ಸಮಾಚಾರ

‘ಅವನಲ್ಲ ಅವಳಾದ’ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಒಬ್ಬನೇ ಪುತ್ರ

ಕಳೆದ ಹನ್ನೊಂದು ವರ್ಷಗಳಿಂದ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ರಾಗಿರುವ ಜಿ ಪರಮೇಶ್ವರ್ ಅವರ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಗಾಗಿ ಅವರ ಕೊಡುಗೆಗಳು ಬಹಳವಾಗಿಯೇ ಇವೆ .

 

ಹೀಗೆ ವಿದೇಶದಲ್ಲಿ ಕೆಲಸ ಮಾಡುತ್ತಾ ನಂತರ ಭಾರತಕ್ಕೆ ಬಂದು ಕಾಂಗ್ರೆಸ್ ಪಕ್ಷ ಕಟ್ಟಲು ಅವಿರತವಾಗಿ ಶ್ರಮಿಸಿದವರು ಜಿ ಪರಮೇಶ್ವರ್ , ಪರಮೇಶ್ವರ್ ಅವರ ತಂದೆ ಕೂಡ ಕೋಟ್ಯಾಧೀಶ್ವರರು ಹಾಗೂ ಪರಮೇಶ್ವರ್ ಅವರಿಗೆ ಇರುವುದು ಒಬ್ಬರೇ ಒಬ್ಬ ಮಗ ಅವರ ಹೆಸರು ಶಶಾಂಕ್ ಎಂದು, ಪರಮೇಶ್ವರ್ ಅವರ ಕೋಟ್ಯಂತರ ರೂಪಾಯಿ ಆಸ್ತಿ ಹಾಗೂ ಸಂಪತ್ತಿಗೆ ಏಕೈಕ ವಾರಸುದಾರ

ಈಗ ಆಶ್ಚರ್ಯ ಹುಟ್ಟಿಸುವ ಸಂಗತಿ ಏನೆಂದರೆ ಶಶಾಂಕ್ ಹುಡುಗಿಯಾಗಿ ಬದಲಾಗಿದ್ದಾರೆ 

 

ಹೌದು ಇಷ್ಟು ದಿನ ಮುದ್ದಿನಿಂದ ಶಾನ್ ಎಂದೇ ಕರೆಸಿಕೊಳ್ಳುತ್ತಿದ್ದ ಪರಮೇಶ್ವರ್ ಅವರ ಪುತ್ರ ಶಶಾಂಕ್ ಈಗ ಶನ ಆಗಿ ಬದಲಾಗಿದ್ದಾರೆ .
ತಮ್ಮ ತಂದೆ ರಾಜಕೀಯ ಜೀವನದಲ್ಲಿ ಒಂದು ಉತ್ತಮ ಸ್ಥಾನದಲ್ಲಿರುವಾಗ ಈ ರೀತಿಯ ನಿಲುವು ಸರಿಯೇ ಎಂದು ಅನೇಕರು ಶನ ಅವರನ್ನು ಪ್ರಶ್ನೆ ಕೇಳಿದ್ದಾರೆ ಆದರೆ ತನ್ನ ಮನಸ್ಸಿಗೆ ಇಷ್ಟ ಬಂದಿದ್ದ ಕೆಲಸವನ್ನು ನಾನು ಮಾಡಿದ್ದೇನೆ ಇದರ ಬಗ್ಗೆ ಯಾವುದೇ ಕೀಳರಿಮೆ ಇಲ್ಲ ಎಂದು ಶನ ಪ್ರತಿಕ್ರಿಯೆ ನೀಡಿದ್ದಾರೆ .

ಈ ವಿಷಯವಾಗಿ ಸ್ಪಷ್ಟನೆ ಕೊಟ್ಟ ಶನ

” ನಾನು ನೂರಕ್ಕೆ ನೂರು ಬದಲಾಗಿದ್ದೇನೆ ಹುಡುಗಿಯ ವೇಷದಲ್ಲಿರುವುದು ನಾನೇ ಫೋಟೋಶಾಪ್ ಮಾಡಿದ್ದಲ್ಲ , ಇಷ್ಟು ದಿನ ನಾನಲ್ಲದ ನಾನಾಗಿ ನಾನು ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ ನಾನು ಈ ದಿನ ಈ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಧೈರ್ಯವನ್ನು ಮಾಡಬೇಕಾಗಿತ್ತು , ಈ ಪ್ರಕ್ರಿಯೆಯಲ್ಲಿ ಸಾಮಾಜಿಕ ಕಟ್ಟುಪಾಡುಗಳನ್ನು ನಾನು ಮೀರಿದವರು ಎಂದು ನನ್ನನ್ನು ಪ್ರೀತಿಸಿದವರು ಎಂದು ಹೇಳಿಕೊಳ್ಳುತ್ತಿದ್ದ ಜನ ಹಾಗೂ ನನ್ನ ಸ್ನೇಹಿತರು ಎಂದೆನಿಸಿಕೊಂಡವರು ನನ್ನನ್ನು ಮಧ್ಯೆಯೇ ಬಿಟ್ಟು ಹೋದರು ಹಾಗೆಯೇ ಪ್ರಾಮಾಣಿಕರಾದ ಹಲವಾರು ಸ್ನೇಹಿತರನ್ನು ನಾನು ಇದೇ ಸಮಯದಲ್ಲಿ ಗಳಿಸಿದೆ ಕೂಡ .

