ಹೆಚ್ಚಿನ

ಇಂದು ಬೇಲ್ ಸಿಗಲಿಲ್ಲ, ಮುಂದುವರೆದ ನಲಪಾಡ್‌ ಜೈಲುವಾಸ: ಬುಧವಾರ 12.30ಕ್ಕೆ ಜಾಮೀನು ತೀರ್ಪು

ಬಹುಕೋಟಿ ಉದ್ಯಮಿಯ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಂತಿನಗರ ಶಾಸಕ ಹ್ಯಾರಿಸ್‌ ಪುತ್ರ ಮಹಮ್ಮದ್‌ ನಲಪಾಡ್‌ನ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ್ದಾರೆ. ವಾದ-ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಎರಡು ದಿನ ನಂತರ ಬುಧವಾರಕ್ಕೆ ಜಾಮೀನು ತೀರ್ಪು ಕಾಯ್ದಿರಿಸಿದೆ ಎಂದು ತಿಳಿದು ಬಂದಿದೆ.

 

 

ಕಳೆದ ತಿಂಗಳು ಫೆಬ್ರವರಿ 17 ರಂದು ಹಲ್ಲೆಗೆ ಒಳಗಾಗಿದ್ದ ವಿದ್ವತ್ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ. ಪ್ರಕರಣ ಸಂಭವಿಸಿದ ನಂತರ ನಾಪತ್ತೆಯಾಗಿದ್ದ ನಲಪಾಡ್ ನಂತರದಲ್ಲಿ ಬಂಧಿತರಾಗಿ ಜೈಲು ಸೇರಿದ್ದರು. ಜಾಮೀನಿಗಾಗಿ ಅವರು ಅರ್ಜಿ ಸಲ್ಲಿಸಿದ್ದರು.

 

 

ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಮೊಹಮ್ಮದ್‌ ಜಾಮೀನು ಇನ್ನು ಬುಧವಾರದ ವರೆಗೂ ಕಾಯಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬುಧವಾರ ಹೈಕೋರ್ಟ್ ಏಕಸದಸ್ಯ ಪೀಠದಿಂದ ನಳಪಾಡ್ ಗೆ ಜೈಲೇ, ಬೇಲೇ ಎಂಬ ಬಗ್ಗೆ ನಿರ್ಧಾರ ಆಗಲಿದೆ.

 

 

ವಿದ್ವತ್ ಈಗಾಗಲೇ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ವಿದ್ವತ್ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಹೀಗಾಗಿ, ಈ ಹಂತದಲ್ಲಿ ಜಾಮೀನು ಕೊಡಬಹುದಲ್ಲ ಎಂದು ಸಿ.ವಿ. ನಾಗೇಶ್ ವಾದವನ್ನು ಮಂಡಿಸಿದರು.

 

 

ನ್ಯಾಯವಾದಿ ಸಿ.ವಿ. ನಾಗೇಶ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್​ಪಿಪಿ ಶ್ಯಾಂಸುಂದರ್, ಹೆಲ್ಲೆಗೊಳಗಾಗಿರುವ ವಿದ್ವತ್ ಅವರಿಗೆ ಇನ್ನು ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ತನಿಖೆ ಇನ್ನೂ ಮುಕ್ತಾಯವಾಗಿಲ್ಲ. ಹೀಗಾಗಿ, ಜಾಮೀನು ಕೊಡಬಾರದೆಂದು ವಾದವನ್ನು ಮಂಡಿಸಿದರು. ಇಬ್ಬರ ವಾದ ಆಲಿಸಿದ ನ್ಯಾಯಾಧೀಶರು ತೀರ್ಪನ್ನ ಕಾಯ್ದಿರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top