ದೇವರು

ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ಎಂದೇ ಭಾವಿಸುವ ಕುಂಕುಮ ಮತ್ತು ಅರಿಶಿನದ ಬಗೆಗಿನ ಈ ವಿಷಯಗಳು ತಿಳ್ಕೊಳ್ಳೆಬೇಕು

ಕುಂಕುಮ ಮತ್ತು ಅರಿಶಿನದ ಮಹತ್ವ ಏನು ಗೊತ್ತಾ ?

 

ಹಿಂಧೂ ಧರ್ಮದಲ್ಲಿ ಕುಂಕುಮ ಮತ್ತು ಅರಿಶಿನಕ್ಕೆ ಪವಿತ್ರ ಸ್ಥಾನವಿದ್ದು.ಯಾವುದೇ ಪೂಜೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ ಇವುಗಳನ್ನು ವಿಶೇಷವಾಗಿ ಬಳಸಿಕೊಳ್ಳುತ್ತಾರೆ. ಇದಕ್ಕೆ ಪೂಜ್ಯನಾಯ ಸ್ಥಾನವನ್ನು ನೀಡುತ್ತಾರೆ.ವಿವಾಹಿತ ಸ್ತ್ರೀಯರು ತಮ್ಮ ಕೆನ್ನೆಗೆ ಅರಿಶಿನವನ್ನು ಹಣೆಗೆ ಕುಂಕುಮದ ಸಿಂಧೂರವನ್ನಿಟ್ಟು ತಮ್ಮ ಮುತೈದೆ ತನದ ಸಂಕೇತವಾಗಿ ತೋರಿಸುತ್ತಾರೆ.

 

 

ಇಷ್ಟೇ ಅಲ್ಲದೆ ಕುಂಕುಮ ಮತ್ತು ಅರಿಶಿನ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಇಂದಿನ ಲೇಖನದಲ್ಲಿ ಇವುಗಳ ವಿಶೇಷತೆಯೇನು ಎಂಬುದನ್ನು ಕಂಡುಕೊಳ್ಳೋಣ.

ಅರಿಶಿನವು ಬರಿಯ ಅಲಂಕಾರಿಕ ಅಲ್ಲದೆ ಪೂಜ್ಯನೀಯ ಸಾಮಗ್ರಿಯಾಗಿ ಹೆಸರು ಪಡೆದು ಕೊಂಡಿರುವುದು ಮಾತ್ರವಲ್ಲದೆ ಆರೋಗ್ಯ ಕ್ಷೇತ್ರದಲ್ಲಿ ಕೂಡ ಅರಿಶಿನ ಗಣನೀಯ ಸ್ಥಾನವನ್ನು ಪಡೆದುಕೊಂದಿದ್ದು. ಅರಿಶಿನ ಒಂದು ರೀತಿಯಲ್ಲಿ ಸಂಜೀವಿನಿಯಾಗಿದೆ.

 

ಕುಂಕುಮ.

 

ವಿವಾಹಿತ ಮಹಿಳೆಯರ ಗುರುತು:- ಅನಾದಿ ಕಾಲದಿಂದಲೂ,ವಿವಾಹಿತ ಮಹಿಳೆಯರು ಕುಂಕುಮವನ್ನು ಸಿಂಧೂರ ಮತ್ತು ತಿಲಕದಂತೆ ಬಳಸಿಕೊಳ್ಳುತ್ತಿದ್ದರು.ಅದು ಈಗಲೂ ಸಹ ಪದ್ಧತಿಯಾಗಿ ಉಳಿದುಕೊಂಡಿದೆ.  ತಮ್ಮ ಪತಿಯ ದೀರ್ಘಾಯುಷ್ಯದ ಸಂಕೇತವಾಗಿದೆ. ಸ್ತ್ರೀಯರು  ಕುಂಕುಮವನ್ನು  ಬೈತಲೆಯ ನಡುವೆ  ಮತ್ತು ಸಿಂಧೂರವನ್ನು  ಹೆಣೆಗೆ ಹಚ್ಚಿಕೊಳ್ಳುತ್ತಾರೆ.