 

ಬಾಲ್ಯದಿಂದಲೂ ನನಗೆ ಇಷ್ಟವಿಲ್ಲದ ಜೀವನವನ್ನು ನಾನು ನಡೆಸುತ್ತೇನೆ ಸಾಮಾಜಿಕ ಕಟ್ಟುಪಾಡುಗಳಿಗೆ ಬದ್ಧಳಾಗಿ ನನಗೆ ಇಷ್ಟವಾದ ಜೀವನವನ್ನು ನಾನು ಬಿಟ್ಟುಕೊಟ್ಟಿದ್ದೇನೆ ಕೆಲವು ದಿನಗಳು ನನಗೆ ನಾನು ಪಟ್ಟ ನೋವು ಹಾಗೂ ಕಷ್ಟಗಳು ಎಷ್ಟೆಂದು ನನಗೆ ಮಾತ್ರ ತಿಳಿದಿದೆ ಹಾಗೂ ಕೆಲವು ನನ್ನ ಸ್ನೇಹಿತರಿಗೆ ಇದರ ಬಗ್ಗೆ ಅರಿವಿದೆ , ಆ ಕಷ್ಟ ಎಂಥದ್ದು ಎಂದು ಅರ್ಥಮಾಡಿಕೊಂಡವರಿಗೆ ಮಾತ್ರ ತಿಳಿಯುತ್ತದೆ ಅಷ್ಟೇ .

ಈ ಸಂಪೂರ್ಣ ಪ್ರಯಾಣದಲ್ಲಿ ಕೆಲವರು ಸಕಾರಾತ್ಮಕವಾಗಿ ನನ್ನ ಜೊತೆಗಿದ್ದರು ಇನ್ನೂ ಹಲವಾರು ಮಂದಿ ಬರೀ ನಕಾರಾತ್ಮಕ ಯೋಚನೆಗಳಲ್ಲಿ ನನ್ನ ಜೊತೆ ಇದ್ದರೂ ಈ ಪ್ರಪಂಚ ಹಾಗೇನೆ ನನ್ನ ನಂಬಿಕೆಗಳು ನನ್ನನ್ನು ಇಷ್ಟು ದೂರ ಕರೆದುಕೊಂಡು ಬಂದಿದೆ ನಾನು ಪಟ್ಟ ಕಷ್ಟಗಳಿಗೆ ಕೊನೆ ಹಾಡಲು ನಾನು  ಇಷ್ಟ ಪಡುತ್ತೇನೆ ಹಾಗೂ ನಾನು ಸಲಿಂಗ ಕಾಮಿಯಲ್ಲ ತಿಳಿಯಿರಿ .

 

ಮಹಿಳೆ ಎಂದರೆ ಕೇವಲ ಮನಸ್ಸಿನ ಸಮತೋಲನ ಪ್ರೀತಿ ಶಕ್ತಿ ಹಾಗೂ ಧೈರ್ಯ ಮಾತ್ರವಲ್ಲ ಆಕೆ ಒಬ್ಬ ಉತ್ತಮ ಮನುಷ್ಯ ದಾಗ ಮಾತ್ರ ಇದಕ್ಕೆ ಅರ್ಥ ದೊರೆಯುತ್ತದೆ .

ನಾನು ನನ್ನದೇ ಆದ ಒಂದು ಪ್ರತಿಷ್ಠಾನವನ್ನು  ರಚಿಸುತ್ತೇನೆ ಆ ಪ್ರತಿಷ್ಠಾನ ಮಹಿಳೆಯರ ಏಳಿಗೆಗಾಗಿ ಶ್ರಮಿಸುತ್ತದೆ , ಯುದ್ಧದಲ್ಲಿ ಸಂತ್ರಸ್ತರಾದ ಮಹಿಳೆಯರಿಗೆ ರೇಪ್ ಅಥವಾ ಇನ್ನಾವುದೇ ಅಪರಾಧದಿಂದ ಸಂತ್ರಸ್ತರಾದ ಮಹಿಳೆಯರಿಗೆ ಸಹಾಯ ಮಾಡಲು ಬಯಸುತ್ತೇನೆ .

 

ಮೊದಲು ಹೇಗೆ ನಾನು ನನ್ನ ಕಾರ್ಗಳನ್ನು ಪ್ರೀತಿಸುತ್ತಿದ್ದೆನೋ ಈಗಲೂ ಸಹ ನನ್ನ ಕಾರುಗಳನ್ನು ಪ್ರೀತಿ ಮಾಡುತ್ತೇನೆ ಈ ಕಥೆ ನಿಮ್ಮೆಲ್ಲರನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ ನಮಗೆ ಯಾವುದು ಇಷ್ಟವೋ ನಮ್ಮ ಬದುಕು ಹೇಗೆ ಇರಬೇಕೆಂದುಕೊಂಡು ನಾವು ಇಷ್ಟಪಡುತ್ತೇವೆ ಹಾಗೆ ನಾವು ಬದುಕಬೇಕು ನನ್ನ ಪಯಣದ ಸಂಗತಿಗಳನ್ನು ಮತ್ತೆ ಹಂಚಿಕೊಳ್ಳುತ್ತೇನೆ .”

ವಿಡಿಯೋ ನೋಡಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top