fbpx
ಸಿನಿಮಾ

ಅಂದು ಸಾಹಸ ಸಿಂಹ ಹೇಳಿದ ಕಥೆ ಇಂದು ಪಡ್ಡೆ ಹುಲಿಯಾಗಿ ಮೂಹೂರ್ತ

ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರಕ್ಕೆ ಹನ್ನೊಂದನೇ ತಾರೀಕಿನಂದು ಮುಹೂರ್ತ ನಡೆಯಿತು. ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ನಟನೆಯ ಈ ಚಿತ್ರದ ಮುಹೂರ್ತಕ್ಕೆ ಭಾರಿ ಗಣ್ಯರೇ ದಂಡೇ ಆಗಮಿಸಿತ್ತು .

 

 

ಗುರು ದೇಶಪಾಂಡೆ ಹಾಗೂ ಶ್ರೇಯಸ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಪಡ್ಡೆಹುಲಿ ಚಿತ್ರದ ಮುಹೂರ್ತ ಸಮಾರಂಭದ ಆಹ್ವಾನ ಪತ್ರಿಕೆ ಕೊಟ್ಟು ಆಶೀರ್ವಾದವನ್ನು ಪಡೆದು ಬಂದಿದ್ದರು , ಶಿವರಾಜ್‌ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್ ಮುಂತಾದ ಸ್ಟಾರ್ ನಟರನ್ನು ಸಮಾರಂಭಕ್ಕೆ ಆಹ್ವಾನ ನೀಡಲಾಗಿತ್ತು.

 

 

ಭಾನುವಾರ ಬುಲ್‌ಟೆಂಪಲ್ ರಸ್ತೆಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನಡೆದಿದ್ದು. ಕಿಚ್ಚಾ ಸುದೀಪ್ ಕ್ಲಾಪ್ ಮಾಡಿ ಆಶೀರ್ವಾದ ಮಾಡಿದರು. ಭಾರತಿ ವಿಷ್ಣುವರ್ಧನ್ ಮತ್ತು ಕೀರ್ತಿ ವಿಷ್ಣುವರ್ಧನ್ ಜ್ಯೋತಿ ಬೆಳಗಿಸಿ ಶುಭ ಹಾರೈಸಿದರು. ಪುನೀತ್ ರಾಜ್ ಕುಮಾರ್ ಅವರು ಕ್ಯಾಮೆರಾ ಚಾಲನೆ ಮಾಡುವ ಮೂಲಕ ಪಡ್ಡೆ ಹುಲಿ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದರು .

 

 

ಎಲ್ಲಾ ಅಂದುಕೊಂಡ ಹಾಗೆ ಶಾಸ್ತ್ರೋಕ್ತವಾಗಿ ನಡೆದು ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಅವರ ಮೊದಲ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನೆರವೇರಿದೆ

ಇದೇ ಸಂದರ್ಭದಲ್ಲಿ ನಾಯಕ ನಟ ಶ್ರೇಯಸ್ ಅವರ ತಂದೆ ನಿರ್ಮಾಪಕ ಕೆ ಮಂಜು ಈ ಕಥೆ ಹುಟ್ಟಿದ ಸಂದರ್ಭವನ್ನು ನೆನಪಿಸಿಕೊಳ್ಳಲು ಮರೆಯಲಿಲ್ಲ .

 

 

ಈ ಹಿಂದೆ ಶ್ರೇಯಸ್ ಕಾಲೇಜು ಓದುವ ದಿನಗಳಿಂದಲೂ ಸಹಾಯಕವಾಗುವಂತೆ ಅನೇಕರು ಮಂಜು ಅವರನ್ನು ಕೇಳಿದ್ದರಂತೆ ಆದರೆ ಮಂಜು ಅವರಿಗೆ ತಮ್ಮ ಮಗ ನಾಯಕನಾಗಲು ಈಗ ಅರ್ಹನಲ್ಲ ಎಂದು ಎನಿಸಿತ್ತಂತೆ ಆತನಿಗೆ ಭಾರೀ ತರಬೇತಿ ಬೇಕು ಹಾಗೂ ದೇಹ ಫಿಟ್ ಆದರೆ ಮಾತ್ರ ನಾಯಕನಾಗಿ ಆತ ಸೂಕ್ತ ಎಂದು ಮಂಜು ಅವರು ಭಾವಿಸಿದ್ದರು .