 

 

ಕುಂಕುಮದ ಮಹತ್ವ

 

ಹಿಂದೂ ಶಾಸ್ತ್ರಗಳು ಹೇಳುವಂತೆ,ಸೌಭಾಗ್ಯ ಮತ್ತು ಅದೃಷ್ಟದ ಸಂಕೇತವಾಗಿ ಕುಂಕುಮವನ್ನು ಕಾಣಲಾಗುತ್ತದೆ.  ಹಣೆಯನ್ನು ಮೇಷ ರಾಶಿಯ ಸ್ಥಾನವಾಗಿ ಹೇಳಲಾಗಿದ್ದು.ಮೇಷ ರಾಶಿಯನ್ನು ಆಳುವ ದೇವನು ಮಂಗಳ   ಗ್ರಹ.ಆದ್ದರಿಂದಲೇ ಅದೃಷ್ಟವನ್ನು ತರುತ್ತದೆ ಎಂಬ ಕಾರಣಕ್ಕಾಗಿ ವಿವಾಹಿತ ಸ್ತ್ರೀಯರು ತಮ್ಮ ಹಣೆಯನ್ನು ಕುಂಕುಮದಿಂದ ಅಲಂಕರಿಸಿಕೊಳ್ಳುತ್ತಾರೆ.

ಕುಂಕುಮ ಮಹಿಳೆಯರ ಶಕ್ತಿಯ ಸಂಕೇತ:- ವಿದ್ವಾಂಸರ ಪ್ರಕಾರ,ಕೆಂಪು ಶಕ್ತಿ ಮತ್ತು ಬಲದ ಸಂಕೇತವಾಗಿದೆ. ಪಾರ್ವತಿ ದೇವಿ ಮತ್ತು ಸತಿ ದೇವಿಯ ಶಕ್ತಿಗೆ ಸಮನಾಗಿ ಇದನ್ನು  ಹೋಲಿಸಲಾಗಿದೆ. ಹಿಂದೂ ಶಾಸ್ತ್ರಗಳ ಪ್ರಕಾರ,ಸತಿಯು ತನ್ನ ಪತಿಗಾಗಿ ಪ್ರಾಣವನ್ನೇ ಅರ್ಪಿಸುತ್ತಾಳೆ. ಅದೇ ರೀತಿಯಲ್ಲಿ ಪ್ರತಿಯೊಬ್ಬ ಪತ್ನಿ ಕೂಡ ತನ್ನ ಭಕ್ತಿಯನ್ನು ಆತನ ಪ್ರತಿಯಾಗಿ ತೋರಬೇಕು ಎಂದಾಗಿದೆ. ಸಂಸ್ಕೃತಿಯ ಪ್ರತೀಕ ಹಣೆಯ ಮೇಲಿನ  ಈ ಪುಟ್ಟ ಸಿಂಧೂರ.

 

ಕುಂಕುಮದ ಪೌರಾಣಿಕ ಮಹತ್ವ

 

 

 

ಕುಂಕುಮವನ್ನು ಅರಿಶಿನ ಮತ್ತು ಪ್ರಮುಖ ವಸ್ತುಗಳಿಂದ ಸಿದ್ಧಪಡಿಸಲಾಗಿದೆ. ಅನಾದಿ ಕಾಲದಲ್ಲಿ ಕುಂಕುಮವು ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿತ್ತು. ಅದಕ್ಕಾಗಿಯೇ ವಿವಾಹಿತ ಸ್ತ್ರೀಯರು ಕುಂಕುಮವನ್ನು ಹಚ್ಚಿಕೊಳ್ಳುತ್ತಿದ್ದರು. ಮದುವೆಯಾಗದವರು ಮತ್ತು ವಿಧವೆಯರು ಕುಂಕುಮವನ್ನು ಹಚ್ಚಿಕೊಳ್ಳುತ್ತಿರಲಿಲ್ಲ.

 

ಅರಿಶಿನದ  ಮಹತ್ವ

 

ಅರಿಶಿನ ಹಳದಿ ಮತ್ತು ಕಿತ್ತಳೆ ಬಣ್ಣದಲ್ಲಿ ಲಭ್ಯವಿದೆ.ಈ ಎರಡೂ ಬಣ್ಣಗಳು ಕೂಡ ತಮ್ಮದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡು, ಹಳದಿ ಬಣ್ಣವು ಕನ್ಯತ್ವ ಹಾಗೂ ಇಂದ್ರಿಯ ನಿಗ್ರಹದ ಕಾರ್ಯವನ್ನು ನಿರ್ವಹಿಸಿದರೆ, ಕಿತ್ತಳೆ ಬಣ್ಣವು ಶೌರ್ಯ,ಧೈರ್ಯ ಮತ್ತು ತ್ಯಾಗದ ಸಂಕೇತವಾಗಿದೆ.

