ಮನೋರಂಜನೆ

ಈ ಕಾರಣಕ್ಕಾಗಿ ಪಬ್ಲಿಕ್ ಟಿವಿ ವಿರುದ್ಧ ತಿರುಗಿಬಿದ್ದ ರವಿಬೆಳಗೆರೆ: ರಂಗಣ್ಣನ ಮೇಲೆ ಕೇಸ್ ದಾಖಲು

ಸದಾ ಒಂದೊಲ್ಲೊಂದು ವಿಚಾರಗಳಿಗೆ ಸುದ್ದಿಯಾಗುವ ಹಾಯ್ ಬೆಂಗಳೂರು ಪ್ರತ್ರಿಕೆಯ ಸಂಪಾದಕ ರವಿ ಬೆಳಗೆರೆ ಇತ್ತೀಚಿನ ದಿನಗಳಲ್ಲಿ ಕಾಣೆಯಾಗಿದ್ದರು. ಆದರೆ ಆಗ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ತಮ್ಮ ತೀಕ್ಷ್ಣವಾದ ಬರಹಗಳಿಂದಲೇ ರಾಜಕೀಯ ವ್ಯಕ್ತಿಗಳು, ಸಿನಿಮಾ ನಟರು ಸೇರಿದಂತೆ ಅನೇಕಾನೇಕ ಗಣ್ಯ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಳ್ಳುವ ರವಿಬೆಳಗೆರೆಯ ಕಣ್ಣು ಈಗ ಪಬ್ಲಿಕ್ ಟಿವಿ ಸಂಪಾದಕ ಹೆಚ್. ಆರ್ ರಂಗನಾಥ್ ಅವರ ಮೇಲೆ ಬಿದ್ದಿದೆ. ಹೌದು ತಮ್ಮ ವಯಕ್ತಿಕ ವಿಚಾರವಾಗಿ ರವಿ ಬೆಳಗೆರೆಯವರು ರಂಗಣ್ಣ ಮೇಲೆ ರವಿಬೆಳಗೆರೆ ಕೇಸ್ ದಾಖಲಿಸಲು ಮುಂದಾಗಿದ್ದಾರೆ.

 

 

ಕಳೆದ ವರ್ಷ ಸಹದ್ಯೋಗಿ ಸುನಿಲ್ ಹೆಗ್ಗನಹಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದಲ್ಲಿ ರವಿ ಬೆಳಗೆರೆಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಿಚಾರಣೆಗೆ ಒಳಪಡಿಸಿದ್ದರು.  ಆ ವೇಳೆ ಸುಮಾರು ಮೂರ್ನಾಲ್ಕು ದಿನಗಳ ಕಾಲ ರವಿಬೆಳೆಗರೆ ಜೈಲಿನಲ್ಲೇ ಇರಬೇಕಾಗಿತ್ತು. ಈ ವೇಳೆ ಪಬ್ಲಿಕ್ ಟಿವಿ ಸೇರಿದಂತೆ ಕನ್ನಡದ ಬಹುತೇಕ ಸುದ್ದಿ ವಾಹಿನಿಗಳು ರವಿಬೆಳಗೆರೆ ಬಂಧನದ ವಿಷಯವನ್ನು ತಮ್ಮ ಮೂಗಿನ ನೇರಕ್ಕೆ ಹೇಗೆ ಬೇಕೋ ಹಾಗೆ ಪ್ರಸಾರ ಮಾಡಿ ಬಿಟ್ಟಿದ್ದವು.

 

 

ನಂತರ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಹೊರಗಡೆ ಬಂದ ರವಿ ಬೆಳೆಗರೆ ತಾವು ಬಂಧನದಲ್ಲಿದ್ದಾಗ ತಮ್ಮ ಮೇಲೆ ಕನ್ನಡ ನ್ಯೂಸ್ ಚಾನೆಲ್ ಗಳು ಮಾಡಿರುವ ನ್ಯೂಸ್ ಗಳನ್ನೂ ನೋಡಿ ಗರಂ ಆಗಿಬಿಟ್ಟಿದ್ದರು. ತಮ್ಮ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನು ಬೇಕಾಬಿಟ್ಟಿಯಾಗಿ ಬಿತ್ತರಿಸಿದ್ದ ಒಂದೊಂದೇ ನ್ಯೂಸ್ ಚಾಲ್ ಗಳಿಗೆ ಟಾಂಗ್ ಕೊಡುತ್ತಿರುವ ರವಿ ಬೆಳಗೆರೆ ಪಬ್ಲಿಕ್ ಟಿವಿ ರಂಗಣ್ಣನ ಮೇಲೆ ಮುಖ್ಯ ನಿಯಮಗಳನ್ನು ಉಲ್ಲಂಘಿಸಿ ಸುದ್ದಿ ಪ್ರಸಾರ ಮಾಡಿದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.

