ಸಮಾಚಾರ

ಬ್ಯಾಚುಲರ್ ಪಾರ್ಟಿ ಮಾಡಲು ಹೋಗಿದ್ದ ಹಸೆ ಮಣೆ ಏರಬೇಕಿದ್ದ ವಧು ಹಾಗು ಆಕೆಯ 7 ಸ್ನೇಹಿತರು ಸುಟ್ಟು ಕರಕಲಾದರು

ಟರ್ಕಿಯ ಖ್ಯಾತ ಉದ್ಯಮಿ ಹುಸೈನ್‌ ಬಸರ್ನ್‌ ಅವರ ಏಕೈಕ ಅವರ ಪುತ್ರಿ ಮೀನಾ ಬಸರ್ನ್‌ ಅವರ ವಿವಾಹ ಮಹೋತ್ಸವ ಮುಂದಿನ ತಿಂಗಳು 14 ರಂದು ನಿಶ್ಚಯವಾಗಿತ್ತು ಇಸ್ತಾಂಬುಲ್ ನಲ್ಲಿ ನಡೆಯುತ್ತಿದ್ದ ಈ ವಿವಾಹಕ್ಕೆ ಮುರತ್‌ ಗೇಜರ್‌ ಎಂಬ ಉದ್ಯಮಿಯನ್ನು ತಮ್ಮ ಪುತ್ರಿ ಮೀನಗಾಗಿ ಹುಸೈನ್‌ ಹುಡುಕಿದ್ದರು.

 

 

 

ಬ್ಯಾಚುಲರ್ ಪಾರ್ಟಿಯನ್ನು ನೀಡುವ ಸಲುವಾಗಿ ಮೀನಾ ತಮ್ಮ ಏಳು ಸ್ನೇಹಿತರೊಂದಿಗೆ ದುಬೈ ತಲುಪಿದ್ದರು ಅಲ್ಲಿ ಪಾರ್ಟಿ ಮಾಡಿದ ಬಳಿಕ ತಮ್ಮದೇ ಆದ ವಿಮಾನ ಬಂಬಾರ್ಡಿಯರ್ ಸಿಎಲ್604 ನಲ್ಲಿ ತಮ್ಮ ಏಳು ಸ್ನೇಹಿತರೊಂದಿಗೆ ಮತ್ತೆ ಊರಿಗೆ ಮರಳುತ್ತಿದ್ದ ಮೀನಾ ಹಾಗೂ ಅವರ ಸ್ನೇಹಿತರ ಜೀವನದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಯ್ತು ಮೀನಾ ಹಾಗೂ ಆಕೆಯ ಗೆಳತಿಯರು ಆಗಸದಲ್ಲಿ ಬೆಂಕಿ ಹತ್ತಿದ ವಿಮಾನದಲ್ಲಿ ಸುಟ್ಟು ಕರಕಲಾದರು .

ಆಗಸದಲ್ಲಿ ಬೆಂಕಿ ಹೊತ್ತಿದ್ದ ವಿಮಾನವನ್ನು ಜನರು ಸುಮ್ಮನೆ ನೋಡುತ್ತ ಕುಳಿತುಕೊಳ್ಳಬೇಕಾಗಿತ್ತು ಯಾರೂ ಏನನ್ನೂ ಮಾಡದ ಪರಿಸ್ಥಿತಿಯಲ್ಲಿದ್ದರೂ ಇನ್ನೂ ಬೆಂಕಿ ಹತ್ತಿದ ಬಳಿಕ ನೆಲಕ್ಕೆ ಅಪ್ಪಳಿಸಿತ್ತು ವಿಮಾನ ಈ ಘಟನೆ ನಡೆದಿದ್ದು ಇರಾನ್ನ ಶಹರ್ ಈ ಕಾರ್ಡ್ ಎಂಬ ಗುಡ್ಡಗಾಡು ಪ್ರದೇಶದಲ್ಲಿ

 

 

ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು ವಿಮಾನದಲ್ಲಿ ಇದ್ದವರೆಲ್ಲ ಸುಟ್ಟು ಕರಕಲಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top