ಹೆಚ್ಚಿನ

ಪುನೀತ್ ಹೊಸ ಹೇರ್ ಸ್ಟೈಲ್ ಬಗ್ಗೆ ಖ್ಯಾತೆ ತೆಗೆದ ಕನ್ನಡಪರ ಹೋರಾಟಗಾರ ರಮೇಶ್ ಗೌಡ

‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ಅವರು ಅಭಿನಯ ಮಾಡಲಿರುವ ಮುಂದಿನ ಸಿನಿಮಾ ಶೂಟಿಂಗ್ ಇಂದು ಪ್ರಾರಂಭವಾಗಿದೆ. ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಸೃಷ್ಟಿಯಾಗಿದೆ. ರಾಕ್​ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾಗೆ ಸಧ್ಯಕ್ಕೆ ಯಾವ ಟೈಟಲ್ ಅಂತಿಮವಾಗಿಲ್ಲ. ಆದರೆ, ‘ಅಧಿಪತಿ’, ‘ಪಂಜು’ ಮುಂತಾದ ಹೆಸರುಗಳಲ್ಲಿ ಒಂದನ್ನು ಇಡಬಹುದು ಎಂದು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

 

 

ಇನ್ನು ಹೆಸರಿಡದ ಈ ಚಿತ್ರಕ್ಕೆ ಪುನೀತ್ ವಿಭಿನ್ನ ಹೇರ್ ಹೇರ್ ಸ್ಟೈಲ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಪುನೀತ್ ಅವರ ಹೊಸ ಹೇರ್ ಸ್ಟೈಲ್ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಕೆಲವೆಡೆ ಪುನೀತ್ ಅವರ ಹೊಸ ಹೇರ್ ಸ್ಟೈಲ್ ಬಗ್ಗೆ ವಿರೋಧ ವ್ಯಕ್ತವಾಗಿದೆ.

 

 

ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಫೇಸ್ಬುಕ್ ಖಾತೆಯಿಂದ ಪುನೀತ್ ಹೇರ್ ಸ್ಟೈಲ್ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

 

 

“ನಮ್ಮೆಲ್ಲರ ಹೆಮ್ಮೆಯ ಸಾಂಸ್ಕೃತಿಕ ರಾಯಬಾರಿ ಡಾ|| ರಾಜ್ ರ ಹಾದಿಯಲ್ಲಿ ಸಾಗುವ ಭರವಸೆ ಮೂಡಿಸಿದ್ದ , ರಾಜ್ ರ ಹೆಸರನ್ನು ಚಿರಸ್ಥಾಯಿಮಾಡುವ ತಾಕತ್ತುಳ್ಳ ಪುನೀತ್ ಗೆ ಇಂತಹ ಹೇರ್ ಸ್ಟೈಲ್ ಬೇಕಾ. ಸುದೀಪ್ ರನ್ನು ಅನು ಸರಿಸಿದ ಯುವಕರ ದಂಡು ಅರ್ಧ ಕತ್ತರಿಸಿ ಇನ್ನರ್ಧ ಹಾಗೆ ಬಿಟ್ಟಿದ್ದರು. ಇದೀಗ ಪುನೀತ್ ರ ಸರದಿ. ಹೇರ್ ಸ್ಟೈಲ್ ವಯಕ್ತಿಕ ವಿಚಾರವೇ ಅಗಿದ್ದರೂ ನಿಮ್ಮಲ್ಲೊಬ್ಬ ರಾಜ್ ಇದ್ದಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ಸ್ಟಾರ್ ವಾರ್ ಬಿಟ್ಟು ನೈಜ ನಾಯಕನಾಗುವ ಎಲ್ಲಾ ಅರ್ಹತೆ ನಿಮಗಿದೆ . ಸಿನಿಮಾ, ನಟನೆಯಲ್ಲಿ ಓ.ಕೆ. , ನಿಮ್ಮ ನಿಜಜೀವನದಲ್ಲಿ ಇದೆಲ್ಲಾ ಬೇಕೆ….?” ಎಂದು ಅವರು ಬರೆದಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top