ದೇವರು

ಅವತ್ತು ದ್ವಾಪರಯುಗದಲ್ಲಿ ಶ್ರೀ ಕೃಷ್ಣ ಪಾಂಡವರಿಗೆ ಹೇಳಿದ 4 ಕಲಿಯುಗದ ರಹಸ್ಯಗಳು ತಿಳ್ಕೊಂಡ್ರೆ ನೀವು ಕೂಡ 100% ನಿಜ ಅಂತೀರಾ

ಪಾಂಡವರಿಗೆ ಕಲಿಯುಗದ ರಹಸ್ಯಗಳನ್ನು ಶ್ರೀ ಕೃಷ್ಣನು ದ್ವಾಪರಯುಗದಲ್ಲಿಯೇ ಹೇಳಿದ್ದನಂತೆ.

 

 

ಶ್ರೀಕೃಷ್ಣನು ಈಗ ನಾವು ಜೀವಿಸುತ್ತಿರುವಂತೆ ಕಲಿಯುಗದಲ್ಲಿ ಏನೇನು ಜರುಗುತ್ತವೆ ಎಂಬುದನ್ನು ಹೇಳಿದ್ದಾನೆ.  ದ್ವಾಪರ ಯುಗದಲ್ಲಿ ಶ್ರೀಕೃಷ್ಣನು ಈಗ ನಾವು ತಿಳಿಸುತ್ತಿರುವ ಜೀವಿಸುತ್ತಿರುವ ಕಲಿಯುಗದ ಬಗ್ಗೆ ಕಠೋರವಾದ ಸತ್ಯಾಂಶಗಳನ್ನು ವಿವರಿಸಿದ್ದಾನೆ.ಮಹಾಭಾರತ ಮುಗಿಯಿತು,ಹಸ್ತಿನಾಪುರ ಪಾಂಡವರ ಹಸ್ತಗತವಾಯಿತು.

 

 

ಧರ್ಮರಾಜನು ಇಲ್ಲದೇ ಇರುವ ಸಮಯದಲ್ಲಿ ಪಾಂಡವರು ನಾಲ್ಕು ಜನ ಅಂದರೆ ಅರ್ಜುನ, ಭೀಮ, ನಕುಲ, ಸಹದೇವ ಶ್ರೀ ಕೃಷ್ಣನ ಬಳಿ ಬಂದು ಕಲಿಯುಗದಲ್ಲಿ ಏನೇನು ಜರುಗುತ್ತದೆ ? ಹೇಗಿರುತ್ತದೆ ಕಲಿಯುಗ  ಎಂದು ಪ್ರಶ್ನೆಗಳನ್ನು ಕೇಳಿದರು. ಆಗ ಶ್ರೀ ಕೃಷ್ಣನು ಕಲಿಯುಗದ ಬಗ್ಗೆ ತಿಳಿಯಬೇಕಾದರೆ ಮೊದಲು ನಾನು ಈ ನಾಲ್ಕು ಬಾಣಗಳನ್ನು ನಾಲ್ಕು ದಿಕ್ಕಿನಲಿಯೂ ಬಿಡುತ್ತೇನೆ ನೀವು ಆ ದಿಕ್ಕುಗಳಲ್ಲಿಯೇ ಹೋಗಿ ಅಲ್ಲಿ ಕಂಡ ವಿಚಿತ್ರಗಳನ್ನು ಬಂದು ನನಗೆ ಹೇಳಿದರೆ,

ನಂತರ ನಾನು ನಿಮಗೆ ಕಲಿಯುಗದ  ಬಗ್ಗೆ ಸವಿಸ್ತಾರವಾಗಿ ಹೇಳುತ್ತೇನೆ ಎಂದು ಹೇಳಿದನು. ಹೇಳಿದ ತಕ್ಷಣವೇ ಬಾಣಗಳನ್ನು ತೆಗೆದು ನಾಲ್ಕು ದಿಕ್ಕುಗಳಿಗೂ ಬಿಡುತ್ತಾನೆ. ಒಂದು ದಿಕ್ಕಿಗೆ ಅರ್ಜುನ ,ಮತ್ತೊಂದು ದಿಕ್ಕಿಗೆ ಭೀಮ ,ಮತ್ತೊಂದು ದಿಕ್ಕಿಗೆ ನಕುಲ, ಇನ್ನೊಂದು ದಿಕ್ಕಿಗೆ  ಸಹದೇವ ಒಂದೊಂದು ದಿಕ್ಕಿಗೆ ಸಾಗಿದರು.

