ಸಮಾಚಾರ

ಕನ್ನಡಿಗರನ್ನು ಕಡೆಗಣಿಸಿ ಕೊನೆಗೂ ಮಲಯಾಳಿ ರಾಜೀವ್’ಗೆ ಮಣೆ ಹಾಕಿದ ಬಿಜೆಪಿ..

ಕಳೆದ 12 ವರ್ಷಗಳಿಂದ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕೇರಳದ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರನ್ನು ಕರ್ನಾಟಕ ರಾಜ್ಯದಿಂದ ಮತ್ತೂಂದು ಅವಧಿಗೆ ಭಾರತೀಯ ಜನತಾ ಪಾರ್ಟಿ ಆಯ್ಕೆ ಮಾಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಬಿಜೆಪಿ ಟಿಕೆಟ್ ಘೋಷಣೆಗೆ ಕೊನೆಗೂ ತೆರೆಬಿದ್ದಿದ್ದು, ಕನ್ನಡಿಗರ ವಿರೋಧದ ನಡುವೆಯೂ ಕೇರಳದ ರಾಜೀವ್ ಚಂದ್ರಶೇಖರ್’ಗೆ ಬಿಜೆಪಿ ಟಿಕೆಟ್ ನೀಡಿದೆ.

 

 

ಇತ್ತ ಕಾಂಗ್ರೆಸ್ ಪಕ್ಷ ಕನ್ನಡಿಗರನ್ನೇ ರಾಜ್ಯಸಭೆಗೆ ಅಭ್ಯರ್ಥಿಗಳಾಗಿ ಆಯ್ಕೆ ಮಾಡಿದ್ದು ನಾಸಿರ್ ಹುಸೇನ್, ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್ ಅವರುಗಳನ್ನು ರಾಜ್ಯಸಭೆ ಚುನಾವಣಾ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.

ಇನ್ನು ಕೆಲವು ದಿನಗಳ ಹಿಂದೆಯಷ್ಟೇ ಕನ್ನಡಿಗನಲ್ಲದ ಕೇರಳದ ಉದ್ಯಮಿ ರಾಜೀವ್ ಚಂದ್ರಶೇಖರ್’ಗೆ ರಾಜ್ಯಸಭಾ ಟಿಕೆಟ್ ನೀಡಬಾರದು ಎಂದು ಅವರ ವಿರುದ್ಧ “ರಾಜೀವ್ ಬೇಡ” #RajeevBeda ಟ್ವಿಟರ್ ಅಭಿಯಾನವನ್ನ ಕನ್ನಡಿಗರು ಮಾಡಿದ್ದರು. ಆದರೆ ಕನ್ನಡಿಗರ ಮಾತಿಗೆ ಎಳ್ಳಷ್ಟೂ ಬೆಲೆ ನೀಡದೆ ಬೇರೆ ರಾಜ್ಯದವರಿಗೆ ಟಿಕೆಟ್ ನೀಡಿದ ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಆಕ್ರೋಶ ಭುಗಿಲೆದ್ದಿದ್ದು ಮುಂಬರುವ ಚುನಾವಣೆಯಲ್ಲಿ ರಾಜೀವ್ ವಿಚಾರ ಪಕ್ಷಕ್ಕೆ ನಕರಾತ್ಮಕ ಪರಿಣಾಮ ಬೀರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

 

 

ಉಂಡು ಹೋದ, ಕೊಂಡೂ ಹೋದ ಎಂಬ ಗಾದೆಯಂತೆ ರಾಜ್ಯಸಭೆ ಚುನಾವಣೆಗೆ ಮಾತ್ರ ಹಾಜರಾಗಿ, ಗೆದ್ದ ನಂತರ ಕರ್ನಾಟಕದ ಉಸಾಬರಿಗೆ ಬರದ ಮಲೆಯಾಳಿ ಅಸಾಮಿಯ ವರ್ತನೆಯಿಂದ ಕನ್ನಡಿಗರು ಬೇಸತ್ತಿರುವ ಕನ್ನಡಿಗರು ಈ ಭಾರಿ ನಮ್ಮ ನೆಲದ ವ್ಯಕ್ತಿಗಳನ್ನ ಆಯ್ಕೆ ಮಾಡುವ ಇರಾದೆ ಇಟ್ಟುಕೊಂಡಿದ್ದರು ಆದರೆ ಕನ್ನಡಿಗರನ್ನು ಕಡೆಗಣಿಸಿ ಕೊನೆಗೂ ಮಲಯಾಳಿ ರಾಜೀವ್’ಗೆ ಬಿಜೆಪಿ ಮಣೆಹಾಕಿದೆ..

ವಿಧಾನ ‍ಪರಿಷತ್‌ ಮಾಜಿ ಸದಸ್ಯ ಎನ್‌. ಶಂಕರಪ್ಪ,, ವಿ.ಆರ್.ಎಲ್ ಮುಖ್ಯಸ್ಥ ವಿಜಯ ಸಂಕೇಶ್ವರ್,ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ ಅವರ ಹೆಸರುಗಳು ಕೂಡ ಬಿಜೆಪಿ ರಾಜ್ಯಸಭೆಗೆ ಆಯ್ಕೆಮಾಡುವ ಲಿಸ್ಟ್ ನಲ್ಲಿ ಇದ್ದರು. ಆದರೆ ಅಂತಿಮವಾಗಿ ಕನ್ನಡಿಗರನ್ನು ಹಿಮ್ಮೆಟ್ಟಿ ಮಲಯಾಳಿ ರಾಜೀವ್ ಚಂದ್ರಶೇಖರ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top