ಹೆಚ್ಚಿನ

ಸಾವಿರಾರು ಅಳಿದುಳಿದ ಡ್ರಿಂಕ್ಸ್ ಬಾಟಲಿಯಿಂದ ಗೌರಿ ಖಾನ್ ಮಾಡಿದ್ರು ಕರಾಮತ್ತು

ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್‌ ಪತ್ನಿ ಗೌರಿ ಖಾನ್ ಇಂಟೀರಿಯರ್ ಡಿಸೈನರ್ ಆಗಿರುವುದು ಎಲ್ಲರಿಗು ತಿಳಿದಿರುವ ವಿಚಾರ. ಇವರು ಮುಂಬೈನಲ್ಲಿ ತಮ್ಮದೇ ಡಿಸೈನ್ ಸ್ಟುಡಿಯೊ ತೆರೆದಿದ್ದಾರೆ. ಗೌರಿ ಖಾನ್ ಅನೇಕ ಬಾಲಿವುಡ್ ಮಂದಿಯ ಮನೆಯ ಒಳಾಂಗಣ ವಿನ್ಯಾಸವನ್ನು ಸುಂದರವಾಗಿ ಮಾಡಿದ್ದಾರೆ. ಇವರು ಹೋಟೆಲ್ ವಿನ್ಯಾಸವು ಕೂಡ ಮಾಡುತ್ತಾರೆ. ಅನೇಕ ವಿನ್ಯಾಸ ಮಾಡಿ ಹೆಸರುವಾಸಿಯಾಗಿರುವ ಗೌರಿ ಖಾನ್ ಈಗ ದೆಹಲಿ ನಲ್ಲಿ ಬಾರ್ ಒಂದನ್ನು ಸುಂದರವಾಗಿ ವಿನ್ಯಾಸ ಮಾಡಿ ಭೇಷ್ ಅನಿಸಿಕೊಂಡಿದ್ದಾರೆ.

 

 

ಸುಂದರವಾಗಿ ವಿನ್ಯಾಸವಾಗಿರುವ ಬಾರ್ ಒಳಾಂಗಣ ಈಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಈ ಬಾರ್ ನ್ನು ಹಲವಾರು ಬಾಟಲಿ ಬಳಸಿ ವಿನ್ಯಾಸ ಮಾಡಲಾಗಿದೆ. ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಗೌರಿ ಖಾನ್ ವಿನ್ಯಾಸ ಚಿತ್ರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಈಗ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಗೌರಿ ವಿನ್ಯಾಸಗೊಳಿಸಿರುವ ಬಾಟಲಿ ಆರ್ಟ್ ವಿಭಿನ್ನ ವಾಗಿದ್ದು ಎಲ್ಲರು ಪ್ರಶಂಶೆ ವ್ಯಕ್ತ ಪಡಿಸುತ್ತಿದ್ದಾರೆ.

 

 

ಬಾಟಲಿಗಳಿಂದ ಒಳಾಂಗಣ ವಿನ್ಯಾಸ ಮಾಡುವುದಕ್ಕೆ ಬಾಟಲ್ ಆರ್ಟ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಮಾರ್ಚ್ 9 ರಂದು ಈ ಬಾರ್ ಉದ್ಘಾಟನೆ ಅದ್ದೂರಿಯಾಗಿ ನಡೆಯಿತು. ಈ ಉದ್ಘಾಟನಾ ಸಮಾರಂಭದಲ್ಲಿ ಗೌರಿ ಖಾನ್ ಕೂಡ ಭಾಗವಹಿಸಿದ್ದರು. ಈ ಬಾರ್ ಶಾಖೆ ದೆಹಲಿ ಹಾಗು ಚಂಡೀಗಢ ನಲ್ಲಿ ಇದೆ. ಮೊದಲು ಗೃಹಿಣಿ ಆಗಿದ್ದ ಗೌರಿ ಖಾನ್ ಅಷ್ಟಾಗಿ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುತ್ತಿರಲಿಲ್ಲ. ಈಗ ಗೌರಿ ಡಿಸೈನರ್ ಆಗಿ ಹೆಚ್ಚು ಖ್ಯಾತಿ ಪಡೆಯುತ್ತಿದ್ದಾರೆ.

 

 

 

2016 ರಲ್ಲಿ ಉದ್ಘಾಟನೆ ಗೊಂಡ ರಣಭೀರ್ ಕಪೂರ್ ಮನೆಯನ್ನು ಕೂಡ ಗೌರಿ ಖಾನ್ ವಿನ್ಯಾಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top