ಸಮಾಚಾರ

ಇಂದಿನಿಂದ ಅಂಗಡಿಗಳ ಬೋರ್ಡ್ ನಲ್ಲಿ 60% ಕನ್ನಡ ಇರದಿದ್ದರೆ ಕಾದಿದೆ ಗಂಡಾಂತರ: ಸ್ಥಳದಲ್ಲಿಯೇ ಲೈಸೆನ್ಸ್ ಕ್ಯಾನ್ಸಲ್ ಮಾಡಲು ಆದೇಶ.

ಅಂಗಡಿ ಮತ್ತಿತರ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಬಳಸುವುದನ್ನು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದ್ರೆ ಈ ನಿಯಮವನ್ನು ಬಹುತೇಕ ಅಂಗಡಿಗಳ ಮಾಲೀಕರು ಪಾಲಿಸುತ್ತಿರಲಿಲ್ಲ. ಈಗ ವ್ಯಾಪಾರ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಸರಕಾರ ಪುನಃ ಕಟ್ಟುನಿಟ್ಟಾದ ಆದೇಶ ಹೊರಡಿಸಿದೆ..

 

 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚುರುಕು ಮುಟ್ಟಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಬಿಎಂಪಿ, ನಗರದ ಎಲ್ಲ ಅಂಗಡಿಮುಂಗಟ್ಟು, ಶಾಪಿಂಗ್ ಮಾಲ್ ಗಳು, ನಾಮಫಲಕ ಕನ್ನಡದಲ್ಲಿ ಬರೆಸಲು ಆದೇಶ ಹೊರಡಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಅವರು, ಆಡಳಿತದಲ್ಲಿ ಕನ್ನಡ ಸಂಪೂರ್ಣ ಅನುಷ್ಠಾನಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಬಿಬಿಎಂಪಿ ಆಯುಕ್ತರಾದ ಏನ್.ಮಂಜುನಾಥ್ ಪ್ರಸಾದ್ ರವರು ‘ನಗರದ ಎಲ್ಲ ಅಂಗಡಿ, ಶಾಪಿಂಗ್‌ ಮಾಲ್‌, ವಾಣಿಜ್ಯ ಕಟ್ಟಡಗಳು ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕವನ್ನು ಅಳವಡಿಸಬೇಕು. ನಾಮಫಲಕದಲ್ಲಿ ಶೇ 60%ರಷ್ಟು ಕನ್ನಡಕ್ಕೆ ಆದ್ಯತೆ ಇರಬೇಕು. ಶೇ 40%ರಷ್ಟು ಅನ್ಯ ಭಾಷೆ ಬಳಸಬಹುದು. ಆದೇಶ ಪಾಲಿಸದಿದ್ದರೆ ಯಾವುದೇ ಮುಲಾಜಿಲ್ಲದೆ ತಕ್ಷಣ ಆ ಅಂಗಡಿಯ ವಾಣಿಜ್ಯ ಪರವಾನಗಿ ರದ್ದುಪಡಿಸಲಾಗುತ್ತದೆ.’ ಎಂದು ನವೆಂಬರ್ ನಲ್ಲಿಯೇ ತಿಳಿಸಿದ್ದರು.

 

 

ಸರ್ಕಾರ ಆದೇಶ ಹೊರಡಿಸಿದ್ದರೂ ಕಿವಿಗೆ ಹಾಕಿಕೊಳ್ಳದ ಅಂಗಡಿ ಮುಂಗಟ್ಟುಗಳ ಮಾಲೀಕರುಗಳು ನಾಮಫಲಕಗಳನ್ನು ಕನ್ನಡೀಕರಣ ಮಾಡುವ ಮನಸ್ಸು ಮಾಡಿರಲಿಲ್ಲ. ಅಂಗಡಿ ಮಾಲೀಕರ ಅಸಡ್ಡೆ ವರ್ತನೆಯಿಂದ ಕಣ್ಣು ಕೆಂಪಗೆ ಮಾಡಿಕೊಂಡಿರುವ ಬಿಬಿಎಂಪಿ ಈ ಭಾರಿ ತುಂಬಾ ಸ್ಟ್ರಿಕ್ಟ್ ಆಗಿ ಹೇಳಿದ್ದಾರೆ. “ಮುಂದಿನ ವಾರ ಸ್ವತಃ ನಾವೇ ಬೆಂಗಳೂರಿನ ಕೆಲವು ಸ್ಥಳಗಳಿಗೆ ಭೇಟಿ ನೀಡಿ ವಾಣಿಜ್ಯ ಮಳಿಗೆಗಳ ನಾಮಫಲಕಗಳು ಕನ್ನಡಕ್ಕೆ ಬದಲಾಗಿಯೇ ಇಲ್ಲವೇ ಎಂದು ಪರಿಶೀಲಿಸುತ್ತೇವೆ.. ಒಂದು ವೇಳೆ ಬೋರ್ಡ್ ಗಳಲ್ಲಿ ಕನಿಷ್ಠ 60% ಕನ್ನಡ ಇರದಿದ್ದರೆ ಸ್ಥಳದಲ್ಲಿಯೇ ಅವರ ಪರವಾನಗಿ ರದ್ದು ಮಾಡುವ ಹಾಗೆ ಕಠಿಣ ಕ್ರಮವನ್ನು ಕೈಗೊಳ್ಳುತ್ತೇವೆ” ಬಿಬಿಎಂಪಿ ಆಯುಕ್ತರಾದ ಏನ್.ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top