 

 

ಅರ್ಜುನ ಸಾಗಿದ ದಿಕ್ಕಿನ ಕಡೆಗೆ ಒಂದು ಮಧುರವಾದ ಕಂಠದಿಂದ  ಕೋಗಿಲೆ ಹಾಡುತ್ತಿರುವುದನ್ನು  ಅರ್ಜುನ ಆದರೆ ಅದೇ ಕೋಗಿಲೆ ಜೀವಂತವಾಗಿರುವ  ಮೊಲವನ್ನು ತನ್ನ ಕೊಕ್ಕಿನಿಂದ ಚುಚ್ಚಿ  ತ್ತಿನ್ನುತ್ತಿರುವುದನ್ನು ನೋಡಿ ದಿಗ್ಭ್ರಮೆಗೊಂಡು ಆಶ್ಚರ್ಯ ಬರಿತನಾಗಿ ಹಿಂತಿರುಗುತ್ತಾನೆ.

ಮುಂದೆ ಭೀಮನು ಮತ್ತೊಂದು ದೇಶಕ್ಕೆ ಸಾಗುವಲ್ಲಿ ಆತನ ಐದು ಬಾವಿಗಳು ಒಂದೇ  ಸಾಲಿನಲ್ಲಿ ಇರುವುದನ್ನು ಕಂಡು ನಾಲ್ಕು ಬಾವಿಗಳು ನೀರು ತುಂಬಿ ತುಳುಕುತ್ತಿದ್ದರೆ,   ಒಂದು ಬಾವಿ ಮಾತ್ರ ಒಂದು ತೊಟ್ಟು  ನೀರಿಲ್ಲದೆ ಮಧ್ಯದಲ್ಲಿ ಇರುವ ಬಾವಿ ಒಣಗಿ ಹೋಗಿರುವುದನ್ನು ಕಾಣುತ್ತಾನೆ ಭೀಮ.

ಮುಂದೆ ನಕುಲನು ಸಹ ಮತ್ತೊಂದು ದಿಶೆಯಲ್ಲಿ ಸಾಗುತ್ತಿರುವಾಗ ಆಗಲೇ ಕರುವಿಗೆ ಜನ್ಮ ನೀಡಿದ ಹಸುವು, ಆ ಕರುವಿನ ಮೈ ಮೇಲಿನ ರಕ್ತವನ್ನು  ನೆಕ್ಕುತ್ತಾ ಇರುವುದನ್ನು ಕಾಣುತ್ತಾನೆ, ಆದು ಎಷ್ಟರವರೆಗೆ ನೆಕ್ಕುತ್ತಾ ಇದೆ ಅಂದರೆ  ಆಗ ತಾನೇ ಹುಟ್ಟಿದ  ಕರುವಿನ ಚರ್ಮ ಮಾಂಸ ಮೇಲೆ ಬರುವಷ್ಟರವರೆಗೆ ನೆಕ್ಕುತ್ತಾಯಿದೆ.  ಸುತ್ತಲಿನ ಜನ ಅವೆರಡನ್ನು ಬೇರ್ಪಡಿಸುತ್ತಿರುವುದನ್ನು  ನಕುಲನು  ಕಂಡು ಆಶ್ಚರ್ಯ ಬರಿತನಾಗಿ ಹೌಹಾರಿ ನಕುಲನು  ಕೃಷ್ಣನ ಬಳಿ ಬರುತ್ತಾನೆ.

