ದೇವರು

ಚರ್ಮ ರೋಗಗಳು ಹಾಗು ಹಣ ಕಾಸಿನ ತೊಂದರೆಯಿಂದ ನರಳುತ್ತಿದ್ದರೆ ಬಿಳಿ ಅನ್ನದಿಂದ ಈ ಪರಿಹಾರಗಳನ್ನು ಮಾಡಿದರೆ ಒಳ್ಳೆಯ ದಿನಗಳು ಬರುತ್ತವೆ

ಶಾಸ್ತ್ರದ ಪ್ರಕಾರ ಬಿಳಿ ಅನ್ನದಿಂದ ಹೀಗೆ ಕೆಲವು ಪರಿಹಾರಗಳನ್ನು  ಮಾಡಿದರೆ ಕಷ್ಟಗಳು ದೂರವಾಗಿ ಅದೃಷ್ಟ ನಿಮ್ಮದಾಗುತ್ತದೆ.

 

ನಾವು ನಮ್ಮ ಜೀವನದಲ್ಲಿ ಆನಂದದಿಂದ,ಸಂತೋಷದಿಂದ, ಸುಖವಾದ ಜೀವನ ನಡೆಸಬೇಕೆಂದರೆ ಹಾಗೂ ನಮ್ಮ ಕುಟುಂಬದ ಸದಸ್ಯರು ನಮ್ಮನ್ನು ನಂಬಿಕೊಂಡು ಬದುಕುತ್ತಿರುವ ಎಲ್ಲರೂ ಚೆನ್ನಾಗಿರಬೇಕೆಂದು ನಾವು ಆಶಿಸುತ್ತೇವೆ. ಇದಕ್ಕಾಗಿ ನಾವು ದಿನವೂ ಹೋರಾಡುತ್ತೇವೆ. ಈ ನಿಟ್ಟಿನಲ್ಲಿ ಯಾವುದೇ ಅಡ್ಡಿ, ಆತಂಕಗಳು ಬಂದರೂ ನಾವು ನಮ್ಮ ಕೆಲಸವನ್ನು ಮಾಡುತ್ತಲೇ ಇರುತ್ತೇವೆ. ಹೀಗೆ ಮಾಡಿದಾಗಲೇ ಒಂದಲ್ಲ ಒಂದು ದಿನ ಏನನ್ನಾದರೂ ಸಾಧಿಸಲು ಅಥವಾ ಸಾಧಿಸುವ ಅವಕಾಶ ನಮಗೆ ಸಿಗುತ್ತದೆ.

 

 

“ಅನ್ನಂ ಪರಬ್ರಹ್ಮ ಸ್ವರೂಪಂ” ಎಂದರೆ ಅನ್ನ ಪರಬ್ರಹ್ಮ ಸ್ವರೂಪ ಎಂದು ಹೇಳುತ್ತಾರೆ. ಬಿಳಿ ಅನ್ನದಿಂದ ಮಾಡುವ ಪೂಜೆಗಳು ಅನೇಕ ಶುಭ ಫಲಗಳನ್ನು ನೀಡುತ್ತವೆ ಎಂದು ಆಧ್ಯಾತ್ಮಿಕ ಪಂಡಿತರು ಹೇಳುತ್ತಾರೆ. ಎಲ್ಲ ದಾನಗಳಿಗಿಂತ ಅನ್ನದಾನ ಶ್ರೇಷ್ಠದಾನ. ಆoತಹ  ಅನ್ನದಿಂದ ಭಗವಂತನನ್ನು ಹೇಗೆ ಪೂಜೆ ಮಾಡಬೇಕು ? ಎಂದು ತಿಳಿದುಕೊಳ್ಳಿ

ಬಿಳಿ ಅನ್ನದಿಂದ ಶಿವಲಿಂಗವನ್ನು ಮಾಡಿ ಪೂಜಿಸಿ, ನೀರಿನಲ್ಲಿ ತೇಲಿ ಬಿಟ್ಟರೆ, ಹಣದ ಕೊರತೆ ಎದುರಾಗುವುದಿಲ್ಲ. ಎಷ್ಟೇ ಕಷ್ಟಗಳಿದ್ದರೂ, ಎಷ್ಟೇ ಬಡತನವಿದ್ದರೂ ನಿವಾರಣೆಯಾಗುತ್ತದೆ.

 

 

ಅನ್ನವನ್ನು ದೇವರಿಗೆ ನೈವೇದ್ಯ ಮಾಡಿ ,ಪ್ರಸಾದವನ್ನು ಹಸುಗಳಿಗೆ ತಿನ್ನಿಸಿದರೆ, ಅವಿವಾಹಿತರಿಗೆ ತಾಂಬೂಲ ಕೊಟ್ಟು ನಮಸ್ಕರಿಸಿದರೆ, ಬರಬೇಕಾಗಿರುವ ಹಣ ನಮಗೆ ಬೇಗನೆ ಬರುತ್ತದೆ.

 

 

ಅನ್ನಕ್ಕೆ ಜೇನು ತುಪ್ಪವನ್ನು ಕಲಸಿ, ಅದನ್ನು ನೈವೇದ್ಯವಾಗಿ ಸಮರ್ಪಿಸಿದರೆ, ಎಲ್ಲಾ ತರಹದ ಚರ್ಮ ರೋಗಗಳು ದೂರವಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

 

 

ಇನ್ನು ಬಿಳಿ ಅನ್ನಕ್ಕೆ, ಕಪ್ಪು ಎಳ್ಳನ್ನು ಬೆರೆಸಿ, ಅದನ್ನು ಶನೈಶ್ಚರ  ದೇವನಿಗೆ ನೈವೇದ್ಯವಾಗಿ ಸಮರ್ಪಿಸಿದ ನಂತರ ಕಾಗೆಗಳಿಗೆ ಅದನ್ನು ಇಟ್ಟರೆ ಪಿತೃ ದೇವತೆಗಳ ಶಾಪಗಳೆಲ್ಲ ನಿವಾರಣೆಯಾಗುತ್ತವೆ.

 

 

ಬಿಳಿ ಅನ್ನಕ್ಕೆ ಸ್ವಲ್ಪ ಜೇನು ತುಪ್ಪ ಮತ್ತು ಸಕ್ಕರೆ, ಅಡುಗೆಗೆ ಬಳಸುವ ಕೊಬ್ಬರಿ ಎಣ್ಣೆ ಸೇರಿಸಿ, ಆ ಅನ್ನವನ್ನು ದೇವತೆಗಳಿಗೆ ನೈವೇದ್ಯವಾಗಿ ಸಮರ್ಪಿಸಿದರೆ  ಅದನ್ನು ದಾನ ಮಾಡಿದರೆ ಸಕಲ ರೋಗಗಳು ವಾಸಿಯಾಗುತ್ತವೆ ಎಂದು ಆಧ್ಯಾತ್ಮಿಕ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top