ವಿಶೇಷ

ಮದುವೆಯಾದ ಗಂಡ ಹೆಂಡತಿ ಮತ್ತೆ ಪ್ರೀತಿಲಿ ಬಿದ್ದ ಹೈಕ್ಳು ಜೀವನದಲ್ಲಿ ಅನ್ಯೋನ್ಯವಾಗಿರ್ಬೇಕು ಅಂದ್ರೆ ಈ 9 ಸೂತ್ರಗಳನ್ನು ಅವಶ್ಯಕವಾಗಿ ಪಾಲಿಸಿ ಸಾಕು

ಹಿರಿಯರು ಹೇಳಿರುವ ಈ ಒಂಬತ್ತು ಸಂಸಾರದ ಸೂತ್ರಗಳು ಎಲ್ಲರಿಗೂ ತಿಳಿದಿರಬೇಕು. ಆಗ ಸಂಸಾರ ಎನ್ನುವ ದೋಣಿ ಸುಗಮವಾಗಿ ಸಾಗಬೇಕು.

 

 

1.ನೀವು ಒಳ್ಳೆಯವರಾಗಿದ್ದರೆ  ಪ್ರಪಂಚವು ನಿಮ್ಮ ಪಾಲಿಗೆ ಒಳ್ಳೆಯದೇ ಆಗಿರುತ್ತದೆ.

 

ಒಂದು ಸಂಬಂಧದ ವಿಚಾರಕ್ಕೆ ಬಂದಾಗ, ಆ ಸಂಬಂಧಕ್ಕೆ ಸಂಬಂಧ ಪಟ್ಟಿರುವ ಇಬ್ಬರು ವ್ಯಕ್ತಿಗಳ ಮದ್ಯೆ,ಮಾತುಕತೆ,ಸಂಪರ್ಕ ಇರುವುದು ಬಹಳ ಮುಖ್ಯ. ಇಷ್ಟಾದರೂ ಅವರಿಬ್ಬರ ಮದ್ಯೆ ಒಳ್ಳೆಯತನ ಇಲ್ಲ ಅಂದರೆ ಎಲ್ಲವೂ ವ್ಯರ್ಥ.

 

2.ಮನಸ್ಸಿಗೆ ಹಿತವಾಗುವ ಪದಗಳನ್ನು ಬಳಸಿದರೆ ಸಣ್ಣ ಪುಟ್ಟ ಜಗಳಗಳು ಆದರೂ ಬೇಗನೇ ಸರಿಹೋಗುತ್ತದೆ.

 

 

ಏನೇ ಆದರೂ ಒಳ್ಳೆಯ ಮಾತನಾಡಿ. ಒಬ್ಬರಿಗೊಬ್ಬರು ಮರ್ಯಾದೆ ಕೊಟ್ಟು ಮರ್ಯಾದೆ ತೆಗೆದುಕೊಳ್ಳುವುದು ಮಾಡಿದರೆ ಜೀವನ ಸಮರಸವಾಗಿರುತ್ತದೆ. ಚಿಕ್ಕ ಚಿಕ್ಕ ಮನಸ್ಥಾಪಗಳು ಸರಿ ಹೋಗುತ್ತವೆ. ಆಷ್ಟಾಗಿ ದೊಡ್ಡದಾಗುವುದಿಲ್ಲ.

 

3.ನಿಮ್ಮ ಮದ್ಯೆ ಆಗುವ ಜಗಳವನ್ನು ಊರಿಗೆಲ್ಲ ಗೊತ್ತಾಗುವ ಹಾಗೆ ಮಾಡುವುದಕ್ಕೆ ಹೋಗಬೇಡಿ.

 

ನಿಮ್ಮಿಬ್ಬರ ಮದ್ಯೆ ಅದೇನೇ ಮನಸ್ತಾಪ ಇದ್ದರು. ಅವೆಲ್ಲಾ ನಿಮ್ಮಿಬ್ಬರ ಮದ್ಯೆಯೇ ಇದ್ದರೆ ಒಳ್ಳೆಯದು. ಆದನ್ನು ಬಿಟ್ಟು ನಿಮ್ಮಿಬ್ಬರ ಮದ್ಯೆ ನೆಡೆದಿರುವ ಕೋಪ, ತಾಪದ ಬಗ್ಗೆ ಹೋಗುವವರ ಬರುವವರ ಮುಂದೆ ಹೇಳಿಕೊಳ್ಳುತ್ತಾ ಇದ್ದರೆ, ಅದರಷ್ಟು ದೊಡ್ಡ ಮುಠ್ಠಾಳತನ  ಬೇರೆ ಯಾವುದೂ ಇರುವುದಕ್ಕೇ ಸಾಧ್ಯವೇ ಇಲ್ಲ. ಹಾಗೇನಾದರು  ಮಾಡಿದರೆ ನಿಮ್ಮಿಬ್ಬರ ಮದ್ಯೆ ಇರುವ ನಂಬಿಕೆ, ವಿಶ್ವಾಸವನ್ನು ಅಳಿಸಿ ಹಾಕಿ ಬಿಡುತ್ತದೆ. ನಿಮ್ಮಿಬ್ಬರ ಮಧ್ಯೆ ಇರುವ ಪ್ರೀತಿ, ಪ್ರೇಮಕ್ಕೆ ಸಂಬಂಧ ಪಟ್ಟಿರೋ ಖಾಸಗಿ ವಿಷಯಗಳನ್ನು ಗುಟ್ಟಾಗಿ ಇರಿಸುವ ಬಗ್ಗೆ ನಿಮ್ಮ ಸಂಗಾತಿ ನಿಮ್ಮನ್ನು ನಂಬಿಕೊಂಡಿರುತ್ತಾರೆ ಆ  ನಂಬಿಕೆಯನ್ನು ನೀವು ಹಾಳು ಮಾಡಿಕೊಂಡರೆ ಆಮೇಲೆ ಅದನ್ನು ಸರಿಪಡಿಸುವುದು ತುಂಬಾನೇ ಕಷ್ಟ ಆಗುತ್ತದೆ.

