ಆರೋಗ್ಯ

ಗರ್ಭಿಣಿ ಹೆಣ್ಮಕ್ಕಳು ಹೆರಿಗೆ ನಂತ್ರ ದೇಹದ ಶೇಪ್ ಮತ್ತೆ ಬರ್ಬೇಕು ಅನ್ಕೋತಿದ್ರೆ ಈ ಮುಖ್ಯವಾದ ವಸ್ತು ಬಗ್ಗೆ ತಿಳ್ಕೊಂಡಿರಲೇಬೇಕು

ಒಂಬತ್ತು ತಿಂಗಳು ಗರ್ಭದಲ್ಲಿ ಮಗುವನ್ನು ಹೆತ್ತು ಆ ನಂತರ ಹೆರಿಗೆಯಾದ ಮೇಲೆ ಹೆಣ್ಣು ಮಕ್ಕಳ ಸಂಪೂರ್ಣ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗಿರುತ್ತದೆ , ಮಗು ಗರ್ಭದಲ್ಲೇ ಇರುವಾಗ ಹೆಚ್ಚುವರಿ ಆಹಾರವನ್ನು ಸೇವಿಸಿ ದೇಹದಲ್ಲಿ ಸಾಕಷ್ಟು ಕೊಬ್ಬು ಸೇರಿಕೊಂಡಿರುತ್ತದೆ ಅಲ್ಲದೆ ಗರ್ಭ ವಾದಾಗ ಹೊಟ್ಟೆ ಹಾಗೂ ಕೆಳ ಹೊಟ್ಟೆಯ ಭಾಗದಲ್ಲಿ ಸಾಕಷ್ಟು ಕೊಬ್ಬು ಸೇರಿಕೊಂಡಿರುತ್ತದೆ ಇದರಿಂದ ಬಾಣಂತಿಯರು ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಸಾಕಷ್ಟು ಪಾಡುಗಳನ್ನು ಪಡಬೇಕಾಗುತ್ತದೆ .

 

ನೈಸರ್ಗಿಕ ಹೆರಿಗೆ ಅಂದರೆ ಸಾಮಾನ್ಯ ಹೆರಿಗೆಯಾದಾಗ ದೇಹದಲ್ಲಿ ಅನಗತ್ಯವಾದ ಚಿಕಿತ್ಸೆಗಳ ಅಗತ್ಯವಿರುವುದಿಲ್ಲ ಈ ಸಮಯದಲ್ಲಿ ಮಗು ಹೊರಬಂದ ತಕ್ಷಣ ಗರ್ಭಿಣಿ ಸ್ತ್ರೀಯರಿಗೆ ಬಟ್ಟೆ ಕಟ್ಟಿ ಅವರ ಹೊಟ್ಟೆ ಕಡಿಮೆ ಮಾಡಲು ಹಿರಿಯರು ಪ್ರಯತ್ನ ಪಡುತ್ತಾರೆ ಆದರೆ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಈ ಅವಕಾಶಗಳು ತೀರಾ ಕಡಿಮೆ ಎಂದು ಹೇಳಬಹುದು .

ಆಧುನಿಕ ತಂತ್ರಜ್ಞಾನದ ಆವಿಷ್ಕಾರದ ಫಲವಾಗಿ ಇಂದು ಬಾಣಂತಿಯರಿಗೆ ದೇಹದ ಉತ್ತಮ ಶೇಪ್ ಪಡೆಯಲು ವರದಾನದಂತೆ ಸಿ -ಸೆಕ್ಷನ್ ಬೆಲ್ಟ್ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ ಇನ್ನು ಇವುಗಳ ಉಪಯೋಗಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು .

 

ಬಾಣಂತಿಯರಲ್ಲಿ ಬೊಜ್ಜು ಕರಗಿಸುತ್ತದೆ 

ಒಂಬತ್ತು ತಿಂಗಳು ಅನಗತ್ಯವಾಗಿ ಶೇಖರವಾದ ಬೊಜ್ಜನ್ನು ಕಡಿಮೆ ಮಾಡಲು ಸಿ ಸೆಕ್ಷನ್ ಬೆಲ್ಟ್ಗಳ ಅವಶ್ಯಕತೆ ಬಹಳಷ್ಟು ಮಂದಿಗೆ ಇರುತ್ತದೆ ಇದು ದೇಹವನ್ನು ಒಳ್ಳೆಯ ಆಕಾರದಲ್ಲಿ ಇಟ್ಟುಕೊಳ್ಳಲು ಸಹಾಯಕ .

ಮಾಂಸ ಖಂಡಗಳನ್ನು ಬಲವಾಗಿ ಇರಿಸುತ್ತದೆ 

 

ಒಂಬತ್ತು ತಿಂಗಳು ಮಗುವನ್ನು ಹೆರುವಾಗ ದೇಹದ ಮುಂಭಾಗದಲ್ಲಿ ಸಾಕಷ್ಟು ತೂಕವನ್ನು ಗರ್ಭಿಣಿಯರು ಅನುಭವಿಸುತ್ತಿರುತ್ತಾರೆ ಇದರಿಂದ ಬೆನ್ನುಮೂಳೆಯ ಸ್ನಾಯುಗಳು ಹಾಗೂ ಮೂಳೆ ಕೊಂಚ ಬಾಗಿರುತ್ತದೆ ಅಷ್ಟೇ ಅಲ್ಲದೆ ಸೊಂಟದ ಮೇಲೆ ಸಾಕಷ್ಟು ಒತ್ತಡ ಬಿದ್ದ ಕಾರಣ ಬಲವನ್ನು ಸ್ವಲ್ಪ ಕಳೆದುಕೊಂಡಿರುತ್ತದೆ ಅಂಥವರಿಗೆ ಸಿ ಸೆಕ್ಷನ್ ಬೆಲ್ಟ್ ಬಹಳ ಉಪಯೋಗಕ್ಕೆ ಬರುತ್ತದೆ .

ಓಡಾಡಲು ಸಹಾಯ ಮಾಡುತ್ತದೆ 

ಅಷ್ಟು ದಿನಗಳಿಂದ ದೇಹದ ಮೇಲೆ ಸಾಕಷ್ಟು ಒತ್ತಡ ಬಿದ್ದಿರುತ್ತದೆ ಅಲ್ಲದೆ ದೇಹದ ತೂಕ ಕೂಡ ಬಹಳ ಹೆಚ್ಚಾಗಿರುತ್ತದೆ ಇದರಿಂದ ಸ್ನಾಯು ಹಾಗೂ ಮೂಳೆಗಳು ಸ್ವಲ್ಪ ಬಲವನ್ನು ಕಳೆದುಕೊಂಡಿರುತ್ತದೆ ಈ ಬೆಲ್ಟ್ ನ ಸಹಾಯದಿಂದ ದೇಹದ ಚಲನೆ ,  ನಡೆಯುವುದು ತೀರಾ ಸುಲಭ ಎಂದು ಹೇಳಬಹುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top