 

 

ಮುಂದೆ ಸಹದೇವನು ಕೂಡ ಮತ್ತೊಂದು ವಿಚಿತ್ರವನ್ನು ಕಾಣುತ್ತಾನೆ. ಒಂದು ದೊಡ್ಡ ಪರ್ವತದ ಮೇಲಿಂದ ದೊಡ್ಡ ಬಂಡೆಯೊಂದು ಉರುಳುತ್ತಾ ಬರುತ್ತಾ ಇದೆ. ಆ ಉರುಳುತ್ತಾ  ಬರುತ್ತಿರುವ ಬಂಡೆಯು ಗಿಡ, ಮರ ಹೆಮ್ಮರಗಳನ್ನು ದಾಟಿಕೊಂಡು ನಾಶ ಪಡಿಸುತ್ತಾ ಮುಂದಕ್ಕೆ ಹಾಗೆ ಮುನ್ನುಗ್ಗುತ್ತಿರುವ ದೊಡ್ಡ ಪರ್ವತದ ಬಂಡೆ ಒಂದು ಚಿಕ್ಕದಾದ ಒಂದು ಸಸ್ಯದ ಬಳಿ ಬಂದು ನಿಂತುಬಿಟ್ಟಿದೆ.  ಅದನ್ನು ಕಂಡು ಸಹದೇವನು ಆಶ್ಚರ್ಯಭರಿತನಾಗಿ,ಕೃಷ್ಣನ ಬಳಿ  ಬಂದು ತಾವು ಕಂಡ ವಿಚಿತ್ರವನ್ನು  ಹೇಳುತ್ತಾರೆ ಅ ನಾಲ್ಕು ಜನ.

 

ಆಗ ಶ್ರೀ ಕೃಷ್ಣನು ಕಲಿಯುಗದಲ್ಲಿ ಮಾನವನ ಅಧಃಪತನ ಹೇಗೆ ಹೇಗೆ ಇರುತ್ತದೆ ಎಂಬುದನ್ನು ಹೇಳುತ್ತಾನೆ.

 

ನೀನು ಕಂಡ ಕೋಗಿಲೆ ಮೊಲದ ಪ್ರಸಂಗದಿಂದ ವಿಧ್ಯಾವಂತರು, ಪಂಡಿತರು, ಸಾಮಾನ್ಯ ಜನರನ್ನು  ನಾನ ಸಮಸ್ಯೆಗಳಿಗೆ ಗುರಿ ಮಾಡಿ ಅವರಿಂದ ಪ್ರಾಣ ಹರಣ ಮಾಡಿಕೊಳ್ತಾರೆ . ಅವರನ್ನು ಚುಚ್ಚಿಚುಚ್ಚಿ ತಿಂದು ಅವರನ್ನು ನಾಶಪಡಿಸುತ್ತಾರೆ ಎಂದು ಹೇಳಿದನು.

ಇನ್ನು ಭೀಮನು ಕಂಡ  ಬಾವಿಯಿಂದ  ಕಲಿಯುಗದಲ್ಲಿ ತಮ್ಮ ಮಕ್ಕಳಿಗೆ ಕೋಟಿ ಕೋಟಿ ಗಟ್ಟಲೇ ಹಣವನ್ನು ಸುರಿದು ಮದುವೆ ಮುಂಜಿಗಳಂತಹ ಕಾರ್ಯಗಳನ್ನು ಮಾಡುತ್ತಾರೆ. ಆದರೆ  ಪಕ್ಕದಲ್ಲಿ ಇರುವ ಕಡು ಬಡವರನ್ನು,  ಹಸಿದವರನ್ನು ಇವರು ಕಡೆಗಣಿಸುತ್ತಾರೆ. ಕಲಿಯುಗದಲ್ಲಿ ಮದ್ಯಪಾನ, ಧೂಮಪಾನ ದಂತಹ ಕೆಟ್ಟ ದುರಾಭ್ಯಾಸಗಳು ಹೆಚ್ಚಾಗಿ ತಿಂದು, ಉಂಡು ಜೀವನ ಸಾಗಿಸುವುದೇ ಗುರಿಯಾಗಿ ಇಟ್ಟುಕೊಂಡಿರುತ್ತಾರೆ ಜನರು. ನೋವು, ಕಷ್ಟಗಳನ್ನು ಹಂಚಿಕೊಳ್ಳುವ ಸದಾಲೋಚನೆ ಮಾಡುವುದಿಲ್ಲ ಎಂದು ಹೇಳುತ್ತಾನೆ  ಕೃಷ್ಣ.