 

 

ಮಂಜು ಅವರನ್ನು ತಮ್ಮ ಮಗನನ್ನು ನಾಯಕನಾಗಿ ಮಾಡುವ ಆಲೋಚನೆ ಮಾಡಲು ಮುಖ್ಯ ಕಾರಣ ಮಗ ತೊಂಬತ್ತು ಕೆಜಿ ತೂಕವನ್ನು ಇಳಿಸಿಕೊಂಡು ದೇಹವನ್ನು ಹುರಿಗೊಳಿಸಲು ಶುರುಮಾಡಿದ್ದರಂತೆ ನಾಯಕನಿಗೆ ಬೇಕಾಗುವ ಎಲ್ಲ ಅಗತ್ಯವಾದ ನಟನೆ ತರಬೇತಿ ,ಫೈಟಿಂಗ್, ಡಾನ್ಸಿಂಗ್ ಇವುಗಳೆಲ್ಲದರ ತರಬೇತಿಯನ್ನು ಪಡೆಯಲು ಶುರು ಮಾಡಿದ್ದರಂತೆ ಮಂಜು ಅವರಿಗೆ ತಮ್ಮ ಮಗ ಫಿಟ್ ಎಂದು ಎನಿಸಿದಾಗ ಮಾತ್ರ ನಾಯಕನಾಗಲು ಒಪ್ಪಿಗೆ ಕೊಟ್ಟರಂತೆ ಇದಾದ ಬಳಿಕ ಮೊದಲು ತಮಿಳಿನ ಪಿಚ್ಚಕಾರನ್ ಸಿನಿಮಾವನ್ನು ಕನ್ನಡಕ್ಕೆ ಮಾಡುವ ಪ್ಲಾನ್ ಮಾಡಿದ್ದರಂತೆ ಮಂಜು .

 

 

ಆದರೆ ಮೊದಲ ಚಿತ್ರದಲ್ಲಿ ರೀಮೇಕ್ ಚಿತ್ರವನ್ನು ಮಾಡಲಾರೆ ಎಂದು ಈ ಆಫರ್ ಅನ್ನು ತಿರಸ್ಕರಿಸಿದ್ದರಂತೆ ನಾಯಕ ನಟ ಶ್ರೇಯಸ್ ಇದಾದ ಬಳಿಕ ಯಾವುದೋ ಒಂದು ಸಮಯದಲ್ಲಿ ವಿಷ್ಣುವರ್ಧನ್ ಅವರು ಕೆ ಮಂಜು ಅವರಿಗೆ ಕಾಲೇಜ್ ನಲ್ಲಿ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದರಂತೆ ಇದೇ ಎಳೆಯನ್ನು ಸಿನಿಮಾ ಮಾಡಿದರೆ ಹೇಗೆ ಎಂಬ ಆಲೋಚನೆ ಮಂಜು ಅವರಿಗೆ ಬಂದು ಈ ಎಳೆಯನ್ನು ನಿರ್ದೇಶಕ ಗುರು ದೇಶಪಾಂಡೆ ಅವರೊಂದಿಗೆ ಹಂಚಿಕೊಂಡಿದ್ದರಂತೆ ಇನ್ನೂ ಈ ಎಳೆಯನ್ನು ತೆಗೆದುಕೊಂಡು ಸಂಪೂರ್ಣ ಕಥಾ ಹಂದರವನ್ನು ಸೃಷ್ಟಿಸಿದ ನಿರ್ದೇಶಕ ಗುರು ದೇಶಪಾಂಡೆ ಈಗಿನ ಜನರೇಷನ್ಗೆ ಯಾವ ರೀತಿ ಕಥೆ ಇಷ್ಟವಾಗುತ್ತದೆಯೋ ಹಾಗೆಯೇ ಕಥೆ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಈ ರೀತಿ ಬಹುನಿರೀಕ್ಷಿತ ಪಡ್ಡೆ ಹುಲಿ ಚಿತ್ರ ಇಂದು ಮುಹೂರ್ತ ಕಂಡಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top