 

4. ನಿಮ್ಮ ಇಬ್ಬರ ಸಂಪ್ರದಾಯಗಳು, ಪೂಜೆ, ಪುನಸ್ಕಾರಗಳು ನಿಮ್ಮನ್ನು ಇನ್ನಷ್ಟು ಹತ್ತಿರ ತರುವ ಹಾಗೆ ಇರಲಿ.

 

ಒಂದು  ಜೋಡಿಯಾಗಿ ಇದ್ದುಕೊಂಡು ನೀವಿಬ್ಬರೂ ಒಟ್ಟಿಗೆ ಪಾಲಿಸಿಕೊಂಡು ಹೋಗಬೇಕಾದ ಕೆಲವು ಸಂಪ್ರದಾಯಗಳು, ಹಾಗೆಯೇ ಕೆಲವು ಕಟ್ಟಳೆಗಳು ಅಳವಡಿಸಿಕೊಂಡಿರುವುದು  ಬಹಳ ಮುಖ್ಯ. ಈ ತರ ಮಾಡಿದರೆ ಒಂದು ಭದ್ರವಾದ ಅಡಿಪಾಯವನ್ನು ನಿಮಗೆ ನೀವೇ ಹಾಕಿಕೊಂಡ ಹಾಗೆ ಆಗುತ್ತದೆ .

 

 

5.ಎಲ್ಲದಕ್ಕೂ ಸರಿಯಾದ ಕಾಲ ಅಂತ  ಇರುತ್ತದೆ ತಾಳ್ಮೆ ಇರಲಿ.

 

ಒಬ್ಬರ ಮೇಲೆ ಇನ್ನೊಬ್ಬರು ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ ಅದೇ ನಿರೀಕ್ಷೆ ಕೈಗೆಟುಕುವಂತಿರಲಿ. ಹಾಗೆಯೇ ಸಂದರ್ಭಕ್ಕೆ ಸರಿಯಾಗಿ ಇದ್ದರೆ, ಸಂಬಂಧಕ್ಕೆ ಬಹಳ ಬೆಲೆ ಬರುತ್ತದೆ . ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳುವುದು  ತೃಪ್ತಿ ಕೂಡ ಸಿಗುತ್ತದೆ .

 

 

6.ನಿಮ್ಮ ಸಂಗಾತಿ ಎಂಥವರು ಅನ್ನುವುದು ಗೊತ್ತಾಗಬೇಕು ಎಂದರೆ ಆದಷ್ಟು ಅವರ ಮನೆತನದ ಬಗ್ಗೆ  ಮೊದಲು ತಿಳಿದುಕೊಳ್ಳಿ.

 

ಮದುವೆ ಮುಂಚೆ ನಿಮ್ಮ ಸಂಗಾತಿಯ ಕುಟುಂಬದ ಬಗ್ಗೆ ಹೇಗಾದರೂ ಮಾಡಿ ಆದಷ್ಟು ಜಾಸ್ತಿ ತಿಳಿದು ಕೊಳ್ಳುವುದಕ್ಕೆ ಪ್ರಯತ್ನ ಮಾಡಿ. ನಿಮ್ಮ ಸಂಗಾತಿ ಹುಟ್ಟಿ ಬೆಳೆದಿರುವ ಆ ಕುಟುಂಬದ ಬಗ್ಗೆ ನೀವು ಎಷ್ಟು ತಿಳಿದುಕೊಳ್ಳುತ್ತೀರಿ, ಅಷ್ಟರ ಮಟ್ಟಿಗೆ ಅವರ ಸಂಸ್ಕಾರ ಯಾವ ರೀತಿಯದ್ದು ಎನ್ನುವುದೆಲ್ಲ ನಿಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ.