 

 

ಮುಂದೆ ನಕುಲನು  ಹೇಳಿದ ಆಕಳು ಕರುವಿನ ವಿಷಯವನ್ನು ತಿಳಿದುಕೊಂಡು ,ಕಲಿಯುಗದಲ್ಲಿ ಮಾತಾ ,ಪಿತೃಗಳನ್ನು  ತಮ್ಮ ತಮ್ಮ ಮಕ್ಕಳನ್ನು ಅಮಿತವಾಗಿ ಅಂದರೆ  ಎಷ್ಟು ಮಿತಿಮೀರಿ  ಪ್ರೀತಿಸುತ್ತಾರೆ ಎಂದರೆ ಆ ಆಕ್ಕರೆಯ ಅಡಿಯಲ್ಲಿ ಮಕ್ಕಳ ಭವಿಷ್ಯ ವಿಕಾಸ ಹೊಂದದೆ   ನಾಶ ಹೊಂದುತ್ತಾರೆ. ಅವರ ಜೀವನವೇ ಹಾಳಾಗುತ್ತದೆ ಎಂದು ಹೇಳುತ್ತಾನೆ. ಇನ್ನೂ ಬೇರೆಯವರ ಮಕ್ಕಳು ಸಾಧು ಸಂತರಾದರೆ  ಹೋಗಿ ಪೂಜೆ ಮಾಡುತ್ತಾರೆ.  ಅದೇ ತಮ್ಮ ಮಕ್ಕಳು ಸಾಧು ಸಂತರಾದರೆ ಸಮಾಜ ಸೇವೆ ಮಾಡಿದರೆ ಅಳುತ್ತಾರೆ ಜನರು.

ಇನ್ನು ಸಹದೇವನು ಹೇಳಿದ ವೃತ್ತಾಂತದಿಂದ ಮಾನವನ ಅಧಪತನ ಕಲಿಯುಗದಲ್ಲಿ   ಆರಂಭವಾಗುತ್ತದೆ. ಎಷ್ಟೇ ಸಿರಿ ಸಂಪತ್ತು ಬಂದರು  ಏನಾದರೂ ಆಗಲಿ  ಒಂದೇ ಒಂದು ಚಿಕ್ಕ ಸ್ಮರಣೆ ಮಾತ್ರ ಅವನನ್ನು ಕಾಪಾಡುತ್ತದೆ. ಎಷ್ಟೇ ಸಂಪತ್ತು ಬಂದರು ಇವೆಲ್ಲವೂ ಗೌಣವಾಗಿ ಒಂದೊಂದೇ ನಾಶವಾಗುತ್ತವೆ. ಆದರೆ ಕೊನೆಗೆ ಒಂದೇ ಒಂದು ಹರಿನಾಮ ಸ್ಮರಣೆ ಮಾತ್ರ ಮಾನವನನ್ನು  ಬಂಧನದಿಂದ ಕಾಪಾಡುತ್ತದೆ. ಅದೇ  ಆ ಪರ್ವತದಿಂದ ಉರುಳಿದ ಬಂಡೆಯ ವೃತ್ತಾಂತದಿಂದ ತಿಳಿಯಬೇಕಾದರೆ ರಹಸ್ಯ  ಎಂದು ಹೇಳಿದನು. ಹೀಗೆ ಈ ನಾಲ್ಕು ಉದಾಹರಣೆಗಳಿಂದ ಕಲಿಯುಗದಲ್ಲಿ ಹೇಗೆಲ್ಲ ಜೀವನ ನಡೆಯುತ್ತದೆ, ಎನ್ನುವುದನ್ನು ವಿಸ್ತಾರವಾಗಿ ತಿಳಿಸಿದ್ದಾನೆ ಶ್ರೀ ಕೃಷ್ಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top