 

 

ಈ ಬಗ್ಗೆ ಸ್ವತಃ ರವಿ ಬೆಳಗೆರೆಯವರೇ ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದು ರಂಗನಾಥ್ ಅವರಿಗೆ ಒಂದು ಗತಿ ಕಾಣಿಸುತ್ತೇನೆ ಎಂದು ಹೇಳಿದ್ದಾರೆ. “ನಾನು ಗೆಳೆತನಕ್ಕೆ ತುಂಬಾ ಬೆಲೆ ಕೊಡುತ್ತೇನೆ. ಸುಪಾರಿ ಎಂಬ ಬೃಹತ್ ನಾಟಕ ನಡೆದಾಗ ಎಲ್ಲ ಚಾನಲ್ಗಳೂ ಸುದ್ದಿಮಾಡಿದವು. ಸುಮ್ಮನೆ ಅಲ್ಲ ಮುಗಿಬಿದ್ದು ಮಾಡಿದವು. ಹಾಗಿರುವಾಗ ಪಬ್ಲಿಕ್ ಟಿವಿ ಸುದ್ದಿ ಮಾಡಬಾರದು ಅಂತ ನಿರೀಕ್ಷಿಸಲಿಲ್ಲ ನಾನು. ರಂಗ ನನ್ನ ಮೂವತ್ತು ವರ್ಷಗಳ ಗೆಳೆಯ. ಅವನ ತೊಡೆ ಮೇಲೆ ಕುಳಿತ “ಗೌಡರ್” ಎದ್ದು ಹೋಗಿ ಅಲ್ಲೀಗ ಅಜ್ಮತ್ ಎಂಬ ಪುರಾತನ ಪುಣ್ಯ ಪುರುಷ ಕುಳಿತಿದ್ದಾನೆ.”

“ಇಬ್ಬರೂ ಕ್ರೈಮ್ ರಿಪೋರ್ಟಿಂಗ್ ಮಾಡಿದವರೇ. ಆದರೆ ಟಿಆರ್ಪಿ ದೋಚುವ ಹಂಬಲದಲ್ಲಿ ನನ್ನ ಪತ್ನಿ, ಮನೆ ಎಲ್ಲ ತೋರಿಸಿದರು. ಸರಿ, ಆದರೆ ನನ್ನ ಹತ್ತು ವರ್ಷದ ಮಗ ಏನು ಮಾಡಿದ್ದ? ಅಪ್ರಾಪ್ತ ವಯಸ್ಸಿನ ಮಗುವಿನ ಚಿತ್ರ ತೋರಿಸೋದು ಕಾನೂನು ಬಾಹಿರ ಮತ್ತು ಅಕ್ಷಮ್ಯ ಅಪರಾಧ.”

“ಈಗ ನಾನು ರಂಗನ ಮೇಲೆ ತುಂಬಾ ದೊಡ್ಡ ಮೊತ್ತಕ್ಕೆ ಕೇಸ್ ಹಾಕುತ್ತಿದ್ದೇನೆ. ಯಾಕೆ ಬಿಡಲಿ, ಹೇಳಿ. ಈ ವಿಷಯದಲ್ಲಿ ಕೋರ್ಟ್ ತುಂಬಾ ಕಠಿಣವಾಗಿ ನಡೆದುಕೊಳ್ಳುತ್ತದೆ. ರಂಗನಿಗೊಂದು ಗತಿ ಕಾಣಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.

 

 

ಈ ಹಿಂದೆ ತಮಗೆ ಜೈಲಿನಲ್ಲಿ ಖೈಧಿ ನಂಬರ್ ಕೊಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಬಿತ್ತರಿಸಿದ್ದಕ್ಕಾಗಿ ರಂಗನಾಥ್ ಮೇಲೆ ಹೌಹಾರಿದ್ದ ರವಿ ಬೆಳಗೆರೆ ರಂಗಣ್ಣನನ್ನು ತರಾಟೆಗೆ ತೆಗೆದುಕೊಂಡು ನೇರವಾಗಿಯೇ ಮೂರ್ಖ ಎಂದು ಬೈದಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top