ಅರಿಶಿನ ಶುದ್ಧಿಕರಣದ ಸಂಕೇತ:- ಹಿಂದೂ  ವಿವಾಹ ಪದ್ಧತಿಗಳಲಿ ಅರಿಶಿನ ಶಾಸ್ತ್ರ ಇದ್ದೇ ಇರುತ್ತದೆ.ಮಧುಮಗ ಮತ್ತು ಮಧುಮಗಳಿಗೆ ಅರಿಶಿನದ ಮಿಶ್ರಣವನ್ನು ಹಚ್ಚುತ್ತಾರೆ. ವಿವಾಹದಂತಹ ಪರಿಶುದ್ಧ ಶಾಸ್ತ್ರದಲ್ಲಿ ಹುಡುಗಿಯನ್ನು ಎಲ್ಲಾ ಬಗೆಯಲ್ಲಿಯೂ ಪುನೀತಾಳನ್ನಾಗಿ ಮಾಡಲು ಶಾಸ್ತ್ರವನ್ನು ಇಟ್ಟುಕೊಳ್ಳುತ್ತಾರೆ. ಚಿನ್ನದ ದೇವತೆ ಅರಿಶಿನದಂತಹ , ಚಿನ್ನದಂತಹ ಗುಣಗಳನ್ನು ಹೊಂದಲಿ ಎಂದು ಆಶಿಸುತ್ತಾರೆ.

 

 

ಅರಿಶಿನ ಹಲವು ಅಂಶಗಳ ಸಂಕೇತ

 

ಜನರ ನಂಬಿಕೆಯ ಪ್ರಕಾರ, ಅರಿಶಿನವು ಶೌರ್ಯ, ಅದೃಷ್ಠ,  ಫಲವತ್ತತೆಯ ಸಂಕೇತವಾಗಿದೆ.  ಮನುಷ್ಯರ ಆಂತರಿಕ ಶಕ್ತಿಯನ್ನು ಇದು ಪ್ರತಿಪಾದಿಸುತ್ತದೆ ಮತ್ತು  ಜೀವನದಲ್ಲಿ ಏಳಿಗೆಯನ್ನು ಎತ್ತಿ ಹಿಡಿಯುತ್ತದೆ. ಆದ್ದರಿಂದಲೇ ಪವಿತ್ರ ಪೂಜಾ ಸಾಮಾಗ್ರಿಯಲ್ಲಿ ಅರಿಶಿನವನ್ನು ಬಳಸುತ್ತಾರೆ.

ಆರೋಗ್ಯದ ದೃಷ್ಟಿಯಲ್ಲಿ ಅರಿಶಿನದ ಪಾತ್ರ:- ಬೆಚ್ಚಗಿನ ಹಾಲಿನಲ್ಲಿ ಅರಿಶಿನವನ್ನು ಹಾಕಿ  ಮಿಶ್ರಣ ಮಾಡಿ ಸೇವಿಸುವುದು ನಮ್ಮನ್ನು ಹಿತವಾಗಿರಿಸುತ್ತದೆ.ಇಷ್ಟೇ ಅಲ್ಲದೆ ಅರಿಶಿನದ ಹಾಲು ನಮ್ಮ  ದೇಹದಲ್ಲಿರುವ ಆಮ್ಲದ ಹಿಮ್ಮುಖ ಹರಿವನ್ನು  ನಿಯಂತ್ರಿಸಿ ಯಾವುದೇ ನೋವನ್ನು  ಸಹ ಬೇಗನೆ ನಿವಾರಿಸುತ್ತದೆ. ಅರಿಶಿನವನ್ನು ಹಚ್ಚಿಕೊಳ್ಳುವುದರಿಂದ ತ್ವಚೆಯು  ಹೊಳಪನ್ನು ಪಡೆದುಕೊಳ್ಳುತ್ತದೆ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭಗಳು ಇವೆ.ಇದರಲ್ಲಿ ರೋಗ ನಿರೋಧಕ ಶಕ್ತಿಯು ಅಡಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top