fbpx
ಕಿರುತೆರೆ

ಚಿಟ್ಟೆ ವಸಿಷ್ಠನಿಗೆ ಪ್ರಸ್ತುತದ ಈ ಸ್ಯಾಂಡಲ್ ವುಡ್ ನಟ ಫೆವರೇಟ್ ಅಂತೇ?

ತನ್ನ ಗಡುಸಾದ ಧ್ವನಿಯಲ್ಲಿಯೇ ತೆರೆ ಮೇಲೆ ಸಿಂಹದ ರೀತಿ ಘರ್ಜಿಸುವ ಪ್ರತಿಭಾನ್ವಿತ ನಟ ವಸಿಷ್ಠ ಸಿಂಹ ಬಹುತೇಕ ಎಲ್ಲರಿಗೂ ಇಷ್ಟವಾಗುತ್ತಾರೆ. ಆದರೆ ಈಗಿನ ನಟರುಗಳಲ್ಲಿ ಅವರಿಗೆ ಯಾರು ಇಷ್ಟ ಗೊತ್ತಾ? ಪ್ರಸ್ತುತದಲ್ಲಿ ತಮ್ಮ ಫೆವರೇಟ್ ಹೀರೊ ಯಾರು ಎಂಬ ವಿಷಯವನ್ನು ವಿಶಿಷ್ಟ ಸಿಂಹ ಬಿಚ್ಚಿಟ್ಟಿದ್ದಾರೆ. .ಶಿವಣ್ಣ ನಡೆಸಿಕೊಡುತ್ತಿರುವ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಮೂಡಿಬರುತ್ತಿರುವ ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ನೆನ್ನೆಯ ಸಂಚಿಕೆಯಲ್ಲಿ ನಟ ಧನಂಜಯ್, ವಸಿಷ್ಠ ಮತ್ತು ನಟಿ ಮಾನ್ವಿತಾ ಕಾಮತ್ ಅಥಿತಿಗಳಾಗಿ ಭಾಗಿಯಾಗಿದ್ದರು..

 

 

ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಧನಂಜಯ್ ಮತ್ತು ವಸಿಷ್ಠಗೆ ಮೂರು ಸುತ್ತುಗಳಲ್ಲಿಯೂ ವಿಧ ವಿಧವಾದ ಪ್ರಶ್ನೆಗಳನ್ನು ಕೇಳಿ ಅವರಿಂದ ಸೊಗಸಾಗಿ ಉತ್ತರಗಳನ್ನ ಪಡೆದುಕೊಂಡರು.. ಅಂತೆಯೇ ಕಾರ್ಯಕ್ರಮದ ಎರಡನೇ ಸುತ್ತಿನಲ್ಲಿ ಎಂದಿನಂತೆ ಎಷ್ಟರ ಮಟ್ಟಿಗೆ ಧನಂಜಯ್ ಮತ್ತು ವಸಿಷ್ಠ ನಡುವಿನ ಸ್ನೇಹ ಇದೆ ಎಂಬ ಪರೀಕ್ಷೆಗೆ ಶಿವಣ್ಣ ಮುಂದಾದರು. ಅದರ ಅನ್ವಯ ಧನಂಜಯ್ ಕುರಿತು ವಸಿಷ್ಠಗೆ, ಅದೇ ರೀತಿ ವಸಿಷ್ಠ ಕುರಿತು ಧನಂಜಯ್ ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಲಾಯಿತು..ಪ್ರಶ್ನೆಯನ್ನು ಕೇಳಿದಾಗ ಒಬ್ಬರು ಉತ್ತರ ನೀಡಬೇಕು ಮತ್ತೊಬ್ಬರು ಅವರ ಉತ್ತರವನ್ನು ಬೋರ್ಡ್ ನಲ್ಲಿ ಬರೆದು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕು. ಕೊಟ್ಟ ಉತ್ತರ ಮತ್ತು ಬರೆದಿದ್ದ ಉತ್ತರ ಎರಡು ಒಂದೇ ರೀತಿ ಇದ್ದರೆ ಆತ ತನ್ನ ಸ್ನೇಹಿತನನ್ನು ಚನ್ನಾಗಿ ತಿಳಿದುಕೊಂಡಿದ್ದಾನೆ ಎಂದರ್ಥ..

 

 

ಶಿವಣ್ಣ” ಈಗಿನ ನಟರುಗಳಲ್ಲಿ ವಸಿಷ್ಠನ ಫೆವರೇಟ್ ಹೀರೊ ಯಾರು?” ಎಂಬ ಪ್ರಶ್ನೆಯನ್ನು ಧನಂಜಯ್’ಗೆ ಕೇಳಿದರು ಅದಕ್ಕೆ ಧನಂಜಯ್ “ಶಿವಣ್ಣ” ಎಂದು ಉತ್ತರಿಸಿದರು ಆದರೆ ಧನಂಜಯ್ ಕೊಟ್ಟ ಉತ್ತರ ತಪ್ಪಾಗಿತ್ತು. ಯಾಕೆಂದರೆ ವಸಿಷ್ಠ ತಮ್ಮ ಬೋರ್ಡ್ ನಲ್ಲಿ “ಸುದೀಪ್” ಎಂದು ಬರೆದಿದ್ದರು. ಅಲ್ಲಿಗೆ ಚಿಟ್ಟೆ ವಸಿಷ್ಠನ ಫೆವರೇಟ್ ಹೀರೋ ಸುದೀಪ್ ಎಂಬ ವಿಚಾರ ಗೊತ್ತಾಯಿತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top