 

 

7. ಯಾವುದೇ ಸಮಯದಲ್ಲಿ ಯಾವುದೇ ವಿಚಾರದಲ್ಲೂ ನಿಮ್ಮಿಬ್ಬರ ಮಧ್ಯೆಯೇ ಮುಚ್ಚುಮರೆ ಮಾಡಬೇಡಿ.

 

ವಿಷಯ ವಿಚಾರಗಳನ್ನು ಯಾವಾಗಲೂ ನೀವೇ ತಪ್ಪಾಗಿ ಅರ್ಥ ಮಾಡಿಕೊಳ್ಳುವಂತಹ ಎಡವಟ್ಟನ್ನು ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ನಿಮ್ಮ ಇಬ್ಬರ ಮಧ್ಯೆ ಪ್ರಣಯ, ಪ್ರೀತಿ ಎಲ್ಲವೂ ಇರಬೇಕಾದದ್ದೇ, ಒಪ್ಪಿಕೊಳ್ಳೋಣ ಹಾಗೆಂದು ಅದನ್ನು ವಿಪರೀತವಾಗಿ ಎಲ್ಲೆಂದರಲ್ಲಿ ತೋರಿಸಿಕೊಳ್ಳುವುದಕ್ಕೆ ಹೋಗಬೇಡಿ. ಅತಿಯಾದ ವಯ್ಯಾರ ಬೇಡ, ನಿಮಗೆ ನೀವೇ ಪ್ರಾಮಾಣಿಕರಾಗಿರಿ ಮತ್ತು ಹಾಗೆಯೇ ನಿಮ್ಮ ಸಂಗಾತಿಯ ವಿಚಾರದಲ್ಲೂ ನೀವು ಅಷ್ಟೇ ಪ್ರಾಮಾಣಿಕವಾಗಿರುವುದು ಮುಖ್ಯ.

 

8. ಅವತ್ತಿನ ಜಗಳಗಳನ್ನು ಅವತ್ತೇ ಇತ್ಯರ್ಥ ಮಾಡಿಕೊಳ್ಳಿ.

 

ಬಹಳಷ್ಟು ಜೋಡಿಗಳು ಈ ವಿಷಯವನ್ನು ಈಗೀಗ ಹಗುರವಾಗಿ ತೆಗೆದುಕೊಂಡು ಆಮೇಲೆ ಪಶ್ಚಾತ್ತಾಪವನ್ನು ಪಡುತ್ತಾರೆ.ಸಂಗಾತಿಗಳ ಮಧ್ಯೆ ಮಾರಾಮಾರಿ ಜಗಳಗಳು ಶುರುವಾಗುವುದು ಎಂದರೆ ಇಬ್ಬರನ್ನು ಅಥವಾ ಇಬ್ಬರಲ್ಲಿ ಯಾರಾದರೂ ಒಬ್ಬರಾದರೂ ಹೇಗಾದರೂ ಮಾಡಿ ನಿಮ್ಮ ಜಗಳಕ್ಕೊಂದು ಪರಿಹಾರ ಕಂಡುಕೊಳ್ಳಬೇಕು. ಇಲ್ಲ ಯಾವುದಾದರೂ ಒಂದು ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಯಾವಾಗಲೂ ಒಳ್ಳೆಯದು.

 

 

 

 

9. ಮುರಿದು ಹೋಯಿತು, ಹರಿದು ಹೋಯಿತು, ಎಂದ ಮಾತ್ರಕ್ಕೆ ಎಸೆಯಬೇಡಿ ಮತ್ತೆ ಜೋಡಿಸುವುದಕ್ಕೆ ಪ್ರಯತ್ನ ಮಾಡಿ.

ಒಂದೊಂದು ಸಲ ಪರಿಸ್ಥಿತಿ ಎನ್ನುವುದು ಯಾವ ಮಟ್ಟದ ವಿಕೋಪಕ್ಕೆ ಹೋಗಬಹುದು ಎಂದರೆ  ನಿಮ್ಮಿಬ್ಬರಿಗೂ ಎಂದಿಗೂ ಒಟ್ಟಾಗಿ ಬಾಳುವ ಹಾಗೆ ಮಾಡುವುದಕ್ಕೆ ಸಾಧ್ಯಾನೇ ಇಲ್ಲ. ಅನ್ನಿಸುವಷ್ಟರ ಮಟ್ಟಿಗೆ ಇದ್ದರೆ ಅಂಥ ಸಮಯದಲ್ಲೇ ಬಹಳ ತಾಳ್ಮೆ ಬೇಕು. ತಾಳಿದವನು ಬಾಳಿಯಾನು ಎನ್ನುವ ಗಾದೆ ಮಾತಿನ ಹಾಗೆ ಇಬ್ಬರೂ ಒಟ್ಟಿಗೆ ಕುಳಿತು ಚರ್ಚೆ ಮಾಡಿ ಮನಸ್ಥಾಪವನ್ನು ಬಗೆಹರಿಸಿಕೊಳ್ಳೋಕೆ ಮುಂದಾಗಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top