ಆರೋಗ್ಯ

ರುಚಿರುಚಿಯಾಗಿದೆ ಅಂತ ಮುಗಿಬಿದ್ದು ತಿನ್ನೋ ಗುಲ್ಕನ್ ತಿಂದ್ರೆ ಈ 7 ಆರೋಗ್ಯಕರ ಪ್ರಯೋಜನಗಳನ್ನ ಪಡ್ಕೊಬಹುದು ಅಂತ ಗೊತ್ತಾ

ಗುಲ್ಕನ್ ಈ ಪದವನ್ನು ಯಾರೂ ಕೇಳಿಲ್ಲ ಹೇಳಿ ಬ್ರೆಡ್ ಬಾಳೆಹಣ್ಣಿನ ಜೊತೆ ಇದನ್ನು ನೆಂಚಿಕೊಂಡು ತಿಂದರೆ ಅದರ ರುಚಿಯೇ ಬೇರೆ ನೈಸರ್ಗಿಕವಾದ ಗುಲಾಬಿ ದಳಗಳಿಂದ ತಯಾರಾಗುವ ಗುಲ್ಕನ್ ನ್ನು ತಿಂದವನೇ ಬಲ್ಲ ಅದರ ರುಚಿ ಎಷ್ಟು ಸವಿಯಾಗಿದೆ ಎಂದು .

 

 

ಇನ್ನು ಗುಲ್ಕನ್ ತಿಂದರೆ ಇಷ್ಟು ಲಾಭಗಳಿವೆ ಎಂದು ತಿಳಿದ ಮೇಲಂತೂ ಗುಲ್ಕನ್ ನನ್ನು ಮುಗಿಬಿದ್ದು ತಿನ್ನುತ್ತೀರಾ ಹಾಗಾದರೆ ಆರೋಗ್ಯದ ಪ್ರಯೋಜನಗಳು ಯಾವುದು ತಿಳಿಯೋಣ ಬನ್ನಿ .

ಬಾಯಿಯಲ್ಲಿ ಪದೇ ಪದೇ ಹುಣ್ಣಾಗುವ ಸಮಸ್ಯೆ ಶೇಕಡ ತೊಂಬತ್ತೈದು ಮಂದಿಯಲ್ಲಿ ಇದ್ದೇ ಇರುತ್ತದೆ ಅಂಥವರು ಗುಲ್ಕನ್ ತಿಂದರೆ ಬಹಳ ಒಳ್ಳೆಯದು ಹಾಗೆಯೇ ಒಸಡಿನಲ್ಲಿ ರಕ್ತ ಹಾಗೂ ಒಸಡುಗಳು ದುರ್ಬಲವಾಗಿರುವುದು ಸಹ ಗುಲ್ಕನ್ ಅನ್ನು ಸೇವಿಸುವುದು ಒಳ್ಳೆಯದು

 

 

ಹೊಟ್ಟೆಯುಬ್ಬರ ಗ್ಯಾಸ್ಟ್ರಿಕ್ ಹಾಗೂ ಅಸಿಡಿಟಿ ಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ನಿಯಮಿತವಾಗಿ ಗುಲ್ಕನ್ ಸೇವಿಸುತ್ತಾ ಬಂದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು

 

 

ಮೂತ್ರ ಕಟ್ಟುವಿಕೆ ಹಾಗೂ ಉರಿಮೂತ್ರದ ಸಮಸ್ಯೆ ಇರುವವರು ಸಹ ಗುಲ್ಕನ್ ಸೇವಿಸುತ್ತಾ ಬಂದರೆ ಈ ಸಮಸ್ಯೆಗೆ ಒಂದರಿಂದ ಎರಡು ದಿನದ ಒಳಗೆ ಪರಿಹಾರ ಕಂಡುಕೊಳ್ಳಬಹುದು .

 

 

ಚರ್ಮದ ಅಲರ್ಜಿ ಹಾಗೂ ಕ್ಯಾನ್ಸರ್ನಿಂದ ಬಳಲುತ್ತಿರುವವರು ಗುಲ್ಕನ್ ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಇದರ ವಿರುದ್ಧ ಹೋರಾಡುತ್ತವೆ

 

 

ಮುಟ್ಟಿನ ಹೊಟ್ಟೆ ನೋವು ವಿಪರೀತಕ್ಕೆ ತಿರುಗಿ ಸ್ನಾಯುಗಳಲ್ಲಿ ನೋವು ಕಾಣಿಸಿಕೊಂಡರೆ ಗುಲ್ಕನ್ ಉತ್ತಮ ಪರಿಹಾರ .

 

 

ದೇಹದಲ್ಲಿ ಉಷ್ಣ ಜಾಸ್ತಿಯಾಗಿ ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ಗುಲ್ಕನ್ ದೇಹವನ್ನು ತಂಪಾಗಿಸಿ ಈ ಸಮಸ್ಯೆಯನ್ನು ತಡೆಯುತ್ತದೆ

 

 

ಮೂಳೆ ಸವೆತದಂತಹ ಸಮಸ್ಯೆಗಳಿಂದ ನರಳುತ್ತಿದ್ದರೆ ಗುಲ್ಕನ್ ಸೇವನೆ ಮಾಡುವುದರಿಂದ ಮೂಳೆಗಳು ಬಲ ಪಡುತ್ತವೆ ಜೊತೆಗೆ
ಕೀಲು ನೋವು ಸಹ ದೂರವಾಗುತ್ತವೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top