೈಕ ರಾಶಿ ಎಂದರೆ ಅದೇ ವೃಶ್ಚಿಕ ರಾಶಿಯವರು ಇವರು ತುಂಬಾ ರೊಮ್ಯಾಂಟಿಕ್ ಆಗಿದ್ದು ಶೃಂಗಾರದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಹಾಗೂ ಇವರನ್ನು ಮದುವೆಯಾದರೆ ಲೈಂಗಿಕ ಸುಖ ಹೆಚ್ಚು ಎಂದು ಹೇಳುತ್ತಾರೆ .

 

ಧನು ರಾಶಿ (Dhanu)

 

ಧನಸ್ಸು ರಾಶಿಯ ಮಹಿಳೆಯರು ಹುಡುಗರಿಗಿಂತ ಹೆಚ್ಚು ತಮ್ಮನ್ನು ತಾವು ಸುಖವಾಗಿ ಇಟ್ಟುಕೊಳ್ಳುವುದರ ಮೇಲೆ ಆಸಕ್ತಿ ಬೆಳೆಸಿಕೊಂಡಿರುತ್ತಾರೆ ಎಂದು ಹೇಳಲಾಗುತ್ತದೆ. ಚಿಕ್ಕ ವಿಷಯಕ್ಕೆ ಸವಾಲು ಹಾಕುತ್ತಾರಂತೆ.

 

ಮಕರ (Makara)

 

ಇವರು ಯಾವಾಗಲೂ ಕೆಲಸ ಎಂದು ಯೋಚಿಸುತ್ತಾರಂತೆ ದಿನದ ಇಪ್ಪತ್ತನಾಲ್ಕು ಗಂಟೆ ಬೇಕಾದರೂ ಕೆಲಸ ಮಾಡುತ್ತಲೇ ಇರುತ್ತಾರಂತೆ. ಹಾಗೂ ಇವರಿಗೆ ಏನಾದರೂ ಕೆಲಸ ಇಲ್ಲ ಎಂದರೆ ಹುಚ್ಚು ಹಿಡಿದ ಹಾಗೆ ಆಗುತ್ತದೆಯಂತೆ.

 

ಕುಂಭರಾಶಿ (Kumbha)

 

ಕುಂಭ ರಾಶಿಯವರಿಗೆ ಜನರ ಜೊತೆ ಸೇರಿ ಸಮಾರಂಭಗಳು ಮಾಡುವ ಹುಚ್ಚು ಹೆಚ್ಚಿರುತ್ತದೆಯಂತೆ. ಹಾಗೂ ಇತರರ ಮೇಲೆ ಹೆಚ್ಚು ಖರ್ಚು ಮಾಡುವ ಗುಣ ಹೊಂದಿರುತ್ತಾರೆ

 

ಮೀನರಾಶಿ (Meena)

 

ಮೀನ ರಾಶಿಯವರಿಗೆ ಪ್ರತಿಯೊಂದು ವಿಷಯಕ್ಕೂ ಭಯ ಆಗುತ್ತದೆಯಂತೆ. ಭಯದಿಂದ ತಮ್ಮ ಅಮೂಲ್ಯ ಸಮಯವನ್ನೆಲ್ಲ ವ್ಯರ್ಥ ಮಾಡಿಕೊಳ್ಳುತ್ತಾರಂತೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top