ಆರೋಗ್ಯ

ಶಮೀ ಪತ್ರೆ( ಬನ್ನಿ)ಯ ಅನೇಕ ಆರೋಗ್ಯಕರ ಲಾಭಗಳು!!

ಬನ್ನಿ/ ಶಮೀ ಪತ್ರೆಯು ದಸರಾ ಹಬ್ಬದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.

 

ಒಬ್ಬರಿಗೊಬ್ಬರು “ಬನ್ನಿ’ ಕೊಟ್ಟು ಬಂಗಾರದ ಹಾಗಿರೋಣ ಎಂಬ ನಾಣ್ನುಡಿ ಜನ ಪ್ರಸಿದ್ಧಿಯಾಗಿದೆ.
ವಿಜಯದಶಮಿಯಂದು ಮೈಸೂರು ಮಹಾರಾಜರು ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದು ಮಹತ್ತರ ಸಂಪ್ರದಾಯವಾಗಿ ಬೆಳೆದು ಬಂದಿದೆ. ಧಾರ್ಮಿಕ ದೃಷ್ಟಿ ಇಂದಲ್ಲದೆ ಅರೋಗ್ಯದ ದೃಷ್ಟಿಯಲ್ಲೂ ಸಹ ಬನ್ನಿ ಮರವು ಮಹತ್ವವನ್ನು ಪಡೆದಿದೆ.

 

Image result for banni tree

 

ಔಷಧೀಯ ಗುಣಗಳು:
೧)ಮೂಲವ್ಯಾಧಿಯಿಂದ ಬಳಲುವವರು ಬನ್ನಿಯ ಎಲೆಯ ಕಷಾಯವನ್ನು ತಣ್ಣೀರಿನ ಟಬ್ಬಿನಲ್ಲಿ ಹಾಕಿ ಅದರಲ್ಲಿ ಕುಳಿತುಕೊಳ್ಳಬೇಕು.

 

Image result for water tub

 

೨)ಮುಖದ ಮೇಲೆ ಅನಗತ್ಯ ರೋಮವು ಬೆಳೆಯುತ್ತಿದ್ದರೆ ಬನ್ನಿಕಾಯಿಯನ್ನು ನೀರಿನಲ್ಲಿ ತೇದು ಲೇಪಿಸುತ್ತಿದ್ದಲ್ಲಿ ಬೆಳವಣಿಗೆ ತಗ್ಗುತ್ತದೆ.

 

೩) ಬನ್ನಿ ತೊಗಟೆಯ ಕಷಾಯವು ಭೇದಿ, ಕೆಮ್ಮು, ತಲೆಸುತ್ತು, ಚರ್ಮರೋಗ, ರಕ್ತಸ್ರಾವ, ಜಂತುಹುಳಗಳ ತೊಂದರೆಗೆ ಉಪಯುಕ್ತ.

 

Image result for cough and headache

 

೪) ಬನ್ನಿಯ ಕಾಯಿ ಪಿತ್ತ ವೃದ್ಧಿ ಮಾಡುವುದಲ್ಲದೆ ಮೆದುಳಿನ ಟಾನಿಕ್ ಆಗಿ ಕೆಲಸ ಮಾಡುತ್ತದೆ.

 

೫) ಬನ್ನಿ ಮರದ ತೊಗಟೆ ಕಷಾಯ ರುಮಾಟಿಸಂ ಇಂದ ಬಳಲುತ್ತಿರುವವರಿಗೆ ಉತ್ತಮ.

 

೬) ಬನ್ನಿ ಮರದ ಹೂವುಗಳನ್ನು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಿದರೆ ಗರ್ಭಪಾತವನ್ನು ತಡೆಗಟ್ಟಬಹುದು.

 

೭) ತೊಗಟೆಯನ್ನು ಪುಡಿ ಮಾಡಿ ಪೇಸ್ಟನ್ನು ಚೇಳು ಕಡಿದ ಜಾಗಕ್ಕೆ ಹಚ್ಚಿದರೆ ವಿಷ ಪ್ರಭಾವ ಕಡಿಮೆಯಾಗುತ್ತದೆ.

 

Image result for scorpion

 

೮)ತೊಗಟೆ ಪುಡಿಯನ್ನು ಅರಿಶಿನ ಮತ್ತು ಹಾಲಿನೊಂದಿಗೆ ಬೆರೆಸಿ ಮೈಗೆ ಹಚ್ಚಿದ್ದಲ್ಲಿ ಚರ್ಮ ಕಾಂತಿಯುಕ್ತವಾಗುತ್ತದೆ.

 

೯) ತೊಗಟೆಯ ಕಷಾಯ ಆಮಶಂಕೆ, ಭೇದಿಗೆ ಉತ್ತಮ ಔಷಧಿ.

 

೧೦) ತೊಗಟೆ ಕಷಾಯದಿಂದ ಬಾಯಿ ಮುಕ್ಕಳಿಸಿದ್ದಲ್ಲಿ ಗಂಟಲು ನೋವು ಹಾಗು ಹಲ್ಲು ನೋವು ಪರಿಹಾರವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top